ತನಗೆ ಹುಡುಗಿ ಕೊಡುವುದಿಲ್ಲ ಎಂದು ಮ-ನನೊಂದು ಜೀವವನ್ನು ಕೊನೆಗಾಣಿಸಿಕೊಂಡ ಯುವಕ, ಕೇಳಿದ್ರೆ ಅಯ್ಯೋ ಹೇಳ್ತೀರಾ!

ಇತ್ತೀಚೆಗಿನ ದಿನಗಳಲ್ಲಿ ಮದುವೆಯಾಗಲು ಯುವಕರಿಗೆ ಯುವತಿಯರೇ ಸಿಗುತ್ತಿಲ್ಲ. ಅದರಲ್ಲಿಯೂ ಮದುವೆಯಾಗುವ ಹುಡುಗಿಯರು ಹುಡುಗನ ಎಲ್ಲಾ ಹಿನ್ನಲೆಯನ್ನು ನೋಡಿಕೊಂಡು ಹುಡುಗರ ಮುಂದೆ ಸಾಕಷ್ಟು ಬೇಡಿಕೆಯನ್ನು ಇಡುತ್ತಾರೆ. ಇದಕ್ಕೆ ಒಪ್ಪಿದರೆ ಆ ಹುಡುಗನಿಗೆ ಮದುವೆ ಭಾಗ್ಯ. ಇಲ್ಲದಿದ್ದರೆ ಸಾಲು ಸಾಲು ಹುಡುಗಿಯರ ಕೈಯಲ್ಲಿ ರಿಜೆಕ್ಟ್ ಆಗಬೇಕು.

ಅದಲ್ಲದೆ ಹುಡುಗಿಯರ ಸಂಖ್ಯೆಯೂ ಕಡಿಮೆಯಾಗಿರುವ ಕಾರಣ ಹುಡುಗರಿಗೆ ಮದುವೆಯಾಗುವುದು ಕಷ್ಟವಾಗಿದೆ. ಆದರೆ ಇಲ್ಲೊಬ್ಬ ಯುವಕನು ಮದುವೆಯ ವಿಚಾರಕ್ಕೆ ಮ-ನನೊಂದು ಜೀ-ವ ಕಳೆದುಕೊಂಡಿರುವ ಘಟನೆಯೊಂದು ನಡೆದಿದೆ.

ಕೂಡ್ಲಿಗಿ ತಾಲೂಕಿನ‌ ಗುಡೇಕೋಟೆ ಗ್ರಾಮ (Gudekote village of Kudligi taluk)ದಲ್ಲಿ ಯುವಕನೊಬ್ಬ ಮದುವೆಯಾಗಲು ಯುವತಿ ಸಿಗಲಿಲ್ಲ ಎನ್ನುವ ಕಾರಣಕ್ಕೆ ವಿ-ಷ ಸೇವಿಸಿ ಜೀವ ಕಳೆದುಕೊಂಡಿರುವ ಘಟನೆಯೊಂದು ನಡೆದಿದೆ. ಗುಡೇಕೋಟೆ ಗ್ರಾಮದ 26 ವರ್ಷದ ಬಿ.‌ಮಧುಸೂದನ್ (B Madhusudhan) ಎಂದು ಗುರುತಿಸಲಾಗಿದೆ.

ಈತನ ತಂದೆಯೂ ತಂದೆ ಅರೆ ಹು-ಚ್ಚನ ಹಾಗೆ ವರ್ತನೆ ಮಾಡುತ್ತಾನೆ ಎನ್ನುವ ಕಾರಣಕ್ಕೆ ಈತನಿಗೆ ಹುಡುಗಿ ಕೊಡಲು ಯಾರು ಮುಂದೆ ಬರುತ್ತಿರಲಿಲ್ಲ. ಹುಡುಗಿ ನೋಡಲು ಹೋದರೂ ಕೂಡ ಹುಡುಗಿಯ ಮನೆಯವರು ಈತನನ್ನು ನಿರಾಕರಿಸುತ್ತಿದ್ದರು. ಇದರಿಂದ ತೀ-ರಾ ಮನನೊಂದಿದ್ದ ಈತನು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದನು.

ನನಗೆ ಮದುವೆ ಅಗಲ್ಲ ಎಂದು ಮಧುಸೂದನ್ ವಿ-ಷ ಸೇವಿಸಿ ಜೀವ ಕಳೆದುಕೊಂಡಿದ್ದಾನೆ. ವಿ-ಷ ಸೇವಿಸಿದ ಯುವಕ ಮಧುಸೂಧನ್​​ನನ್ನು ತಕ್ಷಣವೇ ಬಳ್ಳಾರಿಯ ವಿಮ್ಸ್​​ ಆಸ್ಪತ್ರೆಗೆ (Wims Hospital, Bellary) ದಾಖಲು ಮಾಡಿದೆಯಾದರೂ ಕೂಡ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ.

ಈ ಘಟನೆಗೆ ಸಂಬಂಧ ಪಟ್ಟಂತೆ ಗುಡೇಕೋಟೆ ಪೊಲೀಸ್ ಠಾಣೆ (Gudekote Police Station) ಯಲ್ಲಿ‌ ಈ ಪ್ರಕರಣ ದಾಖಲು ಮಾಡಲಾಗಿದೆ. ಈ ಘಟನೆಯನ್ನು ನೋಡಿದಾಗ ಬದುಕಿ ಬಾಳ ಬೇಕಾಗಿರುವ ಯುವಕ ಯುವತಿಯರು ಸಣ್ಣ ಪುಟ್ಟ ಕಾರಣಗಳಿಂದ ಜೀವವನ್ನು ಕಳೆದುಕೊಳ್ಳುತ್ತಿರುವುದು ವಿಪರ್ಯಾಸವಲ್ಲದೇ ಮತ್ತೇನು ಅಲ್ಲವೇ.

Leave a Reply

Your email address will not be published. Required fields are marked *