ಮಾಲ್ ನಲ್ಲಿ ಪ್ರಿಯಕರ ಜೊತೆಗೆ ಸುತ್ತಾಟ, ಪತಿಯ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಮಹಿಳೆ, ವಿಡಿಯೋ ವೈರಲ್ ಇಲ್ಲಿದೆ ನೋಡಿ!!

ಸತಿ ಪತಿಯರ ಸಂಬಂಧಕ್ಕೆ ಭಾರತೀಯರು ವಿಶೇಷವಾದ ಮಹತ್ವವನ್ನು ನೀಡುತ್ತಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಸತಿಪತಿಯರ ಸಂಬಂಧಗಳಲ್ಲಿ ಬಿ-ರುಕುಗಳು ಮೂಡುತ್ತಿವೆ. ಈಗಾಗಲೇ ದಾಂಪತ್ಯ ಜೀವನವು ಮು-ರಿದು ಬಿದ್ದಿರುವುದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಸುತ್ತ ಮುತ್ತಲಿನಲ್ಲಿದೆ. ಇದೀಗ ಪತಿಯ ಕೈಯಲ್ಲಿ ಪತ್ನಿಯೊಬ್ಬಳು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆಯೊಂದು ನಡೆದಿದೆ.

ಹೌದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪತ್ನಿಯೊಬ್ಬಳು ತನ್ನ ಗಂಡನಿಗೆ ವಂ-ಚನೆ ಮಾಡುವಾಗ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದಿದ್ದಾಳೆ. ಈ ವಿಡಿಯೋವೊಂದನ್ನು ಶೋನೀಕಪೂರ್​ (Shoni Kapoor) ಎಂಬುವರು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ಈ ವಿಡಿಯೋ 2 ಕೋಟಿ 90 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

ಈ ವಿಡಿಯೋದಲ್ಲಿ ಮಾಲ್​ (Mall) ಒಂದರಲ್ಲಿ ಮಹಿಳೆಯೊಬ್ಬಳು ವ್ಯಕ್ತಿಯೊಬ್ಬನ ಕೈಹಿಡಿದು ಸಾಗುತ್ತಿರುತ್ತಾಳೆ. ಆತ ಆಕೆಯ ಬಾಯ್​ಫ್ರೆಂಡ್​ ಎನ್ನುವುದು ತಿಳಿಯುತ್ತದೆ. ಈ ವೇಳೆಯಲ್ಲೂ ಹಿಂದಿನಿಂದ ಮಹಿಳೆಯ ಪತಿ ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡ್​ (Record) ಮಾಡಿಕೊಂಡು ಬರುತ್ತಿರುತ್ತಾನೆ. ಹೀಗಿರುವಾಗ ಮಹಿಳೆ ಮತ್ತು ಬಾಯ್​ಫ್ರೆಂಡ್​ ಶಾಪ್​ ಒಂದರ ಮುಂದೆ ನಿಂತುಕೊಂಡಾಗ ವಿಡಿಯೋ ರೆಕಾರ್ಡ್​ ಮಾಡುತ್ತಿರುವುದನ್ನು ಮಹಿಳೆಗೆ ಬೇರೊಬ್ಬರು ಹೇಳುತ್ತಾರೆ.

ಆಕೆ ಹಿಂದೆ ತಿರುಗಿ ನೋಡಿದಾಗ ವಿಡಿಯೋ ಮಾಡುತ್ತಿರುವುದು ತನ್ನ ಗಂಡನೆಂದು ಗೊತ್ತಾಗುತ್ತದೆ. ಈ ವೇಳೆಯಲ್ಲಿ ಪತಿಯ ಕೈಯಲ್ಲಿ ಮಹಿಳೆ ಹಾಗೂ ಆಕೆಯ ಪ್ರಿಯಕರ ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದಾರೆ. ಅದಲ್ಲದೇ ಈ ವಿಡಿಯೋದಲ್ಲಿ ಮೊದಲಿಗೆ ತನ್ನ ಜೊತೆಗೆ ಇರುವ ವ್ಯಕ್ತಿ ಫ್ರೆಂಡ್​ ಎಂದು ಪತಿಯ ಜೊತೆಗೆ ವಾ-ದ ಮಾಡುತ್ತಾಳೆ.

ಆದರೆ ಇಬ್ಬರು ಕೈ ಕೈ ಹಿಡಿದು ಸುತ್ತಾಡಿರುವುದನ್ನು ರೆಕಾರ್ಡ್​ ಮಾಡಿರುವುದನ್ನು ಗಂಡ ತಿಳಿಸಿದಾಗ ಮಹಿಳೆಯು ಕೋ-ಪ ಗೊಂಡಿದ್ದಾಳೆ. ಕೊನೆಗೆ ಮಹಿಳೆ ಮೊಬೈಲ್​ ಕಿತ್ತುಕೊಂಡು ಗಂಡನ ಮೇಲೆ ಹ-ಲ್ಲೆ ಮಾಡಲು ಮುಂದಾಗಿದ್ದಾಳೆ. ಕೊನೆಗೆ ಮಾಲ್ ನಲ್ಲಿ ಈ ಇಬ್ಬರೂ ನಡುವಿನ ಮಾತಿನ ಚಕಮಕಿ ಜೋರಾಗುತ್ತಾ ಹೋಗುತ್ತದೆ.

ಈ ವೇಳೆಯಲ್ಲಿ ಅಕ್ಕಪಕ್ಕದಲ್ಲಿದ್ದವರು ಅಲ್ಲಿ ಸೇರಿದ್ದು, ಈ ಜಗಳವನ್ನು ನೋಡುತ್ತಾ ನಿಂತುಕೊಳ್ಳುತ್ತಾರೆ. ಕೋರ್ಟಿಗೆ ಬಾ ಡಿವೋರ್ಸ್​ ಕೊಡುತ್ತೇನೆ ಎಂದು ಗಂಡ ಹೇಳುತ್ತಾನೆ. ಪತ್ನಿ ಕೂಡ ತನಗೆ ಏನು ಬೇಕೋ ಅದನ್ನು ಮಾಡುತ್ತೇನೆ ಎಂದು ಡೈವೋರ್ಸ್ ನೀಡುವ ಹೇಳುತ್ತಾಳೆ. ಕೆಲವು ದಿನಗಳವರೆಗೆ ತಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಳು ಎಂದು ಪತ್ನಿಯ ವಿರುದ್ಧ ಪತಿ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೇ ಸಂಬಂಧಿಕರ ಇಚ್ಛೆಗೆ ವಿರುದ್ಧವಾಗಿ ವಿವಾಹವಾಗಿರುವುದು ಸ್ಪಷ್ಟವಾಗಿ ತಿಳಿಯುತ್ತದೆ.

ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗನೊಬ್ಬನು, ‘ಗಂಡ ವಿಪರೀತ ನಿಂದನೀಯ ಭಾಷೆ ಬಳಸಿದ್ದಾರೆ. ಆದರೆ ಹೆಂಡತಿ ಪರಪುರುಷನೊಂದಿಗೆ ಸುತ್ತಾಡುವುದನ್ನು ಕಣ್ಣಾರೆ ಕಂಡ ಪತಿ ತನ್ನ ಹತಾಶೆಯನ್ನು ಹೊರತೆಗೆಯುವುದನ್ನು ಬಿಟ್ಟು ಬೇರೆ ಏನು ಮಾಡುತ್ತಾನೆ? ಬೇರೆ ಹೆಣ್ಣಿನ ಜೊತೆ ಗಂಡ ಸಿಕ್ಕಿಬಿದ್ದಾಗ ಪತ್ನಿ ತನ್ನ ಗಂಡನಿಗೆ ಹೊಡೆಯುವುದನ್ನು ನೋಡಿದ್ದೇವೆ’ ಎಂದು ಪ್ರತಿಕ್ರಿಯೆ ನೀಡಿದ್ದಾನೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *