ಮಕ್ಕಳಿಗೆ ಬುದ್ಧಿ ಮಾತು ಹೇಳುತ್ತಿದ್ದಂತೆ ಕುಸಿದು ಬಿದ್ದ ಶಿಕ್ಷಕಿ, ಮುಂದೆ ಆಗಿದ್ದೇನು ಗೊತ್ತಾ? ಕೇಳಿದ್ರೆ ಅಯ್ಯೋ ಹೇಳ್ತೀರಾ!

ಬದುಕು ಯಾವಾಗ ಹೇಗೆ ಕೊನೆಗೊಳ್ಳುತ್ತದೆ ಎಂದು ಹೇಳುವುದು ಕಷ್ಟ. ಈಗ ನಮ್ಮ ಜೊತೆಗೆ ಖುಷಿಯಿದ್ದ ಇದ್ದವರು ಇನ್ನು ಐದು ನಿಮಿಷದಲ್ಲಿ ಇರುತ್ತಾರೋ ಇಲ್ಲವೋ ಎನ್ನುವುದನ್ನು ಹೇಳುವುದನ್ನು ಕಷ್ಟ. ಅಂತಹದ್ದೇ ಒಂದು ಘಟನೆಯು ಕೇರಳದ ಚಲಕುಡಿ (Kerala Chalakudi) ಯಲ್ಲಿ ನಡೆದಿದೆ. ಶಾಲೆಯಲ್ಲಿ ಮಕ್ಕಳ ಜೊತೆಗೆ ಬೆರೆಯುತ್ತಿದ್ದ, ಮಕ್ಕಳಿಗೆ ಬುದ್ಧಿ ಮಾತು ಹೇಳುತ್ತಿದ್ದ ಶಿಕ್ಷಕಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಕು-ಸಿದು ಬಿದ್ದಿದ್ದಾರೆ.

ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾದರೂ ಏನು ಪ್ರಯೋಜನವಾಗಲಿಲ್ಲ. ಹೌದು, ಮೃತ ಶಿಕ್ಷಕಿಯನ್ನು ನಲವತ್ತೊಂದು ವರ್ಷದ ರಮ್ಯಾ ಜೋಸ್​ (Ramya Jos) ಎನ್ನಲಾಗಿದ್ದು ಅಂಗಮಾಲಿ ಮೂಲದವರಾದ ಇವರು ಕೊರಟ್ಟಿಯಲ್ಲಿರುವ ಎಲ್​ಎಫ್​ಸಿಎಚ್​ಎಸ್​ ಶಾಲೆ (LFCHS School) ಯಲ್ಲಿ ಗಣಿತ ಶಿಕ್ಷಕಿಯಾಗಿ ಮಕ್ಕಳಿಗೆ ತೀರಾ ಆಪ್ತರಾಗಿದ್ದರು. ಮಕ್ಕಳ ಏಳಿಗೆಯನ್ನು ಬಯಸುತ್ತಾ ಮಕ್ಕಳಿಗೆ ಬುದ್ಧಿ ಮಾತು ಹೇಳುತ್ತಿದ್ದ ಶಿಕ್ಷಕಿಯು ಕೊನೆಯ ಕ್ಷಣದಲ್ಲಿಯು ಇದೇ ಮಾತನ್ನು ಹೇಳಿದ್ದಾರೆ.

ಸಮಾರಂಭದಲ್ಲಿ ಮಾತನಾಡಲು ಶುರು ಮಾಡಿದ ಶಿಕ್ಷಕಿ ರಮ್ಯಾ, “ನಾನು ಹೇಳಲು ಬಯಸುವ ಕೊನೆಯ ವಿಷಯವೆಂದರೆ ಇಂದಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದವರು ನೀವೇ. ನಿಮ್ಮನ್ನು ಸರಿಪಡಿಸಲು ಯಾರೂ ಇರುವುದಿಲ್ಲ. ಯಾವುದು ಸರಿ? ಯಾವುದು ತಪ್ಪು?ಎನ್ನುವುದನ್ನು ಪತ್ತೆಹಚ್ಚಬೇಕು. ಜೀವನದಲ್ಲಿ ತಂದೆ-ತಾಯಿ, ಗುರುಗಳು ಕಣ್ಣೀರು ಸುರಿಸುವಂತೆ ಮಾಡಬೇಡಿ” ಎಂದಿದ್ದಾರೆ.

ಆ ಬಳಿಕ ಕು-ಸಿದು ಬಿದ್ದ ರಮ್ಯಾರವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ರಮ್ಯಾರವರು ನಿನ್ನೆ ಮಧ್ಯಾಹ್ನ 1 ಗಂಟೆಯ ವೇಳೆ ಕೊ-ನೆಯಿಸಿರೆಳೆದಿದ್ದಾರೆ. ರಮ್ಯಾರವರು ಕುಸಿದು ಬೀಳುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಶಾಲೆಯ ವಾರ್ಷಿಕೋತ್ಸವ (School Day) ದ ವೇಳೆ ರಮ್ಯಾ ಅವರು ಇದೇ ರೀತಿ ಕು-ಸಿದು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೊನೆಗೆ ಪರೀಕ್ಷೆ ಮಾಡಿದ ವೈದ್ಯರು ಯಾವುದೇ ಸಮಸ್ಯೆ ಇಲ್ಲ ಎಂದಿದ್ದರು. ಆದರೆ ಏಕಾಏಕಿ ಶಿಕ್ಷಕಿಯು ಕುಸಿದು ಬಿದ್ದು ಸಾ-ವನ್ನಪ್ಪಿದ್ದು ಮಕ್ಕಳಿಗೆ ಹಾಗೂ ಶಿಕ್ಷಕ ವರ್ಗಕ್ಕೆ ಅರಗಿಸಿಕೊಳ್ಳಲು ಕಷ್ಟವಾಗಿದೆ. ಶಿಕ್ಷಕಿ ರಮ್ಯಾ ಅ-ಗಲುವಿಕೆಗೆ ವಿದ್ಯಾರ್ಥಿಗಳು ಮತ್ತು ಶಾಲಾ ಆಡಳಿತ ಮಂಡಳಿಯವರು ಕಂ-ಬನಿ ಮಿಡಿದಿದೆ

Leave a Reply

Your email address will not be published. Required fields are marked *