ಲೂಸ್ ಮಾದ ಯೋಗಿಯವರ ಬರ್ತ್ಡೇ ಸೆಲೆಬ್ರೇಶನ್ ವೇಳೆ ಪತ್ನಿ ಜೊತೆಗೆ ತೆಗೆದ ಫೋಟೋ ವೈರಲ್, ಆ ಫೋಟೋಸ್ ಹೇಗಿತ್ತು ಗೊತ್ತಾ?

ಸ್ಯಾಂಡಲ್​ವುಡ್​ನಲ್ಲಿ ಲೂಸ್ ಮಾದ ಎಂದೇ ಖ್ಯಾತರಾಗಿರುವ ನಟ ಯೋಗೇಶ್ (Yogesh) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ವೃತ್ತಿ ಜೀವನದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಲೂಸ್ ಮಾದ ಯೋಗಿಯವರು ಆಗಾಗ ಮುದ್ದಿನ ಮಗಳ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತ ವೃತ್ತಿ ಜೀವನದ ಜೊತೆಗೆ ವೈವಾಹಿಕ ಜೀವನಕ್ಕೂ ಅಷ್ಟೇ ಮಹತ್ವ ನೀಡುತ್ತಾರೆ.

2017 ನವೆಂಬರ್ 2ರಂದು ಸಾಹಿತ್ಯ (Sahitya) ಳ ಜೊತೆಗೆ ಯೋಗಿ (Yogi) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಯೋಗಿ ಹಾಗೂ ಸಾಹಿತ್ಯರವರದ್ದು ಪಕ್ಕಾ ಲವ್ ಮ್ಯಾರೇಜ್ ( Love Marriage). ಯೋಗಿಯವರ ಬಾಲ್ಯದ ಗೆಳತಿಯನ್ನು ಮದುವೆಯಾಗಿದ್ದು, ಇವರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಮುದ್ದಿನ ಮಗಳು ಶ್ರೀನಿಕಾ (Shreenika) ಕೂಡ ಇದ್ದಾಳೆ. ಇದೀಗ ಲೂಸ್ ಮಾದ ಯೋಗೀಶ್ ಅವರ ಫ್ಯಾಮಿಲಿಯ ಫೋಟೋವೊಂದು ವೈರಲ್ ಆಗಿವೆ.

ಇದೇ ಜುಲೈ 6 ರಂದು ಲೂಸ್ ಮಾದ ಯೋಗಿ ತಮ್ಮ 33ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಕುಟುಂಬಸ್ಥರು ಹಾಗೂ ಆತ್ಮೀಯರೊಂದಿಗೆ ಯೋಗಿ ತಮ್ಮ ಬರ್ತ್‌ಡೇ (Birthday) ಯನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿಕೊಂಡಿದ್ದು, ಈ ಬರ್ತ್ಡೇ ಸೆಲೆಬ್ರೇಶನ್ ಫೋಟೋಗಳು ವೈರಲ್ ಆಗಿವೆ. ಈ ಫೋಟೋದಲ್ಲಿ ನಟ ಯೋಗಿ ಹಾಗೂ ಸಾಹಿತ್ಯ ಬ್ಲಾಕ್ ಕಲರ್ ಡ್ರೆಸ್ ನಲ್ಲಿ ಮಿಂಚಿದ್ದು, ಇನ್ನಿತ್ತರ ಫೋಟೋಗಳು ಕೂಡ ಎಲ್ಲರ ಗಮನ ಸೆಳೆಯುತ್ತಿದೆ.

ನಿರ್ಮಾಪಕ ಟಿಪಿ ಸಿದ್ಧರಾಜ್ (TP Siddharaj) ಮತ್ತು ಅಂಬುಜಾ (Ambuja) ದಂಪತಿಗಳ ಪುತ್ರರಾಗಿರುವ ಅದು ಅಲ್ಲದೇ ನಟ ದುನಿಯಾ ವಿಜಯ್ (Duniya Vijay) ಅವರ ಸೋದರ ಸಂಬಂಧಿ ಕೂಡ ಹೌದು. ಲೂಸ್ ಮಾದ (Loose Mada) ಸಿನಿಮಾದ ನಂತರ, ನಂದ ಲವ್ಸ ನಂದಿತಾ ಸಿನಿಮಾದಲ್ಲಿ ಪೂರ್ಣವಾಗಿ ನಾಯಕನಾಗಿ ಕಾಣಿಸಿಕೊಂಡರು. ಇನ್ನು ರಾವಣ, ಪುಂಡ, ಯೋಗಿ ಮುಂತಾದ ಚಿತ್ರಗಳಲ್ಲಿ ನಟಿಸಿದಾದರೂ ಹೇಳಿ ಕೊಳ್ಳುವಷ್ಟು ಹೆಸರು ಹಾಗೂ ಯಶಸ್ಸು ದೊರೆಯಲಿಲ್ಲ. ಬಳಿಕ ಅಂಬಾರಿ, ಹುಡುಗರು, ಯಾರೇ ಕೂಗಾಡಲಿ, ಸಿದ್ಲಿಂಗು, ಅಲೆಮಾರಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ನಟ ಲೂಸ್ ಮಾದ ಯೋಗಿಯವರ ಮಗಳು ಶ್ರೀನಿಕಾ ಅಪ್ಪನಂತೆ ಫೇಮಸ್ ಆಗಿದ್ದಾಳೆ. ನಟ ಯೋಗೀಶ್ ಅವರು ತಮ್ಮ ಮಗಳ ಇನ್ಸ್ಟಾಗ್ರಾಮ್ ಖಾತೆಗೆ ಈಗಾಗಲೇ 200 ಕ್ಕೂ ಹೆಚ್ಚು ಫೋಟೋ ಹಾಗೂ ವಿಡಿಯೋ ಶೇರ್ ಮಾಡಿದ್ದಾರೆ. ಮುದ್ದು ಮಗಳು ಶ್ರೀನಿಕಾ ಖಾತೆಯಲ್ಲಿ 9000 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾಳೆ. ಇತ್ತ ನಟ ಲೂಸ್ ಮಾದ ಯೋಗಿಯವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು, ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ

Leave a Reply

Your email address will not be published. Required fields are marked *