ವಿದ್ಯುತ್‌ ತಂತಿ ತುಳಿದು ಜೀವ ಕಳೆದುಕೊಂಡ ತಾಯಿ ಮಗು, ಈ ಘಟನೆಯ ತನಿಖೆಯ ಬಳಿಕ ಅಸಲಿ ಕಾರಣ ಬಿಚ್ಚಿಟ್ಟ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ಹೇಳಿದ್ದೇನು ಗೊತ್ತಾ?

ಇತ್ತೀಚೆಗಿನ ದಿನಗಳಲ್ಲಿ ಸ್ವಲ್ಪ ಎ-ಚ್ಚರ ತಪ್ಪಿದರೂ ಕೂಡ ನಾನಾ ರೀತಿಯ ಅ-ನಾಹುತಗಳು ಸಂಭವಿಸಿ ಬಿಡುತ್ತದೆ. ಕಳೆದ ಒಂದೆರಡು ದಿನಗಳ ಹಿಂದೆಯಷ್ಟೇ ವಿದ್ಯುತ್‌ ತಂತಿ ತುಳಿದು ತಾಯಿ-ಮಗು ಸಾ-ವು ಪ್ರಕರಣದ ಬಗ್ಗೆ ಎಲ್ಲರಿಗೂ ಕೂಡ ತಿಳಿದಿದೆ. ಈ ಅ-ವಘಡಗಳ ಬಗ್ಗೆ ತ-ನಿಖೆ ಆರಂಭಿಸಿದ್ದ ಅಧಿಕಾರಿಗಳು ಪ್ರಾಥಮಿಕ ಮಾಹಿತಿಯನ್ನು ನೀಡಿದ್ದಾರೆ.

11 ಕೆವಿ ಎತ್ತರದಲ್ಲಿ ವಿದ್ಯುತ್‌ ಎಚ್‌ಟಿ ಮಾರ್ಗವು ಹಾದುಹೋದ ಸ್ವಲ್ಪ ದೂರದಲ್ಲಿಯೇ ಅಪಾರ್ಟ್‌ಮೆಂಟ್‌ ಇದೆ. ಅದು ಪ್ರತ್ಯೇಕ ಟ್ರಾನ್ಸ್‌ಫಾರ್ಮರ್‌ ಅಳವಡಿಸಿಕೊಂಡಿದೆ. ಅದಕ್ಕೆ ಪೂರಕವಾಗಿ 11 ಕೆವಿ ಮಾರ್ಗದ ಎಲ್‌ಬಿಎಸ್‌ ಲೋಡ್‌ ಬ್ರೇಕ್‌ ಸ್ವಿಚ್‌ ಯಿದ್ದು, ಅದಕ್ಕೆ ಇಲಿ ಬಾಯಿ ಹಾಕಿದೆ. ವೈರ್‌ಗಳನ್ನು ಕಚ್ಚಿದ್ದರಿಂದ ಶಾರ್ಟ್‌ ಸರ್ಕಿಟ್‌ ಆಗಿದೆ. ಇದರ ಪರಿಣಾಮವಾಗಿ ಎಚ್‌ಟಿ ಲೈನ್‌ನ ದು-ರ್ಬಲ ಪಾಯಿಂಟ್‌ನಲ್ಲಿ ತಂತಿ ತುಂಡಾಗಿ ಬಿದ್ದಿದೆ ಎಂದಿದ್ದಾರೆ.

ಎರಡು ದಿನಗಳ ಹಿಂದೆ ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಕಾಡುಗೋಡಿ (Kadugodi) ಯಲ್ಲಿ ಫುಟ್ ಪಾತ್ ಮೇಲೆ ನಡೆದು ಹೋಗುತ್ತಿದ್ದ ತಾಯಿ ಹಾಗೂ 9 ತಿಂಗಳ ಮಗು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಜೀ-ವ ಕಳೆದುಕೊಂಡಿದ್ದರು. ಈ ವೇಳೆಯೇ ಆಕೆಯ ಪತಿಗೆ ಸಣ್ಣಪುಟ್ಟ ಗಾ-ಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಬಗ್ಗೆ ಬೆಸ್ಕಾಂ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ (Mahantesha Bilagi) ಅವರು ಮಾಹಿತಿ ನೀಡಿದ್ದಾರೆ.

ಮಾಧ್ಯಮಗಳ ಮುಂದೆ ಮಾತನಾಡಿದ ಅವರು ಮಹಾಂತೇಶ ಬೀಳಗಿಯವರು, ಮೈತ್ರಿ ಲೇಔಟ್‌ನ ಔದುಂಬರ ಹೋಮ್ಸ್‌ ಅಪಾರ್ಟ್ ಮೆಂಟ್‌ನಲ್ಲಿ ಡಿಸ್ಟ್ರಿಬ್ಯೂಷನ್‌ ಟ್ರಾನ್ಸ್‌ಫಾರ್ಮರ್‌ ಬಾಕ್ಸ್‌ಗೆ ಇಲಿ ನುಗ್ಗಿದ್ದರಿಂದ ಶಾರ್ಟ್‌ ಸರ್ಕಿಟ್‌ ಸಂಭವಿಸಿದ್ದು, 11 ಕೆವಿ ಓವರ್‌ಹೆಡ್‌ ಎಚ್‌ಟಿ ಮಾರ್ಗವು ಬೆಳಗ್ಗೆ ಸುಮಾರು 3.50ರ ಸುಮಾರಿಗೆ ತುಂಡಾಗಿ ನೆಲಕ್ಕೆ ಬಿದ್ದಿರುವುದನ್ನು ಎಲೆಕ್ಟ್ರಿಕಲ್‌ ಇನ್‌ಸ್ಪೆಕ್ಟರೇಟ್‌ ಅಧಿಕಾರಿಗಳ ಪ್ರಾಥಮಿಕ ವಿಚಾರಣೆ ವೇಳೆಯಲ್ಲಿ ಬೆಳಕಿಗೆ ಬಂದಿದೆ.

ತಂತಿ ತುಂಡಾಗಿ ಬಿದ್ದ ಬೆನ್ನಲ್ಲೇ ಕಾಡುಗೋಡಿ ವಿದ್ಯುತ್‌ ಉಪಕೇಂದ್ರದ ಫೀಡರ್‌ ಟ್ರಿಪ್‌ ಆಗಿದೆ. ತಕ್ಷಣ ಕಾಡುಗೋಡಿ ವಿದ್ಯುತ್‌ ಉಪಕೇಂದ್ರದ ಫೀಡರ್‌ ಅನ್ನು ಪುನಃ ಟೆಸ್ಟ್‌ ಚಾರ್ಜ್‌ ಮಾಡಲಾಗಿದೆ. ಆದಾಗ್ಯೂ ತುಂಡಾದ ತಂತಿ ನೆಲದ ಮೇಲೆ ಬಿದ್ದಿದ್ದರಿಂದ ಯಾವುದೇ ಅರ್ಥಿಂಗ್‌ ಆಗಿಲ್ಲ. ಬೆಳಗಿನಜಾವ 5.30ರ ಸುಮಾರಿಗೆ ಸೌಂದರ್ಯ ಅವರು ಮಗುವಿನೊಂದಿಗೆ ಬರುವಾಗ ತುಂಡಾದ ತಂತಿಯನ್ನು ತುಳಿದಿದ್ದು ವಿದ್ಯುತ್‌ ಸ್ಪರ್ಶದಿಂದ ಸಾ-ವನ್ನಪ್ಪಿದ್ದಾರೆ ಎಂದಿದ್ದಾರೆ.

Leave a Reply

Your email address will not be published. Required fields are marked *