ತನಗಿಂತ ಹತ್ತು ವರ್ಷ ವಯಸ್ಸಿನ ಅಂತರ ಇರುವ ವಿವಾಹಿತ ಪುರುಷನ ಜೊತೆ ಪ-ರಾರಿಯಾದ ವಿವಾಹಿತ ಮಹಿಳೆ, ಕುಟುಂಬಕ್ಕೆ ಬಿಗ್ ಶಾ-ಕ್

ಮದುವೆಯನ್ನು ಏಳು ಜನ್ಮಗಳ ನಂಟು ಎಂದು ನಂಬಲಾಗಿತ್ತು. ಆದರೆ ಈಗ ಪ್ರಸ್ತುತ ಜಗತ್ತಿನಲ್ಲಿ ಈ ಪರಿಕಲ್ಪನೆ ನಿಜವೇ ಅಥವಾ ಭ್ರಮೆಯೇ ಎಂಬರ್ಥಕ್ಕೆ ಜಗತ್ತು ಸಾಗುತ್ತಿದೆ. ಮನಸ್ಸು ಇಷ್ಟ ಪಟ್ಟವರ ಜೊತೆಗೆ ವಿವಾಹವಾದರೂ ಕಾಲ ಕ್ರಮೇಣ ವೈಮಸ್ಸು, ಜಗಳ ಏರ್ಪಟ್ಟು ಪ್ರೀತಿ ಸುಳ್ಳು ಎಂದು ದೂರಾಗುವ ಅದೆಷ್ಟೊ ಸಂಬಂಧಗಳನ್ನು ನಮ್ಮ ಸುತ್ತ ಮುತ್ತಲೇ ನಾವು ಕಾಣಬಹುದು.

ಸೆಲೆಬ್ರಿಟಿಗಳು (Celebrity) ಮಾತ್ರವಲ್ಲದೇ ಇತ್ತೀಚಿನ ಯುವ ಸಮುದಾಯ (youths) ಕೂಡ ಮದುವೆಯಾಗಿ ದೂರಾಗಿ ಮತ್ತೊಂದು ಮದ್ವೆ ಆಗೋದು ಕಾಮನ್ ಆಗಿ ಬಿಟ್ಟಿದೆ ಅಷ್ಟು ಮಾತ್ರವಲ್ಲದೇ ಮದುವೆಯಾದ ಜೋಡಿ ನಡುವೆ ಹೊಂದಾಣಿಕೆ ಕಾಣದೆ ಅ-ಕ್ರಮ ಸಂಬಂಧದ ಸಾಂಖ್ಯೆ ಸಹ ಹೆಚ್ಚಾಗುತ್ತಿದೆ. ಮದುವೆಯಾದ ದಂಪತಿಗಳ ನಡುವೆ ಹೊಂದಾಣಿಕೆ ತುಂಬಾ ಮುಖ್ಯ.

ಎಷ್ಟೊ ಬಾರಿ ಹೊಂದಾಣಿಕೆ ಇದ್ದರೂ ಪರಸ್ಪರ ಪ್ರೀತಿಸಿದ್ದರೂ ಅ-ಕ್ರಮ ಸಂಬಂಧ ಇಟ್ಟು ಕೊಳ್ಳುವವರು ಇದ್ದಾರೆ. ಇಂತಹ ಅ-ಕ್ರಮ ಸಂಬಂಧಗಳು ಕೆಲವೊಂದು ಪೊಲೀಸ್ ಠಾಣೆ (Police Station) ಮೆಟ್ಟಿಲೇರಿದರೆ ಇನ್ನೂ ಕೆಲವೊಂದು ಕೊಲೆ ಮೂಲಕ ಅಂತ್ಯ ಕಂಡಿದ್ದು ಇದೆ. ಆದರೆ ಕೆಲ ಅಪರೂಪದ ಕೇಸ್ (case) ನಲ್ಲಿ ಅಕ್ರಮ ಸಂಬಂಧದವರೆ ಮದುವೆಯಾಗಿ ಪ್ರತ್ಯೇಕ ಬದುಕುವುದು ಇದೆ.

ಇಂತಹದ್ದೇ ಒಂದು ಘಟನೆ ಬೆಂಗಳೂರಿನ ಪುಟ್ಟೆನಹಳ್ಳಿಯಲ್ಲಿ (Bangalore Puttenahalli) ನಡೆದಿದ್ದು ಈಗ ಕುಟುಂಬಸ್ಥರು ಶಾಕ್ ಗೆ ಒಳಗಾಗಿದ್ದಾರೆ. ಬೆಂಗಳೂರಿನ ಪುಟ್ಟೆನಹಳ್ಳಿ ಬಡಾವಣೆ (Puttenahalli Barangay) ಯಲ್ಲಿ ಈ ಒಂದು ಘಟನೆನಡೆದಿದ್ದು ವಿವಾಹಿತ ಮಹಿಳೆ ಹಾಗೂ ಪುರುಷನ ಅ-ಕ್ರಮ ಸಂಬಂಧ ಇಟ್ಟುಕೊಂಡಿದ್ದು ಬಳಿಕ ಮನೆ ಬಿಟ್ಟು ಪ-ರಾರಿಯಾಗಿದ್ದು ತಿಳಿದುಬಂದಿದೆ.

40 ವರ್ಷದ ದಿಲ್ ಷಾದ್ (Dillshad) ಅವರು ನಯೀಂ(Nayim) ಅವರನ್ನು ಈಗಾಗಲೇ ಮದುವೆಯಾಗಿದ್ದು 17 ವರ್ಷ ಜೊತೆಗಿದ್ದಾರೆ. ಅವರಿಬ್ಬರಿಗೂ ಮೂವರು ಮಕ್ಕಳಿದ್ದಾರೆ. ಆದರೆ ಈಗ ಆಕೆ 30 ವರ್ಷದ ವಸೀಂ (vasim) ಜೊತೆ ಮನೆಬಿಟ್ಟು ಓಡಿ ಹೋಗಿದ್ದಾರೆ.ವಸೀಂ ಕೂಡ ವಿವಾಹಿತನಾಗಿದ್ದು ಪತ್ನಿ ಸುಮೈನಾ ಬಾನು (Sumaina banu) ಹಾಗೂ ಎರಡು ವರ್ಷದ ಹೆಣ್ಣು ಮಗು ಕೂಡ ಇವರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿತ್ತು.

ಹಾಗಿದ್ದರೂ ತನಗಿಂತ ಹತ್ತು ವರ್ಷ ಹಿರಿಯಳಾಗಿದ್ದ ದಿಲ್ ಷಾದ್ (Dill Shad) ಅವರ ಜೊತೆ ವಸೀಂ ಅವರಿಗೆ ಅ-ಕ್ರಮ ಸಂಬಂಧ ಇದ್ದು ಹಿಂದೊಂಮ್ಮೆ ಪತ್ನಿ ಸುಮೈನಾ ಬಾನು ಅವರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು. ಆಗ ಕುಟುಂಬಸ್ಥರೆಲ್ಲ ಸೇರಿ ಇಬ್ಬರಿಗೂ ಬುದ್ಧಿ ಹೇಳಿ ಎಚ್ಚರಿಕೆ ಸಹ ನೀಡಿದ್ದಾರೆ. ಆದರೆ ಈಗ ವಸೀಂ ಮತ್ತು ದಿಲ್ ಷಾದ್ ಅವರು ಮನೆಬಿಟ್ಟು ಓಡಿ ಹೋಗಿದ್ದಾರೆ.

ದಿಲ್ ಷಾದ್ ಅವರು ಮನೆಯಲ್ಲಿ ಇದ್ದ 5ಲಕ್ಷ ಮೌಲ್ಯದ ಚಿನ್ನ ಹಾಗೂ 70ಲಕ್ಷ ರೂಪಾಯಿ ಸಮೇತ ಪತಿಗೆ ಮೋಸ ಮಾಡಿ ಮಕ್ಕಳನ್ನು ಬಿಟ್ಟು ವಸೀಂ ಜೊತೆ ಓಡಿ ಹೋಗಿದ್ದಾರೆ. ವಸೀಂ ಪತ್ನಿ ಹಾಗೂ ದಿಲ್ ಷಾದ್ ಅವರ ಪತಿ ತಮ್ಮ ಸಂಸಾರ ಉಳಿಸುವಂತೆ ಕೋರಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಲಾಗಿದೆ. ಸದ್ಯ ಈ ಒಂದು ಪ್ರಕರಣವು ಪುಟ್ಟೆನಹಳ್ಳಿ ಪೊಲೀಸ್ ಠಾಣೆ (Puttenahali Police Station) ಮೆಟ್ಟಿಲೇರಿದ್ದು ಇಬ್ಬರ ಹುಡುಕಾಟದಲ್ಲಿ ಇದ್ದಾರೆ.

Leave a Reply

Your email address will not be published. Required fields are marked *