ಸುತ್ತಿಕೊಂಡಿರುವ ಹೆಬ್ಬಾವಿನ ಮೇಲೆ ಕುಳಿತು ಆಟ ಆಡುತ್ತಿರುವ ಪುಟ್ಟ ಬಾಲಕ, ವಿಡಿಯೋ ನೋಡಿ ನೆಟ್ಟಿಗರು ಫುಲ್ ಶಾಕ್ ಆಗುತ್ತೀರಿ.. ವಿಡಿಯೋ ನೋಡಿ

ಹಾವು ಎಂದರೆ ಎಲ್ಲರಿಗೂ ಕೂಡ ಸಹಜವಾಗಿ ಭ-ಯ ಇದ್ದೆ ಇರುತ್ತದೆ. ನಮ್ಮ ಸುತ್ತಮುತ್ತಲಿನಲ್ಲಿ ಹಾವು ಬಂದರೆ ಸಾಕು, ಒಂದು ಮೈಲಿ ದೂರ ಓಡುವವರೇ ಹೆಚ್ಚು. ಆದರೆ ಇದೀಗ ಹೆಬ್ಬಾವಿನ ವಿಡಿಯೋವೊಂದು ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಸಾಮಾನ್ಯವಾಗಿ ಹಾವನ್ನು ಕೈಯಲ್ಲಿ ಹಿಡಿಯಲು ಗುಂಡಿಗೆ ಗಟ್ಟಿ ಇರಬೇಕಾಗುತ್ತದೆ.

ಆದರೆ ವೈರಲ್ ಆಗಿರುವ ವಿಡಿಯೋದಲ್ಲಿ ಪುಟ್ಟ ಬಾಲಕನೊಬ್ಬ ಹೆಬ್ಬಾವಿನ ಜೊತೆಗೆ ಆಟ ಆಡುವ ದೃಶ್ಯವೊಂದು ವೈರಲ್ ಆಗಿವೆ. ಇತ್ತೀಚೆಗೆ ಇನ್ ಸ್ಟಾಗ್ರಾಮ್ (Instagram) ನಲ್ಲಿ ಆರ್ ಬಿ ಎಂಫೈರ್ ಟಿವಿ (RB Empire Tv) ಹೆಸರಿನ ಖಾತೆಯಲ್ಲಿ ವೀಡಿಯೋವನ್ನು ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಬಾಲಕನೊಬ್ಬ ದೈತ್ಯ ಗಾತ್ರದ ಹೆಬ್ಬಾವಿ (Python) ನೊಂದಿಗೆ ಆಟವಾಡುತ್ತಿದ್ದಾನೆ.

ಆಟಿಕೆಯಂತೆ ಅದನ್ನು ಕೈಯಲ್ಲೂ ಹಿಡಿದು ಕೊಂಡು ಆಡುತ್ತಿದ್ದು, ನೋಡಿದರೆ ಒಂದು ಕ್ಷಣ ಮೈ ಜುಮ್ಮ್ ಎನ್ನುತ್ತವೆ.ಈ ವಿಡಿಯೋದಲ್ಲಿ ಹೆಬ್ಬಾವಿನ ಜೊತೆಗೆ ಆಟ ಆಡುತ್ತಿರುವ ಬಾಲಕನು ಅದರ ಮೇಲೆ ಕುಳಿತುಕೊಳ್ಳುತ್ತಾನೆ. ಆದಾದ ಬಳಿಕ ಅದು ತೆವಳುತ್ತಾ ಹೋದಂತೆಲ್ಲಾ ಹೊರಟುಹೋಯಿತು ಎನ್ನುವಂತೆ ಕೂಗುತ್ತ ಅದರ ಮುಖದ ಭಾಗವನ್ನು ಹಿಡಿದು ಎತ್ತಿದ್ದಾನೆ.

ಆ ಹಾವು ಮಾತ್ರ ಏನು ಮಾಡದೇ ಸುಮ್ಮನಿದ್ದು, ಈ ಬಾಲಕನ ಧೈರ್ಯವನ್ನು ಕಂಡು ನೆಟ್ಟಿಗರು ಫಿದಾ ಆಗಿದ್ದು, ಕೆಲವರಂತು ಈ ವಿಡಿಯೋ ನೋಡಿ ಭ-ಯಪಟ್ಟುಕೊಂಡಿದ್ದಾರೆಈ ವಿಡಿಯೋವೊಂದು ಇಂಡೋನೇಷ್ಯಾದ ಪೂರ್ವ ಜಾವಾ ಪ್ರಾಂತ್ಯ (East Java province of Indonesia) ದಲ್ಲಿ ಸೆರೆ ಹಿಡಿಯಲಾಗಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಂತೆ 5 ಲಕ್ಷದ 20 ಸಾವಿರಕ್ಕೂ ಹೆಚ್ಚು ಲೈಕ್ಸ್ ಮಾಡಿದ್ದು ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ.

ಕೆಲವು ನೆಟ್ಟಿಗರು ಆತಂಕ ವ್ಯಕ್ತಪಡಿಸುವ ಮೂಲಕ ಕಾಮೆಂಟ್ ಮಾಡಿದರೆ ಇನ್ನು ಕೆಲವರು ಇದಕ್ಕೆ ಬಾಲಕನ ಧೈರ್ಯಕ್ಕೆ ಸಲಾಂ ಹೇಳಿದ್ದಾರೆ. ನೆಟ್ಟಿಗನೊಬ್ಬನು “ಈ ಮಗುವಿನಂತೆಯೇ ಎಲ್ಲ ಮಕ್ಕಳೂ ಹಾವಿನ್ನು ಸಮೀಪದಿಂದ ನೋಡುವುದನ್ನು ಕಲಿತುಕೊಳ್ಳಬೇಕು, ಆಗಲೇ ನಿಸರ್ಗದ (Nature) ಬಗ್ಗೆ ಗೌರವ ಮೂಡುತ್ತದೆ’ ಎಂದಿದ್ದು, ಮತ್ತೊಬ್ಬನು “ಇದು ನಿಜಕ್ಕೂ ಭಯಾನಕ. ನನಗೆ ಇದನ್ನು ನೋಡಲು ಇಷ್ಟವಾಗುವುದಿಲ್ಲ’ ಎಂದಿದ್ದಾನೆ.

Leave a Reply

Your email address will not be published. Required fields are marked *