ಕೆಲಸಕ್ಕೆಂದು ವಿದೇಶಕ್ಕೆ ತೆರಳಿ ವಿದೇಶಿ ಹುಡುಗಿಯನ್ನು ಮೆಚ್ಚಿದ, ಕರಾವಳಿಯಲ್ಲೊಂದು ಅಪರೂಪದ ಮದುವೆ, ಇಲ್ಲಿದೆ ನೋಡಿ ಅಸಲಿ ವಿಚಾರ

ಮದುವೆ (Marriage) ಎನ್ನುವುದು ಎಲ್ಲರ ಪಾಲಿಗೂ ಕೂಡ ಖುಷಿಯ, ಸಂತೋಷದ ಕ್ಷಣ. ಹೀಗಾಗಿ ಎಲ್ಲರೂ ತಮ್ಮ ಆ ಮದುವೆಯ ಕ್ಷಣಗಳನ್ನು ತುಂಬಾ ಸೊಗಸಾಗಿ ಕಳೆಯಲು ಇಷ್ಟ ಪಡುತ್ತಾರೆ. ಇನ್ನು ಈ ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ತಮ್ಮ ಮನೆಗೆ, ಮನೆತನಕ್ಕೆ ತಕ್ಕುದಾದ ಹುಡುಗ ಹುಡುಗಿಯನ್ನು ಹುಡುಕಿ ಹಿರಿಯರು ಮದುವೆ ಮಾಡುವ ಕಾಲವೊಂದಿತ್ತು.

ಆದರೆ ಇದೀಗ ಆ ಕಾಲ ಬದಲಾಗಿ, ತಮಗಿಷ್ಟವಾಗುವ ಹುಡುಗ ಹುಡುಗಿಯನ್ನು ತಾವೇ ಹುಡುಕಿಕೊಳ್ಳುವ ಕಾಲ ಬಂದಾಗಿದೆ. ಹೀಗಾಗಿಯೇ ಲವ್ ಮ್ಯಾರೇಜ್ ಗಳು ಸಂಖ್ಯೆ ಹೆಚ್ಚಾಗುತ್ತಿದೆ. ಯಾವುದೋ ದೇಶದ ಹುಡುಗ ಹಾಗೂ ಇನ್ಯಾವುದೋ ದೇಶದ ಹುಡುಗಿ ಇಬ್ಬರೂ ಇಷ್ಟ ಪಟ್ಟು ಮನೆಯವರನ್ನು ಒಪ್ಪಿಸಿ ಮದುವೆಯಾಗುವುದನ್ನು ನಾವು ನೀವು ನೋಡಿರುತ್ತೇವೆ.

ಅಂತಹದೊಂದು ಮದುವೆಯು ಉಡುಪಿ ಜಿಲ್ಲೆ (Udupi District) ಯ ಕುಂದಾಪುರ (Kundapura) ದಲ್ಲಿ ನಡೆದಿದೆ. ಹೌದು, ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ (Chitteri Shree Bramhalingeshwara Temple) ದಲ್ಲಿ ಎರಡೂ ಕುಟುಂಬಗಳ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

ಕುಂದಾಪುರ ತಾಲೂಕಿನ ಗ್ರಾಮೀಣ ಭಾಗವಾದ ಆಜ್ರಿಯ ಕರಿಮನೆ ಸುವರ್ಣ Suvarna) ಮತ್ತು ಪಂಜು ಪೂಜಾರಿ (Panju Poojary) ದಂಪತಿಯ ಪುತ್ರ ಚಂದನ್ (Chandan) ಹಾಗೂ ಜರ್ಮನಿಯ ಪೆಟ್ರ ಶ್ರೂಆರ್ (Peter Schreuer) ಮತ್ತು ಪೀಟರ್ ಶ್ರೂಆರ್ ಮುನಿಸ್ತರ್ ಯುನಿಕಬ್ (Peter Schreuer Münster Unicube) ದಂಪತಿಯ ಪುತ್ರಿ ಕಾರಿನ್ (Karin) ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ಚಂದನ್ ಅವರು ಜರ್ಮನಿಯಲ್ಲಿ ಕಂಪೆನಿ (Germany Company) ಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ಕಾರಿನ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ. ಕೊನೆಗೆ ಇಬ್ಬರೂ ಕೂಡ ತಮ್ಮ ಕುಟುಂಬದ ಜೊತೆಗೆ ತಮ್ಮ ಪ್ರೀತಿಯ ವಿಚಾರವನ್ನು ಹೇಳಿದ್ದು, ಇಬ್ಬರ ಮನೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಮನೆಯವರ ಸಮ್ಮುಖದಲ್ಲಿ ವಿವಾಹ ಕಾರ್ಯವು ನೆರವೇರಿದ್ದು, ವರ ಹಾಗೂ ವಧುವಿನ ಕಡೆಯವರು ಮದುವೆಯಲ್ಲಿ ಹಾಜರಿದ್ದು ಶುಭಾಶಯಗಳನ್ನು ಕೋರಿದ್ದಾರೆ. ಭಾರತೀಯ ವರನು ಹಾಗೂ ವಿದೇಶಿ ವಧುವಿನ ಜೊತೆಗೆ ಹೊಸ ಬದುಕಿಗೆ ಕಾಲಿಟ್ಟ ಈ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

Leave a Reply

Your email address will not be published. Required fields are marked *