ಅಮ್ಮನ ಪ್ರೀತಿಯನ್ನು ನೀಡುವ ಮನೆಕೆಲಸದಾಕೆಗೆ ಚಿಕ್ಕ ಹುಡುಗ ಮಾಡಿದ್ದೇನು ಗೊತ್ತಾ? ನಿಜಕ್ಕೂ ನಂಬಲಿಕ್ಕೆ ಸಾಧ್ಯವಿಲ್ಲ!!!

ಇತ್ತೀಚೆಗಿನ ದಿನಗಳಲ್ಲಿ ಗಂಡ ಹೆಂಡಿಯರಿಬ್ಬರೂ ಉದ್ಯೋಗ (Job) ದಲ್ಲಿರುತ್ತಾರೆ. ಹೀಗಾಗಿ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಸಮಯವಿಲ್ಲ. ಈ ಎಲ್ಲಾ ಕಾರಣದಿಂದಾಗಿ ಮಕ್ಕಳನ್ನು ಬೇಬಿ ಸಿಟ್ಟಿಂಗ್ (Baby sitting) ನಲ್ಲಿ ಬಿಡುತ್ತಾರೆ. ಇಲ್ಲವಾದರೆ ಮಕ್ಕಳನ್ನು ನೋಡುವುದಕ್ಕಾಗಿ ಮನೆಕೆಲಸದಾಕೆಯನ್ನು ಇಟ್ಟುಕೊಳ್ಳುತ್ತಾರೆ. ಈ ಮಕ್ಕಳಿಗೆ ತಂದೆ ತಾಯಿಗಿಂತ ಹೆಚ್ಚಾಗಿ ಮನೆ ಕೆಲಸದಾಕೆಯ ಮೇಲೆ ಪ್ರೀತಿ ಬೆಳೆದುಬಿಡುತ್ತದೆ.

ತಂದೆ ತಾಯಿಯ ಪ್ರೀತಿಯನ್ನು ಮನೆ ಕೆಲಸದಾಕೆ ತೋರಿಸಿ ಬಿಡುತ್ತಾರೆ. ಬೆಂಗಳೂರಿನಂತಹ ಪಟ್ಟಣಗಳಲ್ಲಿ ಇದು ಸರ್ವೇ ಸಾಮಾನ್ಯ ವಾಗಿರುವಂತಹದ್ದು. ಇಲ್ಲೊಂದು ಕಡೆಯಲ್ಲಿ ಮನೆಕೆಲಸದಾಕೆಯ ಸಹಜ ಪ್ರೀತಿಯಿಂದಾಗಿ ಈ ಬಾಲಕನೊಬ್ಬನು ಮಾಡಿದ ಕೆಲಸದ ಬಗ್ಗೆ ತಿಳಿದರೆ ಅಚ್ಚರಿಯಾಗುತ್ತದೆ.

ಇಲ್ಲೊಬ್ಬ ಬಾಲಕನು ಶಾಲೆ ಹಾಗೂ ಇತರೆಡೆ ನಡೆದ ಹಲವು ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಭಾಗವಹಿಸಿ, ಅಲ್ಲಿ ಗೆದ್ದ ಪ್ರಶಸ್ತಿ ಮೊತ್ತದಲ್ಲಿ ತನ್ನನ್ನು ಪುಟ್ಟ ಮಗುವಾಗಿದ್ದಾಗಿನಿಂದಲೂ ನೋಡಿಕೊಳ್ಳುತ್ತಿದ್ದ ಮನೆಕೆಲಸದಾಕೆಗೆ ಮೊಬೈಲ್ ಫೋನ್ ತೆಗೆಸಿಕೊಟ್ಟಿದ್ದಾನೆ. ಈ ಬಾಲಕನ ದೊಡ್ಡ ಮನಸ್ಸಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಬಾಲಕ ಅಂಕಿತ್‌ (Ankith) ಗೆ ಮನೆಕೆಲಸದಾಕೆಯ ಮೇಲೆ ಇದ್ದೆ ಪ್ರೀತಿಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ವಿಚಾರವನ್ನು ವಿ ಬಾಲಾಜಿ ಎನ್ನುವವರು ತಮ್ಮ ಟ್ವಿಟ್ಟರ್‌ (Twitter) ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿ ಬಾಲಾಜಿ (V.Balaji) ಯವರ ಮಗನೇ ಈ ಪುಟ್ಟ ಬಾಲಕ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ವಾರಾಂತ್ಯಗಳಲ್ಲಿ ನಡೆಯುವ ಟೂರ್ನ್‌ಮೆಂಟ್‌ನಲ್ಲಿ ಭಾಗವಹಿಸಿ ಪುತ್ರ ಅಂಕಿತ್ ಇದುವರೆಗೆ 7 ಸಾವಿರ ರೂಪಾಯಿಯನ್ನು ಗಳಿಸಿದ್ದಾನೆ.

ಹಾಗೂ ಆ ಹಣದಲ್ಲಿ ಇಂದು ಆತ ನಮ್ಮ ಮನೆಯ ಅಡುಗೆ ಕೆಲಸದವರಾದ ಸರೋಜಾ ಅವರಿಗೆ 2 ಸಾವಿರ ರೂಪಾಯಿ ಮೊತ್ತದ ಮೊಬೈಲ್ ಫೋನ್ ಅನ್ನು ಖರೀದಿಸಿ ನೀಡಿದ್ದಾನೆ. ಆತ ಆರು ತಿಂಗಳ ಮಗುವಾಗಿದ್ದಾಗಿನಿಂದಲೂ ಸರೋಜಾ (Saroja) ಅವರು ಆತನ ಲಾಲನೆ ಪಾಲನೆ ಮಾಡುತ್ತಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.

ಅಂಕಿತ್‌ನ ಪೋಷಕರಾದ ನನಗೆ ಹಾಗೂ ಮೀರಾಗೆ ಇದಕ್ಕಿಂತ ದೊಡ್ಡ ಖುಷಿಯ ವಿಚಾರ ಅಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡುತ್ತಿದ್ದಂತೆ ಬಾಲಕನ ಈ ಪ್ರೀತಿಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಮೂರು ಲಕ್ಷಕ್ಕೂ ಹೆಚ್ಚು ಜನ ಈ ಟ್ವಿಟ್ ವೀಕ್ಷಣೆ ಮಾಡಿದ್ದಾರೆ. ಅನೇಕರು ಮುಗ್ಧ ಮನಸ್ಸಿನ ನಿರ್ಮಲ ಪ್ರೀತಿ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *