ಮನೆದೇವ್ರು ಧಾರಾವಾಹಿ ಖ್ಯಾತಿಯ ಅರ್ಚನಾರವರ ಮದುವೆಯ ಸುಂದರ ಕ್ಷಣಗಳು ಹೇಗಿತ್ತು ಗೊತ್ತಾ?

ಕಳೆದ ಕೆಲವು ವರ್ಷಗಳಿಂದ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ ಎಂದರೆ ತಪ್ಪಾಗಲಾರದು. ನಟ ನಟಿಯರು ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಹೊಸ ಜೀವನವನ್ನು ಆರಂಭಿಸಿದ್ದಾರೆ. ಈ ವಿಚಾರದಲ್ಲಿ ಮನೆದೇವ್ರು (Manedevru) ಧಾರಾವಾಹಿ ಖ್ಯಾತಿಯ ಅರ್ಚನಾ (Archana) ಕೂಡ ಹೊರತಾಗಿಲ್ಲ. ವಿಘ್ನೇಶ್ (Vignesh) ಎನ್ನುವ ಮದುವೆಯಾಗಿದ್ದು ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ಅದಲ್ಲದೇ ಈ ಮುದ್ದಾದ ಜೋಡಿಯೂ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ನಟಿ ಅರ್ಚನಾ ಹಾಗೂ ವಿಘ್ನೇಶ್ ಅವರು ಪಕ್ಕಾ ಅರೆಂಜ್ ಮ್ಯಾರೇಜ್ (Arrange Marriage) ಆಗಿದ್ದು, ಅರ್ಚನಾಗೆ ಮ್ಯಾಟ್ರಿಮೋನಿ ಮೂಲಕ ಮದುವೆ ಪ್ರಪೋಸಲ್ ಬಂದಿತ್ತು. ಕೊನೆಗೆ ಇಬ್ಬರ ಮನೆಯವರು ಒಪ್ಪಿ ಮದುವೆಯಾಗಿದ್ದರು. ನಟಿ ಅರ್ಚನಾನವರ ಮದುವೆಯ ಫೋಟೋಗಳು ವೈರಲ್ ಆಗಿದ್ದು, ಈ ಫೋಟೋದಲ್ಲಿ ಅರ್ಚನಾ ದಂಪತಿಗಳು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಮನೆದೇವ್ರು’ ಧಾರಾವಾಹಿ ಖ್ಯಾತಿಯ ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಅವರು ತಾಯಿಯಾಗುತ್ತಿರುವ ಖುಷಿಯಲ್ಲಿದ್ದಾರೆ. ಈ ಸಂಭ್ರಮದ ನಡುವೆ, ಸೋಶಿಯಲ್ ಮೀಡಿಯಾದಲ್ಲಿ ಬೇಬಿ ಬಂಪ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ತನ್ನ ಫ್ಯಾನ್ಸ್ ಬಳಗಕ್ಕೆ ನಟಿ ಅರ್ಚನಾ ಗುಡ್‌ನ್ಯೂಸ್ ನೀಡಿದ್ದಾರೆ. ಫೋಟೋಗಳ ಜೊತೆಗೆ, ನಮಗೀಗ ಹೊಸ ಅರ್ಥ ಬಂದಿದೆ. ವಿಘ್ನೇಶ್ ಶರ್ಮ, ಬೇಬಿ ಶರ್ಮ” ಎಂದು ಬರೆದುಕೊಂಡಿದ್ದಾರೆ.

ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ಅರ್ಚನಾರವರು ಅಚಾನಕ್ ಆಗಿ ನಟನಾಲೋಕಕ್ಕೆ ಬಂದವರು. ಮಿಸ್ ಕರ್ನಾಟಕ 2013′ (Miss Karnataka 2013) ಪಟ್ಟ ಪಡೆದಿದ್ದ ಅರ್ಚನಾರವರಿಗೆ ಮಧುಬಾಲಾ ಧಾರಾವಾಹಿಯಲ್ಲಿ ನಟಿಸುವ ಅವಕಾಶವು ಸಿಕ್ಕಿತ್ತು. ಆದಾದ ಬಳಿಕ ನಟಿಯೂ ಮನೆದೇವ್ರು ಧಾರಾವಾಹಿಯಲ್ಲಿ ನಟಿಸಿದ್ದರು. ಅದಲ್ಲದೇ ಪರಭಾಷೆಯ 2 ತಮಿಳು ಧಾರಾವಾಹಿಯಲ್ಲಿ ನಟಿಸಿದ್ದರು. ವಿಘ್ನೇಶ್ ಶರ್ಮಾ ಅವರನ್ನು ಮದುವೆಯಾದ ಬಳಿಕ ಅರ್ಚನಾ ಅವರು ವಿದೇಶದಲ್ಲಿ ತೆರಳಿದ್ದರು.

ಭಾರತದಲ್ಲಿ ನಟನೆ ಬಿಟ್ಟು ನ್ಯೂಯಾರ್ಕ್‌ಗೆ ಹೋಗಿದ್ದ ಅರ್ಚನಾ 6 ತಿಂಗಳ ಕಾಲ ಮನೆಯಲ್ಲಿ ಅಡುಗೆ ಮಾಡಿಕೊಂಡಿರುವುಡು ಬೇಸರವನ್ನುಂಟು ಮಾಡಿತ್ತು. ಎಚ್‌ಆರ್ ಆಗಿ ಕೆಲಸ ಮಾಡಿದ್ದ ಅನುಭವವಿದ್ದ ಇವರು ವಿದೇಶದಲ್ಲಿಯೂ ಎಚ್ಆರ್ ಕೆಲಸಕ್ಕೆ ಸೇರಿದ್ದರು. ವಿದೇಶಿ ಜೀವನದ ಬಗ್ಗೆ ಮಾತನಾಡಿದ್ದ ನಟಿ ಅರ್ಚನಾ, “ವಿದೇಶ ಜೀವನ ಅಂದುಕೊಂಡಷ್ಟು ಸುಲಭ ಇಲ್ಲ. ಭಾರತದ ತರ ಇಲ್ಲಿ ಮನೆ ಹುಡುಕೋದು ಕಷ್ಟ, ಕೆಲಸದವರಿಗೆ ಸಂಬಳ ಕೊಡೋದು ಕೂಡ ದುಬಾರಿ, ಕಾರ್ ಇಟ್ಟುಕೊಂಡರೆ ಟ್ರಾಫಿಕ್, ಪಾರ್ಕಿಂಗ್ ಸಮಸ್ಯೆ ಆಗುತ್ತದೆ. ಇಲ್ಲಿ ಸ್ವಾವಲಂಬಿಯಾಗಿ ಬದುಕೋದನ್ನು ಕಲಿಯಬೇಕು” ಎಂದಿದ್ದರು.

Leave a Reply

Your email address will not be published. Required fields are marked *