112 ವರ್ಷ ವಯಸ್ಸಿನ ವಿದೇಶಿ ಅಜ್ಜಿಗೆ ಎಂಟನೇ ಮದುವೆಯಾಗಬೇಕೆನ್ನುವ ಕನಸು. ಹುಡುಗ ಹೇಗಿರಬೇಕಂತೆ ಗೊತ್ತಾ? ಅಜ್ಜಿಯ ಷರತ್ತು ಕೇಳಿದ್ರೆ ಶಾಕ್ ಆಗ್ತೀರಾ!

ಮದುವೆಯೂ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನುವುದನ್ನು ಕೇಳಿದ್ದೇವೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಒಂದಕ್ಕಿಂತ ಹೆಚ್ಚು ಮದುವೆಯಾಗುವವರನ್ನು ನೋಡಿದ್ದೇವೆ. ಈ 112 ವರ್ಷ ವಯಸ್ಸಿನ ಮಲೇಷಿಯಾ (Malaysia) ದ ಅಜ್ಜಿಯ ಕಥೆ ಕೇಳಿದರೆ ನಿಮಗೂ ಆಶ್ಚರ್ಯವಾಗಬಹುದು.

ಈಗಾಗಲೇ ಏಳು ಮದುವೆಯಾಗಿರುವ ಈ ವಿದೇಶಿ ಅಜ್ಜಿಯು ಇದೀಗ ಮತ್ತೆ ಮದುವೆಯಾಗ ಬೇಕೆಂದುಕೊಂಡಿದ್ದಾರೆ. ಈ ಇಳಿವಯಸ್ಸಿನಲ್ಲಿಯೂ ಅಜ್ಜಿಗೆ ಮದುವೆಯಾಗುವ ಆಸೆ ಇರುವುದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದು ಸೋಶಿಯಲ್ ಮೀಡಿಯಾ (Social Media) ದಲ್ಲಿ ಅಜ್ಜಿಯ ಕುರಿತಾದ ಚರ್ಚೆಗಳು ಜೋರಾಗಿಯೇ ನಡೆಯುತ್ತಿದೆ.

ಅಷ್ಟೇ ಅಲ್ಲದೇ ಮದುವೆಗೆ ಸಂಬಂಧ ಪಟ್ಟಂತೆ ಕೆಲವು ಷರತ್ತು ಗಳನ್ನು ಹಾಕಿದ್ದಾರೆ. ಈ ಅಜ್ಜಿಯು ಲಾಂಟನ್‌ನ ತುಂಪತ್‌ನಲ್ಲಿರುವ ಕಂಪುಂಗ್ ಕಾಜಾಂಗ್ ಸೆಬಿಡಾಂಗ್‌ (Kampung Kajang Sebidang in Tumpat, Lantan) ನವರು. ವಿದೇಶಿ ಅಜ್ಜಿಯ ಹೆಸರು ಸಿತಿ ಹವಾ ಹುಸಿನ್ (Siti Hawa Husin). ಏಳು ಮದುವೆಯಾಗಿರುವ ಈ ಅಜ್ಜಿಗೆ ಐದು ಮಕ್ಕಳು, ಹತ್ತೊಂಬತ್ತು ಮೊಮ್ಮಕ್ಕಳು, ಮತ್ತು ಮೂವತ್ತು ಮರಿಮಕ್ಕಳು ಇದ್ದಾರೆ.

ಎಂಟನೇ ಮದುವೆಯಾಗಬೇಕು ಎನ್ನುವ ಆಸೆ ಹೊಂದಿದ್ದು, ತಾನು ಮದುವೆಯಾಗುವ ಹುಡುಗನ ಬಗ್ಗೆಯು ಷರತ್ತನ್ನು ಹಾಕಿದ್ದಾರೆ. ಈ ಷರತ್ತಿನಲ್ಲಿ ಒಬ್ಬ ಹುಡುಗ ಮುಂದೆ ಬಂದು ತನಗೆ ಪ್ರಪೋಸ್ (Prapose) ಮಾಡಿದಾಗ ಮಾತ್ರ ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ.

ಈಗಾಗಲೇ ಏಳು ಮದುವೆಯಾಗಿರುವ ಅಜ್ಜಿಯ ಮಾಜಿ ಗಂಡಂದಿರಲ್ಲಿ ಕೆಲವರು ಬದುಕಿಲ್ಲ. ಸಂಸಾರದಲ್ಲಿ ವೈಮನಸ್ಸು ಉಂಟಾದ ಕಾರಣ ಪತಿಯಿಂದ ಈ ಅಜ್ಜಿ ದೂರ ಉಳಿದರು. ಈಗಲೂ ಆರೋಗ್ಯವಾಗಿರುವ ಈ ಅಜ್ಜಿಯು ಮದುವೆಯ ಕನಸು ಕಂಡಿರುವುದು ಅಚ್ಚರಿಯೆನಿಸಿದರೂ ಕೂಡ ಸತ್ಯ.

Leave a Reply

Your email address will not be published. Required fields are marked *