ಇತ್ತೀಚೆಗಿನ ದಿನಗಳಲ್ಲಿ ಮದುವೆಗೆ ವಯಸ್ಸಿನ ಅಂತರ (Age Gap) ಖಂಡಿತವಾಗಿಯೂ ಇಲ್ಲ ಎನ್ನುವಂತಾಗಿದೆ. ಹೀಗಾಗಿ ಅಜ್ಜಂದಿರು ತಮ್ಮ ಮೊಮ್ಮಕ್ಕಳು ವಯಸ್ಸಿನ ಯುವತಿಯರನ್ನು ಮದುವೆಯಾಗುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಈಗಾಗಲೇ ಇಂತಹದ್ದೇ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತದೆ.
ಇದೀಗ 78 ವರ್ಷದ ಅಜ್ಜ 17ರ ಹುಡುಗಿಯನ್ನು ಮದುವೆಯಾಗಿದ್ದು ಎಲ್ಲರಿಗೂ ಅಚ್ಚರಿ ಮೂಡಿಸುವಂತೆ ಮಾಡಿದೆ. ಮದುವೆಯಾಗಿದ್ದು ದೊಡ್ಡ ವಿಷಯವಲ್ಲ, ಆದರೆ ವೈವಾಹಿಕ ಜೀವನಕ್ಕೆ ಕಾಲಿಟ್ಟ 22 ದಿನಗಳಲ್ಲಿ ವಿ-ಚ್ಛೇದನ ಪಡೆದಿದ್ದಾರೆ. ಈ ಅಜ್ಜನೇ ವಿ-ಚ್ಛೇದನ (Divorce)ಕ್ಕೆ ಅರ್ಜಿ ಸಲ್ಲಿಸಿರುವುದು ಮತ್ತೊಂದು ಅಚ್ಚರಿಕಾರಿ ವಿಚಾರ.
78 ವರ್ಷದ ವರ್ಷದ ಅಜ್ಜ 17 ರ ಯುವತಿಯನ್ನು ಮದುವೆಯಾಗಿರುವ ಘಟನೆಯು ನಡೆದಿರುವುದು ಇಂಡೋನೇಷ್ಯಾದಲ್ಲಿ. 78 ವರ್ಷದ ಅಬಾ ಸರ್ನಾ (Aba Sarna) ಹಾಗೂ 17 ವರ್ಷದ ನೋನಿ ನವಿತಾ (Noni Navitha)ಎನ್ನಲಾಗಿದೆ. ಮದುವೆಯಾದ ಕೆಲವೇ ದಿನಗಳಲ್ಲಿ ಡೈವೋರ್ಸ್ ಗೆ ಮುಂದಾಗಿದ್ದು ಈ ಯುವತಿಯ ಮನೆಯವರಿಗೆ ಶಾ-ಕ್ ನೀಡಿದ್ದಂತಾಗಿದೆ.
ನೋನಿ ಸಹೋದರಿ ಅಯಾನ್ (Noni Sister Ayan) ಅವರು ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, “ಇವರಿಬ್ಬರ ಸಂಬಂಧದ ಬಗ್ಗೆ ಹುಡುಗಿಗಾಗಲಿ, ಕುಟುಂಬದವರಿಗಾಗಲಿ ಯಾವುದೇ ಸಮಸ್ಯೆ ಇರಲಿಲ್ಲ. ಯಾವುದೇ ಸೂಚನೆ ನೀಡದೆ ಈ ರೀತಿ ಮಾಡಿದ್ದಕ್ಕೆ ತುಂಬಾ ಆಘಾತವಾಗಿದೆ. ಅಬಾ ಸರ್ನಾ ವಿಚಾರದಲ್ಲಿ ನಮ್ಮ ಕುಟುಂಬದವರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಅಬಾ ಸರ್ನಾ ಹಾಗೂ ಕುಟುಂಬದವರಿಂದ ಸಮಸ್ಯೆ ಶುರುವಾಗಿದೆ. ಅವರು ವಿವಾಹಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು” ಎಂದಿದ್ದಾರೆ.

ಆದರೆ ಈ ವೃದ್ಧ ಅಬಾ ಅವರು 50 ಸಾವಿರ ರೂ, ಮೋಟರ್ ಸೈಕಲ್, ಹಾಸಿಗೆ ಸೇರಿದಂತೆ ಇನ್ನಿತ್ತರ ವಸ್ತುಗಳನ್ನು ನೋನಿಗೆ ವ-ಧುದಕ್ಷಿಣೆ (Dowry) ಯಾಗಿ ನೀಡಿದ್ದರು. ಆದರೆ ಇದನ್ನೇಲ್ಲವನ್ನು ವಾಪಸ್ಸು ಪಡೆದುಕೊಂಡಿದ್ದಾರೆ. ಅದಲ್ಲದೆ, ಅಬಾ ಸರ್ನಾ ಈ ವಿ-ಚ್ಛೇಧನಕ್ಕೆ ಅರ್ಜಿ ಹಾಕಲು ಕಾರಣವಾಗಿರುವ ಅಂಶವು ಬೇರೆಯೇ ಇದೆ. ಹೌದು, ಈ ಮದುವೆಗೂ ಮೊದಲೇ ನೋನಿ ಗರ್ಭಿಣಿ (Noni Pregnant) ಯಾಗಿದ್ದಾಳೆ ಎನ್ನಲಾಗಿದೆ. ಆದರೆ ಇದನ್ನು ಆಕೆಯ ಸಹೋದರಿ ಅಯಾನ್ ಇದನ್ನು ನಿರಾಕರಿಸಿದ್ದಾಳೆ ಎನ್ನಲಾಗಿದೆ. ಒಟ್ಟಿನಲ್ಲಿ ಇವರಿಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.