60 years old man and young girl love story : ಪ್ರೀತಿ ಪ್ರೇಮವೇ ಹಾಗೆ, ಅದಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಯಾವ ಸಮಯದಲ್ಲಿ ಬೇಕಾದರೂ ಅನುರಾಗ ಒಡಮೂಡಬಹುದು. ಆದರೆ ಕೆಲವೊಮ್ಮೆ ಪ್ರೀತಿಯೂ ಕಣ್ಣೀರಿನ ಕಡಲಲ್ಲಿ ಕೈ ತೊಳೆಯುವಂತೆ ಮಾಡುತ್ತದೆ. ಪ್ರೀತಿ ಮಾಯೆ ಹುಷಾರು ಕಣ್ಣೀರು ಮಾರೋ ಬಜಾರು ಎನ್ನುವ ಸಿನಿಮಾ ಹಾಡೇ ಇದೆ. ಪ್ರೀತಿ ಮಾಯೆ, ಈ ಪ್ರೀತಿಯಲ್ಲಿ ಬಿದ್ದು ಕಣ್ಣೀರಲ್ಲಿ ಕೈ ತೊಳೆಯುವವರು ಇದ್ದಾರೆ.
ಪ್ರೀತಿ ಅತಿಯಾದರೆ ವಿಷ ಕೂಡ ಆಗುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ಕೆಲವೊಮ್ಮೆ ಈ ಪ್ರೀತಿಯ ಭಾವನೆ ಉಸಿರು ಗಟ್ಟಿಸುತ್ತದೆ. ಆದರೆ ಈ ಪ್ರೀತಿಯಲ್ಲಿ ಪರಸ್ಪರ ಗೌರವ ನೀಡುವ ನಂಬಿಕೆಯಿಟ್ಟು ಬದುಕಬೇಕಾಗುತ್ತದೆ. ಪ್ರೀತಿ ಅನ್ನುವುದು ಒಂದು ಅದ್ಭುತ ಭಾವ. ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ. ವರುಷಗಳು ಉರುಳಿದಂತೆ ಪತಿ-ಪತ್ನಿಯರ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.
ಒಬ್ಬರಿಗೆ ಇನ್ನೊಬ್ಬರು ಅಭ್ಯಾಸವಾಗಿ ಬಿಡುತ್ತಾರೆ. ದಿನ ಕಳೆದಂತೆ ಒಬ್ಬರನ್ನೊಬ್ಬರು ಹೆಚ್ಚು ಅರ್ಥ ಮಾಡಿಕೊಂಡಿರುತ್ತಾರೆ. ತನ್ನ ಪ್ರತಿ ಬೇಕು ಬೇಡಗಳಿಗೆ ಸಂಗಾತಿಯನ್ನೇ ಅವಲಂಬಿಸಿರುತ್ತಾರೆ. ಹೀಗೆ ಪ್ರೀತಿ ಎನ್ನುವುದು ಪ್ರತಿಯೊಬ್ಬರಿಗೂ ಬಹಳ ಮುಖ್ಯವಾಗಿದೆ. ಅದರಲ್ಲಿಯೂ ಇತ್ತೀಚೆಗಿನ ದಿನಗಳಲ್ಲಿ ವಯಸ್ಸಿನ ಅಂತರದ ನಡುವೆ ಮದುವೆಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಚಲಿಸುವ ಬೈಕ್ ಮೇಲೆಯೇ ಡಿಂಗ್ ಡಾಂಗ್ ಆಟ ಶುರುಮಾಡಿಕೊಂಡ ಪ್ರೇಮಿಗಳು! ಪ್ರೀತಿ ಮಾಡಬಾರದು, ಮಾಡಿದರೆ ಹೆಲ್ಮೆಟ್ ಮರೆಯಬಾರದು ಎಡವಟ್ಟು ಆಯ್ತು ನೋಡಿ!!
ಅದರಲ್ಲಿಯೂ ಧಾರಾವಾಹಿಗಳಿಂದ ಪ್ರಭಾವಿತರಾಗಿ ವಯಸ್ಸಾದ ವ್ಯಕ್ತಿಯನ್ನು ಮದುವೆಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ 60 ವರ್ಷದ ತಾತ 25 ವರ್ಷದ ಯುವತಿಯನ್ನು ಮದುವೆಯಾದ ಘಟನೆಯೊಂದು ನಡೆದಿದೆ. ಆ ವ್ಯಕ್ತಿಯ ವಯಸ್ಸು ಬರೋಬ್ಬರಿ 60 ವರ್ಷ. ಹೆಂಡತಿಯನ್ನು ಕಳೆದುಕೊಂಡು ಒಂಟಿಯಾಗಿ ಜೀವಿಸುತ್ತಿದ್ದ. ಈ ನಡುವೆ ಪಕ್ಕದ ಮನೆಯವರ ಜೊತೆಗೆ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡಿದ್ದನು.
ಆಗಾಗ ಪಕ್ಕದ ಮನೆಯ ದಂಪತಿಗಳ ಜೊತೆಗೆ ಮಾತನಾಡಿಕೊಂಡು ಬರುತ್ತಿದ್ದನು. ಆದರೆ ಆ ಮನೆಯಲ್ಲಿ ಆ ದಂಪತಿಗಳಿಗೆ ಒಬ್ಬಳು ಮಗಳು ಇದ್ದಳು ಆಕೆಯು ವಯಸ್ಸಿಗೆ ಬಂದಿದ್ದಳು. 60 ವರ್ಷದ ವ್ಯಕ್ತಿಯೂ ಹೀಗೆ ದಿನಾಲೂ ಪಕ್ಕದ ಮನೆಗೆ ಮಾತನಾಡಿಕೊಂಡು ಬರುವುದು ಮಾಮೂಲಿಯಾಗಿತ್ತು. ಆದರೆ ಆ ವ್ಯಕ್ತಿಯೂ ಯಾರಿಗೂ ಗೊತ್ತಾಗದಂತೆ ದಂಪತಿಯ ಮಗಳ ಜೊತೆಗೆ ಪ್ರೇಮ ಸಂಬಂಧವನ್ನು ಇಟ್ಟುಕೊಂಡಿದ್ದನು. ಆತನು ಆ ದಂಪತಿಯ ಮನೆಗೆ ಹೋಗಲು ಇದು ಮುಖ್ಯ ಕಾರಣವಾಗಿತ್ತು.
60 ವರ್ಷದ ತಾತನ ಪ್ರೀತಿಯ ಬಲೆಯಲ್ಲಿ ಬಿದ್ದಿದ ವಿಚಾರವು ಆಕೆಯ ತಂದೆ ತಾಯಿಗೆ ತಿಳಿಯಿತು. ಈ ವಿಚಾರವಾಗಿ ಮಗಳನ್ನು ತರಾಟೆಗೆ ತೆಗೆದುಕೊಂಡು ಬಿಟ್ಟಿದ್ದರು. ಆದರೆ ಆ ಹುಡುಗಿ ನಾನು ಮದುವೆಯಾದರೆ ಅವರನ್ನು ಮಾತ್ರ, ಇಲ್ಲವಾದರೆ ಒಂಟಿ ಜೀವನ ನಡೆಸುತ್ತೇನೆ ಎಂದು ಪಟ್ಟು ಹಿಡಿದು ಕುಳಿತು ಬಿಟ್ಟಿದ್ದಳು. ಮಗಳ ಪ್ರೀತಿಯ ವಿಚಾರವು ಹೆತ್ತವರಿಗೆ ತಲೆ ನೋವಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ದಂಪತಿಗಳು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು..
ಕೊನೆಗೆ 60 ವರ್ಷದ ತಾತನನ್ನು ವಿಚಾರಣೆಗೆ ಕರೆಸಿದಾಗ ಆಕೆಯೂ ನನ್ನ ಹೆಂಡತಿ, ನನ್ನ ಹೆಂಡತಿಯನ್ನು ನನ್ನಿಂದ ದೂರ ಮಾಡುತ್ತಿದ್ದಾರೆ ಎಂದು ಆ ಹುಡುಗಿಯ ತಂದೆ ತಾಯಿಯ ವಿರುದ್ಧ ದೂರು ನೀಡಿದ್ದನು. ಆದರೆ ಆಕೆಯು ಮಾತ್ರ ಆ ತಾತನನ್ನು ಬಿಡಲು ಸಿದ್ಧವಿಲ್ಲ. ಆ ಪ್ರಕರಣವು ಇತ್ಯರ್ಥವಗದೇ ಪೊಲೀಸರಿಗೂ ಕೂಡ ಯಾರ ಪರವಾಗಿ ಮಾತನಾಡಲು ಆಗದೇ ಸುಮ್ಮನೆ ಇದ್ದಾರೆ. ಇಂತಹ ಪ್ರಕರಣಗಳು ನಮ್ಮ ಸುತ್ತ ಮುತ್ತಲಲ್ಲಿ ಸಾಕಷ್ಟು ನಡೆಯುತ್ತವೆ.