ಮದುವೆ (Marriage) ಎನ್ನುವುದು ಪ್ರತಿಯೊಬ್ಬರ ಬದುಕಿನ ಹೊಸ ಅಧ್ಯಾಯ ಎನ್ನಬಹುದು. ಹೀಗಾಗಿ ಹೆಣ್ಣು ಗಂಡು ಇಬ್ಬರೂ ಕೂಡ ತಮ್ಮ ಮದುವೆಯ ಬಗ್ಗೆ ಸಾವಿರ ಕನಸುಗಳನ್ನು ಕಂಡಿರುತ್ತಾರೆ. ದಾಂಪತ್ಯ ಜೀವನದಲ್ಲಿ ಹೊಂದಿಕೆಯೆನ್ನುವುದು ಕಡಿಮೆ ಯಾಗುತ್ತಿದ್ದಂತೆ ಸತಿ ಪತಿಯರ ನಡುವೆ ಮ-ನಸ್ತಾಪಗಳು ಹೆಚ್ಚಾಗುತ್ತಿದೆ. ಇನ್ನೊಂದೆಡೆ ಮದುವೆಯಾಗಿದ್ದರೂ ಬೇರೆಯವರ ಮೇಲೆ ದಂಪತಿಗಳು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.
ಅದಲ್ಲದೇ ಕೆಲವೊಮ್ಮೆ ಮದುವೆಯಾದ ಕೆಲವೇ ದಿನಕ್ಕೆ ಬದುಕು ಅಂ-ತ್ಯಗೊಳಿಸಿಕೊಂಡ ದಂಪತಿಗಳು ಇದ್ದಾರೆ. ಆದರೆ ಇದೀಗ ಕಾಡುಗೋಡಿ ಪೊಲೀಸ್ ಠಾಣಾ (Kadugodi Police Station) ವ್ಯಾಪ್ತಿಯಲ್ಲಿ ನವ ವಿವಾಹಿತೆ ನೇ-ಣು ಬಿಗಿದ ಸ್ಥಿತಿಯಲ್ಲಿ (Suspicious D-eath)ಪತ್ತೆಯಾಗಿದ್ದು ಎಲ್ಲರಿಗೂ ಕೂಡ ಶಾ-ಕ್ ನೀಡಿದೆ.
ಈ ನವವಿವಾಹಿತೆಯನ್ನು 26 ವರ್ಷದ ಕೃಷ್ಣವೇಣಿ (Krishanaveni) ಎಂದು ಗುರುತಿಸಲಾಗಿದೆ. ಈ ಯುವತಿಯು ಮೂರು ತಿಂಗಳ ಹಿಂದೆಯಷ್ಟೇ ಕೋಲಾರ (Kolar) ಮೂಲದ 36 ವರ್ಷದ ಪೃಥ್ವಿರಾಜ್ (Pruthviraj) ಎಂಬ ವ್ಯಕ್ತಿಯ ಜೊತೆಗೆ ಹೊಸ ಬದುಕಿಗೆ ಕಾಲಿಟ್ಟಿದ್ದಳು. ಪೃಥ್ವಿರಾಜ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಸುಖವಾಗಿ ಸಂಸಾರ ಮಾಡಬೇಕಾಗಿದ್ದ ಕೃಷ್ಣವೇಣಿಯು ಬದುಕಿಗೆ ವಿದಾಯ ಹೇಳಿದ್ದನ್ನು ಕಂಡು ಕುಟುಂಬಸ್ಥರು ಶಾಕ್ ಆಗಿದ್ದಾರೆ.
ಪೃಥ್ವಿರಾಜ್ ಅವರೇ ಹ-ತ್ಯೆ ಮಾಡಿ ನೇ-ಣು ಹಾಕಿದ್ದಾನೆ ಎಂದು ಮೃ-ತ ಯುವತಿಯ ಕುಟುಂಬಸ್ಥರು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೇ ಮದುವೆಯಾದ ಎರಡೇ ತಿಂಗಳಿಗೆ ಪತಿ ಕಿ-ರಿಕಿರಿ ಶುರು ಮಾಡಿದ್ದನು. ಮೂರು ತಿಂಗಳಿಗೆ ನಾಲ್ಕೈದು ಬಾರಿ ಜ-ಗಳ ಮಾಡಿ ಕೃಷ್ಣವೇಣಿಯನ್ನು ತವರು ಮನೆಗೂ ಕಳುಹಿಸಿದ್ದನು. ಆದರೆ ಕಳೆದ ಗುರುವಾರವು ಕು-ಡಿದು ಬಂದು ಗಲಾಟೆ ಮಾಡಿದ್ದು, ಮಗಳ ಜೀವ ತೆಗೆದಿದ್ದಾನೆ. ಕೃಷ್ಣವೇಣಿ ಎರಡು ತಿಂಗಳ ಗರ್ಭಿಣಿ ಆಗಿದ್ದಳು ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.
ಅಷ್ಟೇ ಅಲ್ಲದೇ, ಪತಿ ಪೃಥ್ವಿರಾಜ್‌ನನ್ನು ಬಂ-ಧಿಸುವಂತೆ ಕಾಡುಗೋಡಿ ಠಾಣೆ (Kadugodi Station) ಮುಂದೆ ಕೃಷ್ಣವೇಣಿ ಕುಟುಂಬಸ್ಥರು ಮಟ್ಟು ಹಿಡಿದಿದ್ದಾರೆ. ಈ ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದು ಮೃ-ತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯಕ್ಕೆ ತನಿಖೆ ನಡೆಸುತ್ತಿದ್ದಾರೆ.