ಹೊಸ ವರುಷ 2023ರಲ್ಲಿ ಈ ಆರು ರಾಶಿಯವರಿಗೆ ಒಲಿದು ಬರಲಿದೆ ಮದುವೆಯ ಹರುಷ.. ಕಂಕಣ ಭಾಗ್ಯ ಕೂಡಿ ಬರಲಿರುವ ಈ ಆರು ರಾಶಿ ಯಾವವು?

2023 marriage prediction /horoscope : ಭಾರತೀಯ ಸಂಪ್ರದಾಯದಲ್ಲಿ ಮದುವೆ ಎಂಬುದು ಪ್ರತಿಯೊಬ್ಬರ ಜೀವನದ ಮಹತ್ವದ ಘಟ್ಟ. ಗುಣ, ನಡತೆ, ಆಸೆ- ಆಕಾಂಕ್ಷೆಗಳಲ್ಲಿ ತಮಗೆ ಹೊಂದಾಣಿಕೆಯಾಗುವ ಬಾಳ ಸಂಗಾತಿಯನ್ನು ಆಯ್ದುಕೊಂಡು, ದಾಂಪತ್ಯದ ಜೀವನವನ್ನು ಸಾಗಿಸಲು ಪ್ರತಿಯೊಬ್ಬರೂ ಎಚ್ಚರಿಕೆಯ ಹೆಜ್ಜೆಗಳನ್ನಿಡಬೇಕಾಗುತ್ತದೆ. ಇನ್ನು ಕೆಲವೇ ದಿನಗಳಲ್ಲಿ 2022 ಕಳೆದು 2023 ನೇಯ ಇಸವಿಯು ಪ್ರಾರಂಭವಾಗಲಿದೆ. ಈ ವರ್ಷವು ಯಾವ ಯಾವ ರಾಶಿಯವರಿಗೆ ವಿವಾಹ ಭಾಗ್ಯವನ್ನು ಕರುಣಿಸಲಿದೆ ಎಂಬುದನ್ನು ತಿಳಿಯೋಣ.

ಹೊಸ ವರುಷ, 2023ರಲ್ಲಿ ಈ ಆರು ರಾಶಿಯವರಿಗೆ ಒಲಿದು ಬರಲಿದೆ ಮದುವೆಯ ಹರುಷ… ಕಂಕಣ ಭಾಗ್ಯ ಕೂಡಿ ಬರಲಿರುವ ಈ ಆರು ರಾಶಿ ಯಾವವು?

ಮೇಷ ರಾಶಿ (Aries) : ಅವಿವಾಹಿತರಾಗಿರುವ, ಮದುವೆಯ ವಯಸ್ಸಿಗೆ ಬಂದು ನಿಂತಿರುವ ಮೇಷ ರಾಶಿಯ ಕುಮಾರ ಕುಮಾರಿಯರಿಗೆ, ಮನೆಯಲ್ಲಿ 2023ರ ಹೊಸ ವರುಷದ ಪ್ರಾರಂಭದಲ್ಲಿಯೇ ಮದುವೆಯ ಬಗ್ಗೆ ಪ್ರಸ್ತಾಪಗಳು ಹೆಚ್ಚಾಗಿ, ಏಪ್ರಿಲ್ ನಿಂದ ಆಗಸ್ಟ್ ತಿಂಗಳ ವೇಳೆಗೆ ಮದುವೆಯ ಕುರಿತಾಗಿ ದೃಢ ನಿರ್ಧಾರಕ್ಕೆ ಬರಲಿದ್ದಾರೆ. ಮದುವೆಯ ಕುರಿತಾಗಿ ಅತಿಯಾದ ಚಿಂತೆಯು ಬೇಡ; ಕುಟುಂಬದ ಸಂಪೂರ್ಣ ಒಪ್ಪಿಗೆ ದೊರಕಿ, ಈ ರಾಶಿಯವರ ವಿವಾಹವು ನೆರವೇರಲಿದೆ.

ವೃಷಭ ರಾಶಿ (Taurus) : ವಧು-ವರರನ್ನು ಹುಡುಕುತ್ತಿರುವ ವೃಷಭ ರಾಶಿಯ ಜನರಿಗೆ 2023ರ ಜುಲೈ ತಿಂಗಳು ಮದುವೆಗೆ ಹೆಚ್ಚು ಸೂಕ್ತ. ದಾಂಪತ್ಯ ಜೀವನದ ಪ್ರಾರಂಭವೂ ಸುಖಮಯವಾಗಿ ಕಂಡರೂ 2023ರ ಕೊನೆಯಲ್ಲಿ ಮನಸ್ತಾಪಗಳು ಉಂಟಾಗಬಹುದು. ಎದುರಾದ ತೊಳಲಾಟವನ್ನು ತಾಳ್ಮೆಯಿಂದ ಗೆದ್ದರೆ ಮುಂದಿನ ಜೀವನವೂ ಉತ್ತಮವಾಗಿ ಸಾಗಲಿದೆ.

ಸಿಂಹ ರಾಶಿ (Leo) : ಸಿಂಹ ರಾಶಿಯ ಪ್ರೇಮಿಗಳಿಗೆ ವಿವಾಹದ ಮೂಲಕ ಒಂದಾಗಿ ಜೀವನ ನಡೆಸಲು 2023 ಸೂಕ್ತವಾದ ವರ್ಷ. ಕಳೆದೆರಡು ವರ್ಷಗಳಿಂದಲೂ ಬಾಳ ಸಂಗಾತಿಯನ್ನು ಹುಡುಕುತ್ತಿರುವವರಿಗೆ ಮತ್ತು 2023 ರಿಂದ ವಿವಾಹದ ಪ್ರಸ್ತಾಪವನ್ನು ಪ್ರಾರಂಭಿಸುವವರಿಗೆ ವರ್ಷಾಂತ್ಯದೊಳಗೆ ಹೊಂದಾಣಿಕೆಯಾಗುವ ವಧು ವರರು ದೊರೆಯಲಿದ್ದಾರೆ.

ತುಲಾ ರಾಶಿ (Libra) : ಪ್ರೀತಿಸಿದವರಿಗೆ 2023ರ ಪ್ರಾರಂಭದಲ್ಲಿ ಕುಟುಂಬಸ್ಥರಿಂದ ಸಮ್ಮತಿಯು ದೊರಕದೆ ಸಮಸ್ಯೆಗಳು ಎದುರಾಗಬಹುದು. ಆದರೆ ಈ ವರ್ಷವೂ ಮುಗಿಯುವುದರ ಒಳಗೆ ನಿಮ್ಮ ಕುಟುಂಬಸ್ಥರನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿ, ನಿಮ್ಮ ವಿವಾಹವು ನಿಮ್ಮಿಷ್ಟದ ಸಂಗಾತಿಯೊಂದಿಗೆ ನೆರವೇರಲಿದೆ.

ವೃಶ್ಚಿಕ ರಾಶಿ (Scorpio) : ಈ ವರ್ಷವೂ ಮದುವೆಗಾಗಿ ವಧು-ವರರ ಹುಡುಕಾಟವು ಭರದಿಂದಲೇ ಸಾಗಲಿದ್ದು, 2023ರಲ್ಲಿ ಮಂಗಳ ಧಾರಣೆಯ ಶುಭಕಾರ್ಯವು ನಡೆಯಲಿದೆ. ಸಣ್ಣಪುಟ್ಟ ಸಮಸ್ಯೆಗಳು ಮನೆಯಲ್ಲಿ ಎದುರಾದರು, ಹಣಕಾಸಿನ ವಿಚಾರವಾಗಿ ಭಿನ್ನಾಭಿಪ್ರಾಯಗಳು ಹೊರಬಂದರೂ ಶಾಂತ ರೀತಿಯಿಂದಲೇ ವಿವಾಹ ಕಾರ್ಯವು ಜರುಗಲಿದೆ.

ಯಾವ ರಾಶಿಯವರು ಯಾವ ರಾಶಿಯವರನ್ನ ಮದುವೆ ಆದ್ರೆ ಸಂಸಾರ ಸುಖಕರವಾಗಿರುತ್ತೆ ಗೊತ್ತೇ? ಇಲ್ಲಿದೆ ನೋಡಿ ಮಾಹಿತಿ!!

ಕುಂಭ ರಾಶಿ (Aquarius) : 2023ರ ಪ್ರಾರಂಭದಲ್ಲಿ ಪ್ರೇಮಿಗಳ ನಡುವೆ ಮನಸ್ತಾಪಗಳು ಎದುರಾಗಲಿದ್ದು, ಮದುವೆಯ ಮಾತು ಕಥೆಗಳು ನಡೆದಿದ್ದರೆ ಮುರಿದು ಬೀಳುವ ಸಾಧ್ಯತೆಗಳು ಇರುವಂತೆ ಕಂಡರೂ ಆಗಷ್ಟ್ ತಿಂಗಳ ನಂತರದಲ್ಲಿ ವೈಮನಸುಗಳು ಕರಗಿ, ಎಲ್ಲವೂ ತಿಳಿಯಾಗಿ ಸಂಬಂಧಗಳು ಇನ್ನೂ ಗಟ್ಟಿಯಾಗಿ, ಕಂಕಣ ಭಾಗ್ಯವು ಕೂಡಿ ಬರಲಿದೆ.

Leave a Reply

Your email address will not be published. Required fields are marked *