ಈ ವರ್ಷದ ಮಾರ್ಚ್ ಕೊನೆಗೆ ಭಾರತದ ವಿದೇಶಿ ಸಾಲವು ಎಷ್ಟು ಕೋಟಿಯಿತ್ತು ಗೊತ್ತಾ? ಮರು ಪಾವತಿಯಾದ ಸಾಲವೇಷ್ಟು? ಇಲ್ಲಿದೆ ನೋಡಿ ಅಸಲಿ ವಿಚಾರ!

ಭಾರತವು ಅಭಿವೃದ್ಧಿ ಹೊಂದುತ್ತಿರುವ (Devoloping) ರಾಷ್ಟ್ರಗಳಲ್ಲಿ ಒಂದು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಇನ್ನಿತ್ತರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಈ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ಬಡತನ ರೇಖೆ (Poverty line) ಗಿಂತ ಕಡಿಮೆ ಇದ್ದವರು, ಮಧ್ಯಮವರ್ಗದ ಜನರು ಶ್ರೀಮಂತ ಜನರು ಇದ್ದಾರೆ.ಇನ್ನೊಂದೆಡೆ ಭಾರತದಲ್ಲಿ ವೈವಿಧ್ಯತೆಯಲ್ಲಿ ಕಾಣಬಹುದಾಗಿದೆ.

ಭಾರತ ದೇಶದಲ್ಲಿ ವಿವಿಧ ಜಾತಿ, ಧರ್ಮ, ಜನಾಂಗ, ಭಾಷೆ, ಸಂಸ್ಕೃತಿ ಹೀಗೆ ನಾನಾ ರೀತಿಯ ವೈವಿದ್ಯತೆಗಳನ್ನು ಒಳಗೊಂಡಿದೆ. ಇಷ್ಟೆಲ್ಲಾ ವೈವಿಧ್ಯತೆಯನ್ನು ಹೊಂದಿರುವ ಭಾರತಿಯರು ಯಾವುದರಲ್ಲಿ ಕಡಿಮೆಯಿಲ್ಲ ಎನ್ನಬಹುದು. ಇತ್ತ ಭಾರತೀಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಕೈಯನ್ನು ಆಡಿಸುತ್ತಿದ್ದಾರೆ.

ಆದರೆ ಭಾರತದಂತಹ ದೇಶವು ಎಷ್ಟೇ ಅಭಿವೃದ್ಧಿಯತ್ತ ಸಾಗುತ್ತಿದ್ದರೂ ಕೂಡ ವಿದೇಶಿ ಸಾಲದ ಹೊರೆಯು ಭಾರತದ ಮೇಲಿದೆ. ಹೀಗಾಗಿ ಈ ಸಾಲದ ಹೊರೆಯನ್ನು ಭರಿಸಬೇಕಾದ ಜವಾಬ್ದಾರಿ (Responsibility) ಯನ್ನು ಭಾರತವು ಹೊತ್ತು ಕೊಂಡಿದೆ. ಆದರೆ ಇದೀಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Union Finance Minister Nirmala Sitharaman) ಅವರು ಭಾರತದ ವಿದೇಶಿ ಸಾಲದ ಕುರಿತು ಮಾಹಿತಿಯನ್ನು ನೀಡಿದ್ದಾರೆ.

2023ರ ಮಾರ್ಚ್‌ ಅಂತ್ಯಕ್ಕೆ ಭಾರತದ ವಿದೇಶಿ ಸಾಲವು ₹51.92 ಲಕ್ಷ ಕೋಟಿ ಆಗಿದ್ದು, ಸಾಲ ಮರುಪಾವತಿಸಲು ಲಭ್ಯವಿರುವ ನಗದು ಪ್ರಮಾಣವು ಶೇ 5.3ರಷ್ಟಾಗಿದೆ ಎಂದು ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ 2022-23ರ ಸ್ಥಿತಿಯ ವರದಿ’ಯಲ್ಲಿ ಈ ಬಗ್ಗೆ ಹೇಳಿಕೊಂಡಿದ್ದು,ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) ಹಾಗೂ ವಿದೇಶಿ ಸಾಲದ ಅನುಪಾತವು 2021-22ರ ಮಾರ್ಚ್‌ ಅಂತ್ಯದಲ್ಲಿ ಶೇ 20ರಷ್ಟು ಇತ್ತು. ಆದರೆ 2022-23ರ ಮಾರ್ಚ್ ಅಂತ್ಯಕ್ಕೆ ಶೇ 18.9ಕ್ಕೆ ಇಳಿಕೆಯಾಗಿದೆ.

ಸಾಲ ಮರುಪಾವತಿಸಲು ಲಭ್ಯ ಇರುವ ನಗದು ಪ್ರಮಾಣ 2021-22ರಲ್ಲಿ ಶೇ 5.2 ಇತ್ತು. ಆದರೆ ಇದೀಗ 2022-23ರಲ್ಲಿ ಶೇ 5.3ಕ್ಕೆ ಇದೆ. 2021-22ಕ್ಕೆ ಹೋಲಿಕೆ ಮಾಡಿದರೆ ಈ ವರ್ಷದಲ್ಲಿ ಸಾಲ ಮರುಪಾವತಿಸಲು ಲಭ್ಯ ಇರುವ ನಗದು ಅಲ್ಪ ಏರಿಕೆ ಕಂಡಿದೆ. ಬೇರೆ ಇತರ ದೇಶಗಳಿಗೆ ಹೋಲಿಕೆ ಮಾಡಿದರೆ, ಭಾರತದ ಬಾಹ್ಯ ಸಾಲವು ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ಬಹುತೇಕ ದೇಶಗಳಿಗಿಂತಲೂ ಉತ್ತಮ ಮಟ್ಟದಲ್ಲಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *