ತೆಲಂಗಾಣದ ರಾಜಣ್ಣ ಸಿರ್ಸಿಲ್ಲ ಜಿಲ್ಲೆಯಲ್ಲಿ 18 ವರ್ಷದ ಮಗಳು ನಾಲ್ವರು ಅಪರಿಚಿತರ ಜೊತೆ ಓಡಿ ಹೋಗಿ ಕಾಣೆಯಾಗಿದ್ದಾಳೆ ಎಂದು ವ್ಯಕ್ತಿ ಒಬ್ಬ ದೂರು ಕೊಟ್ಟಿದ್ದ. ಈ ದೂರು ಕೊಟ್ಟ ಕೆಲವೇ ಗಂಟೆಗಳ ನಂತರ ಈ ಪ್ರಕರಣಕ್ಕೆ ಆಸಕ್ತಿದಾಯಕ ಟ್ವಿಸ್ಟ್ ಸಿಕ್ಕಿದೆ. ತೆಲಂಗಾಣದ 18 ವರ್ಷದ ಹುಡುಗಿ ತಂದೆಯೊಂದಿಗೆ ಬೆಳಿಗ್ಗೆ ದೇವಸ್ಥಾನಕ್ಕೆ ಹೊರಟಿದ್ದರು. ಇನ್ನೇನು ದೇವಸ್ಥಾನಕ್ಕೆ 50 ಮೀಟರ್ ಇದೆ ಎನ್ನುವಾಗ..
ಮಾರುತಿ ಕಾರಿನಲ್ಲಿ ನಾಲ್ಕು ಜನರು ಬಂದು ಆ ಹುಡುಗಿಯನ್ನು ಎತ್ತಾಕೊಂಡು ಕಾರಿನಲ್ಲಿ ಹರಿಸಿಕೊಂಡು ಹೋಗಿದ್ದಾರೆ. ತಂದೆಯ ಎದುರಿಗೆ ನಾಲ್ಕು ಜನ ಹುಡುಗರು 18 ವರ್ಷದ ಮಗಳನ್ನು ಬಲವಂತವಾಗಿ ಎಳೆದೊಯ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮಗಳನ್ನು ಅಪಹರಿಸಿ ಕೊಂಡು ಹೋದ ಕೆಲವೇ ಗಂಟೆಯಲ್ಲಿ ಪೊಲೀಸ್ ಸ್ಟೇಷನ್ ಗೆ ಹೋಗಿ ತಂದೆ ದೂರು ದಾಖಲು ಮಾಡಿದ್ದಾರೆ.. ಆದರೆ ಕಥೆಗೆ ಟ್ವಿಸ್ಟ್ ಸಿಕ್ಕಿದ್ದು ಇಲ್ಲಿಯೇ ನೋಡಿ..
ತನಿಖೆಯನ್ನು ಪ್ರಾರಂಭಿಸಿದ ಪೊಲೀಸರಿಗೆ ಅಚ್ಚರಿಯ ಮಾಹಿತಿ ಸಿಕ್ಕಿದೆ. ಅದುವೆಂದರೆ ಕಾಣೆಯಾಗಿರುವ ಹುಡುಗಿಗೆ ಆ ನಾಲ್ಕು ಜನ ಹುಡುಗರು ಮುಂಚೆಯೇ ಪರಿಚಯವಿದ್ದರು. ಅಷ್ಟೇ ಅಲ್ಲದೆ ಆ ನಾಲ್ಕು ಜನರಲ್ಲಿ ಒಬ್ಬನ ಜೊತೆ ಈಕೆಗೆ ಒಂದು ವರ್ಷದ ಮುಂಚೆಯೇ ಮದುವೆಯಾಗಿತ್ತು. ಅವರಿಬ್ಬರೂ 2 ವರ್ಷದಿಂದ ಪ್ರೀತಿ ಮಾಡ್ತಾ ಇದ್ದರು. ಆದರೆ ಈಕೆ 18 ವರ್ಷ ತುಂಬಿರಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಮನೆಯಲ್ಲಿ ಈ ವಿಷಯ ಗೊತ್ತಾಗಿ ದೊಡ್ಡ ವಿವಾದ ಸೃಷ್ಟಿಯಾಗಿತ್ತು. ಮಗಳು ಬೇರೊಬ್ಬನ ಜೊತೆ ಓಡಿ ಹೋಗಿ ಮದುವೆಯಾಗಿದ್ದಾಳೆ ಎಂಬ ವಿಷಯ ತಿಳಿದ ತಕ್ಷಣವೇ ಆ ಹುಡುಗಿಯ ತಂದೆ ಆ ಹುಡುಗನ ಮೇಲೆ ಕಂಪ್ಲೇಂಟ್ ಹಾಕಿ, ಅವನನ್ನು ಜೈಲಿಗೆ ಕಳಿಸಿದ್ದರು.
18 ವರ್ಷಕಿಂತ ಕಿರಿಯ ವಯಸ್ಸಿನ ಹುಡುಗಿಯನ್ನು ಮದುವೆಯಾದರೆ ಕಾನೂನಿನ ಪ್ರಕಾರ ಅಪರಾಧ. ಆದಕಾರಣ ಈ ಹುಡುಗನಿಗೆ ಜೈಲು ಶಿಕ್ಷೆ ಆಯ್ತು. ಇದೀಗ ಈ ಹುಡುಗ ಹೊರಗೆ ಬಂದು ಅದೇ ಹುಡುಗಿಗೆ 18 ವರ್ಷ ತುಂಬಿದ ಮೇಲೆ.. ಆಕೆಯನ್ನು ಇದೀಗ ಅಪಹರಿಸಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆ. ಈ ಕಥೆ ಗೆ ದೊಡ್ಡ ಟ್ವಿಸ್ಟ್ ಏನೆಂದರೆ ಅಪರಿಸಿದ ಈ ನಾಲ್ಕು ಜನ ಯುವಕರಿಗೆ ಹುಡುಗಿಯೆ ಸಪೋರ್ಟ್ ಮಾಡಿದ್ದಳು.
ಆಕೆಯ ಮನೆಯಲ್ಲಿ ಆ ಹುಡುಗನನ್ನ ಮದುವೆಯಾಗಲು ವಿರೋಧ ಇತ್ತು. ಆದರೆ ಆಕೆಗೆ ಆ ಹುಡುಗನ ಮೇಲೆ ಪ್ರೀತಿ ಇತ್ತು. ಈಕೆ ಕೂಡ 18 ವರ್ಷ ತುಂಬಲಿ ಎಂದು ಕಾಯುತ್ತಿದ್ದಳು.ಯಾವಾಗ ಈ ಹುಡುಗಿಗೆ 18 ವರ್ಷ ತುಂಬುತ್ತೋ..
#Telangana : In a filmy-style incident in broad daylight, a woman was kidnapped in Mudapalli of #Chandurthi Mandal in Rajanna #Sircilla district on Tuesday. Four men, who came in a car, whisked away the woman while she was returning from a temple. pic.twitter.com/Cmumm6z8Py
— NewsTAP (@newstapTweets) December 20, 2022
ಈಕೆ ಆತನ ಬಾಯ್ ಫ್ರೆಂಡ್ ಗೆ ಹೇಳಿ ತನ್ನನ್ನು ಕಿ-ಡ್ನಾಪ್ ಮಾಡುವಂತೆ ಐಡಿಯಾ ಕೊಟ್ಟಳು. ತಾನು ಇಷ್ಟು ಸಮಯಕ್ಕೆ ದೇವಸ್ಥಾನಕ್ಕೆ ತಂದೆ ಜೊತೆ ಬರುತ್ತೇನೆ ಅದೇ ಸಮಯಕ್ಕೆ ನನ್ನನ್ನು ಅಪರಿಚಿಕೊಂಡು ಹೋಗಿ.. ನಂತರ ಇನ್ನೊಂದು ದೇವಸ್ಥಾನದಲ್ಲಿ ಮದುವೆ ಆಗುವ ಪ್ಲಾನ್ ನೀಡಿದಳು..ಈ ಜೋಡಿ ದೇವಸ್ಥಾನದಲ್ಲಿ ಮದುವೆಯಾಗಿರುವ ಫೋಟೋ ಇದೀಗ ಹರಿದಾಡುತ್ತಿದೆ.
ಅಷ್ಟೇ ಅಲ್ಲದೆ ಈ ಜೋಡಿ ಮದುವೆ ಆಗುತ್ತಿರುವ ವಿಡಿಯೋ ಕೂಡ ಪೊಲೀಸರಿಗೆ ಸಿಕ್ಕಿದೆ . ಕಾಣೆಯಾಗಿದ್ದಾಳೆ ಎಂದು ದೂರು ಮಾಡಿರುವ ಯುವತಿ, ನಗುನಗುತ್ತಾ ಅಪಹರಿಸಿ ಕೊಂಡು ಹೋದ ಯುವಕನ ಜೊತೆ ಮದುವೆ ಆಗಿರೋ ಫೋಟೋ ನೋಡಿ ಪ್ರತಿಯೊಬ್ಬರಿಗೂ ಆಶ್ಚರ್ಯವಾಗಿದೆ. ಸ್ವತಃ ತೆಲಂಗಾಣದ ಡಿಎಸ್ಪಿ ನಾಗೇಂದ್ರ ಅವರೇ ಈ ಒಂದು ಸ್ಟೋರಿ ಕೇಳಿ ಆಶ್ಚರ್ಯ ಚಕಿತರಾಗಿದ್ದಾರೆ.
ಸದ್ಯಕ್ಕೆ ಆ ಹುಡುಗಿ ತನ್ನ ಲವರ್ ಜೊತೆ ಮದುವೆಯಾಗಿ ಓಡಿ ಹೋಗಿದ್ದಾಳೆ. ಇಲ್ಲಿಯ ವರೆಗೆ ಅವರ ಸುಳಿವು ಸಿಕ್ಕಿಲ್ಲ. ಕೇವಲ ಈ ಜೋಡಿ ಮದುವೆ ಆಗಿರುವ ಫೋಟೋ ಮತ್ತು ವಿಡಿಯೊ ಮಾತ್ರ ಲಭ್ಯವಿದೆ. ತಂದೆ ತನ್ನ ಮಗಳ ಬರುವಿಕೆಗೆ ಕಾಯುತ್ತಿದ್ದಾರೆ. ಇನ್ನೊಂದು ಕಡೆ ಪೊಲೀಸರು ಆ ನಾಲ್ಕು ಯುವಕರನ್ನು ಮತ್ತು ಹುಡುಗಿಯನ್ನು ಹುಡುಕುವ ಹುಡುಕಾಟದಲ್ಲಿದ್ದಾರೆ. ಈ ಯುವಕರನ್ನು ಹಿಡಿಯುವುದಕ್ಕೆ ಮೂರು ಪೊಲೀಸ್ ಟೀಮ್ಡಿ ಅನ್ನು DSP ಅವರು ರೆಡಿ ಮಾಡಿದ್ದಾರಂತೆ.