ಹೆಂಡತಿಗೆ ಬೇರೆ ಗಂಡಸಿನ ಜೋತೆ ಸಂಬಂಧ ಇದೆ ಎಂದು ಅನುಮಾನ ಮಾಡಿದ ಗಂಡ ಹೆಂಡತಿಗೆ ಮಾಡಿದ್ದೇನು ನೋಡಿ!! ಭಯಂಕರ ಅಪರಾಧ ಮಾಡಿದ ಪತಿರಾಯ!!

Babu byanergy wife : ದಿನ ಬೆಳಗಾದರೆ ನಾನಾ ರೀತಿಯ ಸುದ್ದಿಗಳನ್ನು ಕೇಳುತ್ತಿರುತ್ತೇವೆ. ಅದರಲ್ಲಿಯೂ ದಾಂಪತ್ಯ ಜೀವನದಲ್ಲಿ ಬಿರುಕು, ಭಿನ್ನಾಭಿಪ್ರಾಯ, ಜಗಳ, ಮನಸ್ತಾಪ, ಕೊ-ಲೆ, ಆತ್ಮ- ಹತ್ಯೆ ಸೇರಿದಂತೆ ಈ ರೀತಿಯ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತಿರುತ್ತದೆ. ಅದರಲ್ಲಿಯೂ ಮದುವೆಯಾದ ಬಳಿಕ ಅನೈತಿಕ ಸಂಬಂಧಗಳು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.

ಈ ಸಂಬಂಧಗಳೇ ಹಲವು ಅನಾಹುತಗಳಿಗೆ ಕಾರಣವಾಗಿದೆ. ಅನೈತಿಕ ಸಂಬಂಧದ ಅನುಮಾನದ ಹಿನ್ನೆಲೆಯಲ್ಲಿ ಪತಿ ಪತ್ನಿಯನ್ನು ಕೊ-ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಮಂಗಳವಾರ ಸೋನಾರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತಳ ಹೆಸರು ಮೌಸುಮಿ ಬ್ಯಾನರ್ಜಿ.

ಹೌದು, ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಲ್ತಬೇರಿ ಗ್ರಾಮದಲ್ಲಿ ಮೌಸುಮಿ ತಂದೆಯ ಮನೆಯಿದೆ. ಮೌಸುಮಿ ಸುಮಾರು 20 ವರ್ಷಗಳ ಹಿಂದೆ ಬಾಬು ಬ್ಯಾನರ್ಜಿ ಅವರನ್ನು ವಿವಾಹವಾದರು. ಈ ದಂಪತಿಗೆ 18 ವರ್ಷದ ಮಗ ಮತ್ತು 12 ವರ್ಷದ ಮಗಳಿದ್ದಾರೆ. ಆದರೆ ಬಾಬು ತನ್ನ ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ಎನ್ನಲಾಗಿದೆ.

ತನ್ನ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಬಾಬು ಯೋಚಿಸಿದ್ದು, ಈ ಅನುಮಾನದ ಕಾರಣ ಪತ್ನಿಯೊಂದಿಗೆ ಆಗಾಗ್ಗೆ ಜಗಳ ಕೂಡ ಆಗುತ್ತಿತ್ತುಎನ್ನಲಾಗಿದೆ. ಮಂಗಳವಾರವೂ ಅನುಮಾನದಿಂದ ಬಾಬು ಪತ್ನಿ ಮೇಲೆ ಹ-ಲ್ಲೆ ನಡೆಸಿದ್ದಾನೆ. ಬಾಬು ಮೌಶುಮಿ ಪತ್ನಿಯ ತಲೆಗೆ ದೊಣ್ಣೆಯಿಂದ ಹೊಡೆದು ಕೊ-ಲೆ ಮಾಡಿದ್ದಾನೆ ಎನ್ನಲಾಗಿದೆ.

ಹೀಗಾಗಿ ಮೌಸುಮಿಯ ಕುಟುಂಬವು ಸೋನಾರ್‌ಪುರ ಪೊಲೀಸ್ ಠಾಣೆಯಲ್ಲಿ ಕೊ-ಲೆ ಪ್ರಕರಣವನ್ನು ದಾಖಲಿಸಿದೆ. ಸೋನಾರ್‌ಪುರ ಪೊಲೀಸ್ ಠಾಣೆಯ ಪೊಲೀಸರು ಘಟನೆಯ ತನಿಖೆ ಆರಂಭಿಸಿದ್ದಾರೆ. ಈ ಘಟನೆಯ ನಂತರ ಪತಿ ಬಾಬು ಬ್ಯಾನರ್ಜಿ ತಲೆಮರೆಸಿಕೊಂಡಿದ್ದಾನೆ. ಆರೋಪಿಗಾಗಿ ಪೊಲೀಸರು ಈಗಾಗಲೇ ಹುಡುಕಾಟ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *