ಹಾಸಿಗೆ ಹಿಡಿದ ಲೀಲಾವತಿ ನನ್ನ ಮಗನ ಕೈ ಬಿಡಬೇಡಿ ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿರುವ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಎಂಥವರ ಮನಸ್ಸಾದ್ರೂ ಕರಗತ್ತೆ. ಒಮ್ಮೆ ನೀವು ನೋಡಿ.

ನಮಸ್ತೆ ಪ್ರೀತಿಯ ವೀಕ್ಷಕರೆ ಚಂದನವನದಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ 80 ಹಾಗೂ 90 ದಶಕದಲ್ಲಿ ಅದೆಷ್ಟೋ ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿದ್ದ ನಟಿ ಲೀಲಾವತಿ. ನಟಿ ಲೀಲಾವತಿ ಕನ್ನಡ ಮಾತ್ರವಲ್ಲದೆ ತೆಲುಗು ಹಾಗೂ ತಮಿಳು ಸಿನೆಮಾರಂಗದಲ್ಲಿಯೂ ಸಹ ಅಭಿನಯಿಸಿ ದೊಡ್ಡ ಮಟ್ಟದಲ್ಲಿ ಯಶಸ್ಸುನ್ನು ಕಂಡಿದ್ದಾರೆ.

ಇನ್ನು ನಟಿ ಲೀಲಾವತಿ ಅವರು ತಮ್ಮ ಸಿನೆಮಾ ಜರ್ನಿಯಲ್ಲಿ ಸರಿ ಸುಮಾರು 600ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲಿಯೂ 400ಕ್ಕೂ ಹೆಚ್ಚು ಸಿನೆಮಾಗಳು ಕನ್ನಡದಲ್ಲಿಯೇ ಮಾಡಿದ್ದಾರೆ. ಇನ್ನು ತಮ್ಮ ಅಭಿನಯಕ್ಕೆ ಅದೆಷ್ಟೋ ಪ್ರಶಸ್ತಿಗಳನ್ನು ತಮ್ಮ ಮೂಡಿಗೆರಿಸಿಕೊಂಡಿದ್ದಾರೆ ನಟಿ ಲೀಲಾವತಿ ಅಮ್ಮನವರು.

ಅಂದಿನ ಕಾಲದ ಸಿನೆಮಾರಂಗದ ದಿಗ್ಗಜರುಗಳಾದ ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಶಂಕರ್ ನಾಗ್, ಅನಂತ್ ನಾಗ್, ಶ್ರೀನಾಥ್ ಸೇರಿದಂತೆ ಇನ್ನು ಸಾಕಷ್ಟು ಸ್ಟಾರ್ ಕಲಾವಿದರ ಜೊತೆ ನಟಿ ಲೀಲಾವತಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇವರು ಅಭಿನಯದ ಸಾಕಷ್ಟು ಸಿನೆಮಾಗಳು ಸೂಪರ್ ಹಿಟ್ ಕೂಡ ಆಗಿದೆ. ಇನ್ನು ಈ ನಟಿಗೆ ವಯಸ್ಸಗಿದ್ದು ಕೆಲವು ವರ್ಷಗಳಿಂದ ಕೆಲಸ ಇಲ್ಲದೆ ಚಿತ್ರರಂಗದಿಂದ ದೂರ ಉಳಿದಿದ್ದರೆ.

ಇನ್ನು ನಟಿ ಲೀಲಾವತಿ ಜೊತೆಗೆ ಅವರ ಮಗ ವಿನೋದ್ ರಾಜ್ ಕೂಡ ಸಿನೆಮಾರಂಗದಿಂದ ಸಂಪೂರ್ಣ ದೂರ ಉಳಿದು ಬಿಟ್ಟಿರುವ ವಿಷಯ ನಿಮಗೆಲ್ಲರಿಗೂ ಕೂಡ ಗೊತ್ತೇ ಇದೆ. ಇನ್ನು ಕೂಡ ಹಳ್ಳಿಯಲ್ಲಿ ತೋಟ ನೋಡಿಕೊಂಡು, ವ್ಯವಸಾಯ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ನಿಜಕ್ಕೂ ಅಂದು ಕನ್ನಡ ಸಿನೆಮಾರಂಗದಲ್ಲಿ ಟಾಪ್ ನಟಿಯಾಗಿ ಮೆರೆದವರು ಇಂದು ಈ ಸ್ಥಿತಿಯಲ್ಲಿ ನೋಡಲು ಬಾಲು ಬೇಸರದ ಸಂಗತಿ.

ಇನ್ನು ಇವರ ಜೀವನದಲ್ಲಿ ಸಾಕಷ್ಟು ನೋವು ಮತ್ತು ಅವಮಾನಗಳನ್ನು ಅನುಭವಿಸಿದ್ದರು ಕೂಡ ಅದು ಯಾವುದಕ್ಕೂ ಸಹ ಕುಗ್ಗದೆ ನಟಿ ಲೀಲಾವತಿ ಮತ್ತು ವಿನೋದ್ ರಾಜ್ ತಮ್ಮ ಹಳ್ಳಿಯಲ್ಲಿ ವ್ಯವಸಾಯ ಮಾಡಿಕೊಂಡು, ತಮ್ಮ ಕೈಲಾದಷ್ಟು ಬಡ ಜನರಿಗೆ ಸಹಾಯ ಮಾಡಿಕೊಂಡು ತಮ್ಮ ಜೀವನ ನಡೆಸುತ್ತಿದ್ದಾರೆ. ನಿಜಕ್ಕೂ ತಾಯಿ ಮಗ ಗ್ರೇಟ್.

ಇನ್ನು ನಟಿ ಲೀಲಾವತಿ ಅವರಿಗೆ ತುಂಬಾ ವಯಸ್ಸಾಗಿದ್ದು, ಅವರ ಅರೋಗ್ಯ ಆಗಾಗ ಹದಗೇಡುತ್ತಿರುತ್ತದೆ. ಇನ್ನು ಕನ್ನಡ ಸಿನೆಮಾರಂಗದ ಅನೇಕ ಕಲಾವಿದರು ಹಾಗೂ ವಾಣಿಜ್ಯ ಮಂಡಳಿಯ ಗಣ್ಯರು ಆಗಾಗ ನಟಿ ಲೀಲಾವತಿ ಅವರನ್ನು ಮನೆಗೆ ಭೇಟಿ ಕೊಟ್ಟು ನೋಡಿಕೊಂಡು ಅವರ ಆರೋಗ್ಯ ವಿಚಾರಿಕೊಂಡು ಬರಲು ಹೋಗಿತ್ತಿದ್ದಾರೆ.

ಇನ್ನು ಇದೀಗ ಲೀಲಾವತಿ ಅವರ ಆರೋಗ್ಯ ಇನ್ನಷ್ಟು ಕುಗ್ಗಿದ್ದು, ಅವರನ್ನು ನೋಡಿ ವಿನೋದ್ ರಾಜ್ ಕುಮಾರ್ ಕೂಡ ಬಹಳಷ್ಟು ಕುಗ್ಗಿದ್ದಾರೆ. ಇನ್ನು ಇದೀಗ ವಿನೋದ್ ರಾಜ್ ಅವರಿಗೆ ಚಿತ್ರರಂಗದವರು ನಾವಿದ್ದೇವೆ ಎಂದು ಧೈರ್ಯ ಮತ್ತು ಆಶ್ವಾಸನೆ ನೀಡಿದ್ದಾರೆ. ಇನ್ನು ಆ ಹಿರಿಯ ಜೀವ ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ನಾವು ನೀವು ಆ ಭಗವಂತನಲ್ಲಿ ಬೇಡಿಕೊಳ್ಳೋಣ. ನಟಿ ಲೀಲಾವತಿ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಿಳಿಸಿ.

Leave a Reply

Your email address will not be published. Required fields are marked *