ಸ್ಯಾಂಡಲ್ ವುಡ್‌ನಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುತ್ತಿರುವ ನವರಸ ನಾಯಕ ಜಗ್ಗೇಶ್! ಇವರು ಒಂದು ಸಿನೆಮಾಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ.? ನೋಡಿ

ನಮಸ್ತೆ ಪ್ರೀತಿಯ ವೀಕ್ಷಕರೆ ಸ್ಯಾಂಡಲ್ವುಡ್ ನಲ್ಲಿ ನವರಸ ನಾಯಕ ಎಂದೇ ಖ್ಯಾತಿ ಪಡೆದಿರುವ ಜಗ್ಗೇಶ್ ಅವರು ತಮ್ಮ ಅಭಿನಯ ಹಾಗೂ ಮಾತಿನ ಶೈಲಿಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ನಾಯಕನಟ, ನಿರ್ಮಾಪಕ ಮತ್ತು ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದಾರೆ. ಬರೇ ಸಿನೆಮಾರಂಗ ಅಲ್ಲದೆ ರಾಜಕೀಯದಲ್ಲಿ ಕೂಡ ಗುರುತಿಸಿಕೊಂಡಿದ್ದಾರೆ. ಹಂದಹಾಗೆ, ಜಗ್ಗೇಶ್ ಅವರು ಮೂರು ದಶಕಗಳಿಂದ ಸಿನಿಜೀವನದಲ್ಲಿ 120ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

1963, ಮಾರ್ಚ್ 17 ರಂದು ಶಿವಲಿಂಗಪ್ಪ ಮತ್ತು ನಂಜಮ್ಮ ದಂಪತಿಗಳಿಗೆ ಬೆಂಗಳೂರಿನಲ್ಲಿ ಜನಿಸಿದರು. ಇವರ ಬಾಲ್ಯದ ಹೆಸರು ಈಶ್ವರ ಗೌಡ. ಇವರು ಮೂಲತಃ ತುಮಕೂರು ಜಿಲ್ಲೆಯ ಮಾಯಸಂದ್ರದವರು. ಇವರಿಗೆ ಇಬ್ಬರು ಸಹೋದರ ಮತ್ತು ಸಹೋದರಿಯಾರಿದ್ದಾರೆ. ಇವರ 1982 ರಲ್ಲಿ ನಿರ್ದೇಶಕ ಕೆ. ವಿ ರಾಜು ಮತ್ತು ರಾಜ್ ಕಿಶೋರ್ ಅವರ ಸಹಾಯಕ ನಿರ್ದೇಶಕರಾಗಿ ಸಿನೆಮಾರಂಗಕ್ಕೆ ಬಂದರು. ನಂತರ ಕೆಲ ಸಿನೆಮಾಗಳಲ್ಲಿ ಖಳನಾಯಕ ಮತ್ತು ಪೋಷಕ ನಟನಾಗಿ ನಟಿಸಿದ್ದರು.

ಇನ್ನು ಇವರ ನಟನೆಯ ರಣಧೀರ, ಸಾಂಗ್ಲಿಯಾನ, ರಣರಂಗ, ಯುದ್ಧಕಾಂಡ, ಪರಶುರಾಮ್, ರಾಣಿ ಮಹಾರಾಣಿ, ಸೋಲಿಲ್ಲದ ಸರದಾರ, ಪ್ರೇಕ್ಷಕರ ಬಹಳ ಇಷ್ಟ ಪಡುವ ಪಾತ್ರವಾಗಿದ್ದವು. 1992 “ಭಂಡ ನನ್ನ ಗಂಡ” ಚಿತ್ರದ ಮೂಲಕ ನಾಯಕನಾಗಿ ಹೊಸ ಅದ್ಯಾಯ ಆರಂಭಿಸಿದರು. ಇನ್ನು ಆ ವರ್ಷದಲ್ಲೇ ತೆರೆಗೆ ಬಂದ “ತರ್ಲೆ ನನ್ಮಗ” ಚಿತ್ರ ಇವರಿಗೆ ನಾಯಕನಾಗಿ ದೊಡ್ಡ ಯಶಸ್ಸು ನೀಡಿತು. ಅದಾದ ಬಳಿಕ ಸಾಕಷ್ಟು ಸಿನೆಮಾಗಳಲ್ಲಿ ತನ್ನ ಅಭಿನಯದಿಂದಲೇ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದರು. ಇನ್ನು 2006 ರಲ್ಲಿ ಇವರ ನೂರನೇ ಚಿತ್ರ ಮಠ ಬಿಗ್ ಬ್ರೇಕ್ ತಂದು ಕೊಟ್ಟಿತು.

2012ರಲ್ಲಿ ತೆರೆಕಂಡ “ಮೇಲುಕೋಟೆ ಮಂಜ” ಸಿನೆಮಾವನ್ನು ನಿರ್ದೇಶನ ಮಾಡಿ ನಿರ್ದೇಶಕರಾದರು. ಇನ್ನು ಕಿರುತೆರೆಯಲ್ಲಿ ಹಲವು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಇಂದಿಗೂ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಇವರ ಅಭಿನಯದ ಬಹುನಿರೀಕ್ಷಿತ ಸಿನೆಮಾ ತೋತಪುರಿ ಬಿಡುಗಡೆಗೆ ಸಜ್ಜಗಿದ್ದು. ಈ ಚಿತ್ರ ಸುದ್ಧಿಗೋಷ್ಠಿಯಲ್ಲಿ ತನ್ನ ಸಿನೆಮಾ ಹಾಗೂ ಕಿರುತೆರೆಯ ಸಂಭಾವನೆಯ ಕುರಿತು ಬಹಿರಂಗ ಪಡಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಕತ್ ಸದ್ದು ಮಾಡುತ್ತಿರುವ ಹಾಗೂ ಜಗ್ಗೇಶ್ ಅಭಿನಯದ ಹಾಗೂ ನೀರ್ ದೋಸೆ ಸಿನೆಮಾ ನಿರ್ದೇಶಕ ವಿಜಯ್ ಪ್ರಸಾದ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಈ ವರ್ಷದ ಬಹುನಿರೀಕ್ಷಿತ ಸಿನೆಮಾ ತೋತಪೂರಿ ಇದೇ ತಿಂಗಳು ಸೆಪ್ಟೆಂಬರ್ 30 ರಂದು ತೆರೆಗೆ ಬರುತ್ತಿದೆ.

ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಜಗ್ಗೇಶ್ ಅವರು, ಸಂಭಾವನೆ ವಿಚಾರದಲ್ಲಿ ನನ್ನದು ಮುಚ್ಚುಮರೆ ಏನಿಲ್ಲ. ಸಿನೆಮಾಗೆ 2 ಕೋಟಿ ಪಡೆಯುತ್ತೇನೆ. ಟಿವಿಯಲ್ಲಿ 3 ಕೋಟಿ ಪಡೆಯುತ್ತೇನೆ ಎಂದು ನವರಸ ನಾಯಕ ಜಗ್ಗೇಶ್ ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೆ ನನ್ನ ಕುಟುಂಬ ಸಾಕಲು ಈ ಸಂಭಾವನೆ ಸಾಕು. ನನ್ನ ಹೆಂಡತಿ ಮಕ್ಕಳನ್ನು ನೆಮ್ಮದಿಯಿಂದ ಸಕುವುದಕ್ಕೆ ಇಷ್ಟು ಸಾಕಾಗುತ್ತದೆ. ಬೇರೆ ಯಾವ ವಿಚಾರಕ್ಕೂ ನಾನು ತಲೆ ಹಾಕುವುದಿಲ್ಲ ಎಂದು ಹೇಳಿದ್ದಾರೆ.

‘ನಾನು ಏನೇ ಮಾತನಾಡಿದರು ಸಾಮಾಜಿಕ ಜಾಲತಾಣಗಳಲ್ಲಿ ಹೆಬ್ಬೆಟ್ಟು ತೋರಿಸುತ್ತಾರೆ. ಕೆಲವರು ಮೇಲಕ್ಕೆ ತೋರಿಸಿದರೆ ಕೆಲವರು ಕೆಳಗೆ ತೋರಿಸುತ್ತಾರೆ. ಜೀವನದಲ್ಲಿ ಸಾಧನೆ ಮಾಡದೇ ಇರೋರೆಲ್ಲ ಪ್ರತಿಕ್ರಿಯೆ ಕೊಡುತ್ತಾರೆ. ವಿಷಯದ ಬಗ್ಗೆ ಅರ್ಥನೆ ಮಾಡಿಕೊಳ್ಳಲ್ಲ. ಹಾಗಾಗಿ ಇನ್ನು ಮುಂದೆ ಯಾವುದೇ ವಿಷಯಕ್ಕೂ ಹೋಗಲ್ಲ. ನಂಗಿರೋದು ಒಬ್ಬರೇ ಹೆಂಡ್ತಿ ಎರಡು ಮಕ್ಕಳು. ನನ್ನ ಮಕ್ಕಳು ನನ್ನ ಹೆಸರನ್ನು ಎಲ್ಲಿಯೂ ಬಳಸಿಕೊಳ್ಳುವುದಿಲ್ಲ. ನನಗೆ ಬೇರೆ ಸೆಟಪ್ ಇಲ್ಲ ಹಾಗಾಗಿ 8 ಗಂಟೆಗೆ ಮನೆಗೆ ಹೋಗಿ ಸೇರಿಕೊಳ್ಳುತ್ತೇನೆ ಹಾಗಾಗಿ ನಮ್ಮದು ನಿಮ್ಮದಿ ಕುಟುಂಬ. ದೇವರನ್ನು ನಂಬಿಕೊಂಡು ಬದುಕಿದ್ದೇನೆ ನಮಗೆ ಭಗವಂತ ಆನಂದದ ಜೀವನ ಕೊಟ್ಟಿದ್ದಾನೆ ಎಂದಿದ್ದಾರೆ.

Leave a Reply

Your email address will not be published. Required fields are marked *