ಸ್ಯಾಂಡಲ್ವುಡ್ ನಲ್ಲಿ ಸಾಕಷ್ಟು ಬಾಲ ಕಲಾವಿದರು ತಮ್ಮ ಕ್ಯೂಟ್ ನಟನೆಯ ಮೂಲಕ ಈಗಲೂ ಸಹ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ನಿಜ ಅದೆಷ್ಟೋ ಬಾಲ ಕಲಾವಿದರುಗಳು ನಾಯಕ ನಾಯಕಿಯಾರಾಗಿ ತಮ್ಮನು ತಾವು ಸ್ಥಾನವನ್ನು ಸ್ಥಾಪಿಸಿಕೊಂಡಿರುವ ಉದಾಹರಣೆಗಳು ಸಾಕಾಷ್ಟಿದೆ.
ಹಾಗೆಯೇ ಬೇರೆ ಬೇರೆ ಭಾಷೆಯಿಂದ ಕನ್ನಡ ಚಿತ್ರರಂಗಕ್ಕೆ ಬಲನಟಿಯಾಗಿ ಪಾದಾರ್ಪಣೆ ಮಾಡಿ ಕನ್ನಡದಲ್ಲಿ ಜನಪ್ರಿಯತೆ ಪಡೆದ ನಟಿ ಎಂದರೆ ಬೇಬಿ ಶ್ಯಾಮಿಲಿ. ಇವರು 2000 ದಶಕದ ಚಿತ್ರಗಳನ್ನು ನೋಡಿದರೆ. ಸಾಕಷ್ಟು ಅದ್ಭುತ ಸಿನಿಮಾಗಳಲ್ಲಿ ಬೇಬಿ ಶ್ಯಾಮಿಲಿ ಅವರನ್ನು ನೀವು ನೋಡಿರಬಹುದು. ತನ್ನ ಮುದ್ದಾದ ಮಾತುಗಳು ಹಾಗೂ ತಮ್ಮ ನಟನೆಯಿಂದ ಬೇಬಿ ಶ್ಯಾಮಿಲಿ ಅವರು ಇಡೀ ಕರ್ನಾಟಕದ ಮನೆ ಮಾತಾಗಿದ್ದರು. ಅಂತಾನೇ ಹೇಳಬಹುದು.
ನಟಿ ಬೇಬಿ ಶ್ಯಾಮಿಲಿ ಅವರು ಹುಟ್ಟಿದ್ದು ಜೂಲೈ 10,1987 ರಂದು ಬಾಬು ಹಾಗೂ ತಾಯಿ ಆಲಿಸ್ ದಂಪತಿಗಳಿಗೆ ಜನಿಸಿದ್ದರು ಶ್ಯಾಮಿಲಿಗೆ ಸಹೋದರಿ ಕೂಡ ಇದ್ದಾರೆ. ಇನ್ನು ಇವರ ತಂದೆಗೆ ನಟರಾಗಬೇಕೆಂಬ ಆಸೆ ಇದ್ದ ಕಾರಣ ಚನ್ನೈಗೆ ಬಂದಿದ್ದು ಆದರೆ ತಮ್ಮ ಆಸೆಯನ್ನು ಮಕ್ಕಳು ಮೂಲಕ ಪೂರೈಸಿಕೊಂಡರು.
ಶ್ಯಾಮಿಲಿ ಅಣ್ಣ ರಿಚರ್ಡ್ ಹಾಗೂ ಅಕ್ಕ ಶಾಲಿನಿ ಇಬ್ಬರು ಕೂಡ ಕಲಾವಿದರಗಿದ್ದು ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. 12 ವರ್ಷದ ಪುಟ್ಟ ಮಗುವಾಗಿದ್ದಲೆ ಶ್ಯಾಮಿಲಿ ಬಣ್ಣ ಹಚ್ಚಲು ಶುರು ಮಾಡಿದ್ದು ಇವರಿಗೆ ದೊಡ್ಡ ಬ್ರೇಕ್ ನೀಡಿದ್ದು ಹೆಸರಾಂತ ನಿರ್ದೇಶಕರಾದ ಮುನಿರತ್ನಮ್ ನಿರ್ದೇಶನದ ಅಂಜಲಿ ಎಂಬ ಚಿತ್ರ ಇದು ಸಿಕ್ಕಾಪಟ್ಟೆ ಹಿಟ್ ಆಗಿತ್ತು.
ಅಂಜಲಿ ಸಿನೆಮಾ ನಂತರ ತಮಿಳು, ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಯ ಹಲವಾರು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದರು. ಸ್ಯಾಂಡಲ್ವುಡ್ ನಲ್ಲಿ ಇವರ ಮೊದಲ ಸಿನಿಮಾ ಡಾ. ವಿಷ್ಣುವರ್ಧನ್ ಅವರೊಡನೆ ಮತ್ತೆ ಹಾಡಿತು ಕೋಗಿಲೆ. ಈ ಚಿತ್ರದ ಅಭಿನಯಕ್ಕೆ ಬೆಸ್ಟ್ ಚೈಲ್ಡ್ ಅಕ್ಟರ್ಸ್ ಕರ್ನಾಟಕ ಸ್ಟೇಟ್ ಅವಾರ್ಡ್ ಪಡೆದರು. ನಂತರ ಕನ್ನಡದಲ್ಲಿ ಶಂಭಾವಿ ಭೈರವಿ, ಹೂವು ಹಣ್ಣು ಹೀಗೆ ಹಲವರು ಸಿನಿಮಾಗಳಲ್ಲಿ ಇವರ ನಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ.
ಇವರು ಬೇರೆ ಭಾಷೆಯ ಬಾಲ ನಟಿಯಾದರೂ ಕನ್ನಡದಲ್ಲೇ ಸಾಕಷ್ಟು ಹೆಸರು ಮಾಡಿದ್ದಾರೆ. ನಟಿ ಬೇಬಿ ಶಾಮಿಲಿ ಅವರು. ಕರ್ನಾಟಕದ ಜನರ ಪ್ರೀತಿಯನ್ನು ಗಳಿಸುವಲ್ಲಿ ಯಶಸ್ವಿಯಾದರು. ದೊಡ್ಡವರದ ಮೇಲೆ ನಟನೆಯಿಂದ ದೂರ ಉಳಿದ ಅವರು 2009 ರಲ್ಲಿ ನಟ ಸಿದ್ದಾರ್ಥ್ ಜೊತೆ ಓಯ್ ಹೆದರಿನ ತೆಲುಗು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರ ಅಷ್ಟೇನು ಹೆಸರು ಮಾಡಿಲ್ಲ ಅಂದ್ರು ಇವರ ನಟನೆಯ ಮೊದಲನೇ ಚಿತ್ರಕ್ಕೆ ಅವರ ನಟನೆಗೆ ಸೈಮಾ ಅವಾರ್ಡ್ ಬಂದಿತ್ತು. ನಂತರ ಶ್ಯಾಮಿಲಿ ಅವರು ಮತ್ತೆ ನಟಿಸಲಿಲ್ಲ. 2010 ರಿಂದ 2015 ರವರೆಗೂ ಸಿಂಗಾಪುರದಲ್ಲಿ ವಿದ್ಯಾಭ್ಯಾಸ ಮಾಡಿ ಅಲ್ಲೇ ಕೆಲವು ಸಮಯ ಕೆಲಸ ಕೂಡ ಮಾಡಿದರು.
ಹಾಗಾಗಿ ನಟಿ ಶ್ಯಾಮಿಲಿ ಈ ರೀತಿಯಾಗಿ ಯಾಕೆ ಹೇಳಿದರು ಎಂದು ಕನ್ನಡಿಗರಿಗೆ ಪ್ರೆಶ್ನೆಯಾಗಿತ್ತು. ಬಾಲ ನಟಿಯಾಗಿ ಶ್ಯಾಮಿಲಿಯನ್ನು ಬಹಳಷ್ಟು ಇಷ್ಟಪಟ್ಟಿದ್ದ ಕರ್ನಾಟಕದ ಜನ ಮತ್ತೊಮ್ಮೆ ಶ್ಯಾಮಿಲಿಯನ್ನು ಕನ್ನಡದಲ್ಲಿ ನೋಡಲು ಇಷ್ಟಪಟ್ಟಿದ್ದರು. ಆದರೆ ಆ ಆಸೆ ನಡೆಯಲಿಲ್ಲ. ಈಗ ಇವರಿಗೆ ನಟಿಸಲು ಯಾವುದೇ ಅವಕಾಶಗಳು ಇಲ್ಲ. ಇವರಿಗೆ ಒಳ್ಳೆಯ ಅವಕಾಶಗಳು ಕೂಡ ದೊರಕಿತ್ತು ಆದರೆ ಬಂದ ಅಫಾರ್ಗಳನ್ನು ಕೈಬಿಟ್ಟ ಕಾರಣ ಬೇಬಿ ಶ್ಯಾಮಿಲಿ ಅವರಿಗೆ ಯಾವುದೇ ಸಿನಿಮಾ ಆಫರ್ ಸಿಗುತ್ತಿಲ್ಲ.
ಭಾರತಕ್ಕೆ ವಾಪಾಸ್ ಬಂದ ನಂತರ ಎರಡು ಸಿನಿಮಾಗಳಲ್ಲಿ ಅವರು ನಟಿಸಿದ್ದರು ಆದರೆ ಅವರು ನಟಿಸಿದ ಯಾವುದೇ ಚಿತ್ರ ಹೇಳಿಕೊಳ್ಳುವಷ್ಟು ಯಶಸ್ಸು ನೀಡಲಿಲ್ಲ. ಈ ನಡುವೇ ಕನ್ನಡದ ಶಿವಣ್ಣ ಜೊತೆಗೆ ತಂಗಿ ಪಾತ್ರದಲ್ಲಿ ನಟಿಸಲು ಶ್ಯಾಮಿಲಿ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ಶಿವಣ್ಣ ಅವರ ತಂಗಿಯಾಗಿ ನಟಿಸಲು ಬೇಬಿ ಶ್ಯಾಮಿಲಿ ಅವರು ನೊಂ ಎಂದಿದ್ದಾರೆ. ಅದಕ್ಕೆ ಕಾರಣ ಕೇಳಿದರೆ ನಾನು ಸದ್ಯಕ್ಕೆ ಬೇರೆ ಚಿತ್ರಗಳಲ್ಲಿ ನಟಿಸುತ್ತೇದ್ದೇನೆ ಈ ಕನ್ನಡದಲ್ಲಿ ಅಭಿನಯಿಸಲು ನನಗೆ ಸಮಯದ ಅಭಾವ ಇದೆ ಎಂದು ಹೇಳಿದ್ದಾರೆ.
ಆದರೆ ಶ್ಯಾಮಿಲಿ ಅವರು ನಟಿಸಿದ್ದು ಬರೇ ಒಂದೇ ಚಿತ್ರದಲ್ಲಿ ಹಾಗಾಗಿ ಶ್ಯಾಮಿಲಿ ಈ ರೀತಿ ಏಕೆ ಹೇಳಿದರು ಎಂದು ಅವರ ಕನ್ನಡ ಅಭಿಮಾನಿಗಳಿಗೆ ಪ್ರೆಶ್ನೆ ಆಗಿತ್ತು. ಬಾಲನಟಿಯಾಗಿ ಶ್ಯಾಮಿಲಿ ಬಹಳಷ್ಟು ಇಷ್ಟ ಪಟ್ಟಿದ್ದ ಕರ್ನಾಟಕದ ಜನ ಮತ್ತೊಮ್ಮೆ ಶ್ಯಾಮಿಲಿಯನ್ನು ಕನ್ನಡದಲ್ಲಿ ನೋಡಲು ಇಷ್ಟಪಟ್ಟಿದ್ದಾರೆ. ಆದರೆ ಅವರ ಆಸೆ ನಡೆಯಲಿಲ್ಲ.
ಈಗ ಅವರಿಗೆ ನಟಿಸಲು ಯಾವುದೇ ಅವಕಾಶಗಳು ಇಲ್ಲ ಅವರ ಅಭಿಮಾನಿಗಳಲ್ಲಿ ಸಾಕಷ್ಟು ನಿರಾಸೆ ಉಂಟು ಮಾಡಿದೆ. ಮತ್ತೆ ಕನ್ನಡದಲ್ಲಿ ಅವಕಾಶ ಬಂದರೆ ಮತ್ತೆ ಅಭಿನಯಿಸಿ ಅನ್ನುವುದೇ ಅವರ ಅಭಿಮಾನಿಗಳು ಆಸೆ. ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.