ಸ್ಟಾರ್ ನಟಿಯರನ್ನು ಮೀರಿಸುವಂತೆ ಮಸ್ತ್ ಫೋಟೋಶೂಟ್ ಮಾಡಿಸಿದ ದುನಿಯಾ ವಿಜಯ್ ಪತ್ನಿ ಕೀರ್ತಿ! ಎಲ್ಲೆಲ್ಲೂ ಸೌಂಡ್ ಮಾಡುತ್ತಿದೆ ಫೋಟೋಸ್ ನೋಡಿ!!

ಚಂದನವನದಲ್ಲಿ ಗುರುತಿಸಿಕೊಂಡ ಸ್ಟಾರ್ ನಟರುಗಳಲ್ಲಿ ದುನಿಯಾ ವಿಜಯ್ ಕೂಡ ಒಬ್ಬರು. ಹೆಚ್ಚಾಗಿ ಮಾಸ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಇವರು, ಮೊಸಲ ಸಿನಿಮಾದಲ್ಲಿ ಮಾತ್ರ ಬಹಳ ಇನೋಸೆಂಟ್ ಪಾತ್ರ ನಿಭಾಯಿಸಿ ಅದರಲ್ಲೇ ಹಿಟ್ ಕಂಡವರು. ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಬ್ಲಾಕ್ ಕೋಬ್ರಾ ಎಂದೇ ಖ್ಯಾತರಾಗಿರುವ ನಟ ವಿಜಯ್. ದುನಿಯಾ ಸಿನಿಮಾದ ಮೂಲಕ ದುನಿಯಾ ವಿಜಯ್ ಎನ್ನುವಹೆಸರು ಪಡೆದುಕೊಂಡರು.

ಆರಂಭದಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿ ನಂತರ ನಾಯಕ ನಟನಾಗಿ ನಟಿಸುವಷ್ಟು ಪ್ರಬುದ್ಧತೆ ಪಡೆದುಕೊಂಡಡ ನಟ ದುನಿಯಾ ವಿಜಯ್ ಇದೀಗ ಒಬ್ಬ ನಿರ್ದೇಶಕನಾಗಿಯೂ ಕೂಡ ಗುರುತಿಸಿಕೊಂಡಿದ್ದಾರೆ. ದುನಿಯಾ ವಿಜಯ್ ಈಗಾಗಲೇ ತಾವೇ ನಾಯಕನಾಗಿ, ನಿರ್ದೇಶಕನಾಗಿ ಸಿನಿಮಾ ಮಾಡಿದ್ದು ನಿರ್ದೇಶಕನಾಗಿಯೂ ಗೆದ್ದಿದ್ದಾರೆ.

ಸಲಗ ಹಾಗೂ ಭೀಮ ಚಿತ್ರಗಳನ್ನು ತಾವೇ ನಿರ್ದೇಶಿಸಿ, ನಟಿಸಿ ಕನ್ನಡಿಗರ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈಗತಾನೇ ಅಂಬೆಗಾಲಿಡುತಿರುವ ಹಲವರಿಗೆ ದುನಿಯಾ ವಿಜಯ್ ಸಿನಿಮಾ ಇಂಡಸ್ಟ್ರಿಯ ಪಾಠ ಹೇಳಿಕೊಡುತ್ತಾರೆ. ಇದು ನಿಜಕ್ಕೂ ಅವರ ಒಳ್ಳೆಯ ಗುಣ. ಇನ್ನು ಅವರ ವಯತಿಕ ಬದುಕಿನಲ್ಲಿ ಸಾಕಷ್ಟು ಬಿರುಗಾಳಿ ಎದ್ದಿದ್ದರೂ ಈಗ ಸುಖವಾದ ಸಂಸಾರ ಅವರದ್ದು. ಇದಕೆ ಮುಖ್ಯ ಕಾರಣ ಅವರ ಪತ್ನಿ ಕೀರ್ತಿ ಪಟಾಡಿ!

ನಟ ದುನಿಯಾ ವಿಜಯ್ ಅವರು ಸಿನಿಮಾ ಮಾತ್ರವಲ್ಲ ವೈಯಕ್ತಿಕ ಜೀವನದಲ್ಲಿಯೂ ಸಾಕಷ್ಟು ಜವಾಬ್ದಾರಿಯಿಂದ ಹಾಗೂ ಮನೆಯವರೊಂದಿಗೆ ಪ್ರೀತಿಯಿಂದ ಇರುತ್ತಾರೆ. ಇದಕ್ಕೆ ಮುಖ್ಯ ಕಾರಣ ಅವರ ಪತ್ನಿ ಕೀರ್ತಿ ವಿಜಯ್. ಹೌದು, ದುನಿಯಾ ವಿಜಯ್ ಅವರ ಎರಡನೆಯ ಪತ್ನಿ ಕೀರ್ತಿ ವಿಜಯ್. ಇವರ ಮೊದಲ ಹೆಸರು ಕೀರ್ತಿ ಪಟಾಡಿ. ಎಂಬಿಎ ಪದವಿಧರೆಯಾದ ಕೀರ್ತಿ ಒಬ್ಬ ಮಾಡೆಲ್ ಆಗಿದ್ದವರು.

ಸೌತ್ ಇಂಡಿಯಾ ಕ್ವೀನ್ 2016 ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಂತರ ಕನ್ನಡ ಸಿನಿಮಾಗಳಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ತಿ. ಬೆಂಗಳೂರಿನಲ್ಲಿ ಐಟಿ ಕಂಪನಿಯಲ್ಲಿಯೂ ವರ್ಕ್ ಮಾಡಿದ್ದಾರೆ. ಕನ್ನಡದಲ್ಲಿ ಕೀರ್ತಿ ಪಟಾಡಿ ಅಭಿನಯಿಸಿದ ಮೊದಲ ಚಿತ್ರ ರಾಹುಲ್ ಅಭಿನಯದ ನನ್ನುಸಿರೇ. ಇದನ್ನು ಸಂತೋಷ್ ನಿರ್ದೇಶನ ಮಾಡಿದ್ದರು.

ಮನೆಯವರ ಒಪ್ಪಿಗೆ ಇಲ್ಲದಿದ್ದರೂ ಕಷ್ಟಪಟ್ಟು ಅವರನ್ನು ಒಪ್ಪಿಸಿ ನಟನಾರಂಗ ಪ್ರವೇಶಿಸಿದ ಕೀರ್ತಿ, ಜಾಲಿ ಡೇಸ್, ಪ್ರೀತಿ ನೀ ಶಾಶ್ವತಾನ, ಸುದೀಪ್ ಅಭಿನಯದ ಜಸ್ಟ್ ಮಾತ್ ಮಾತಲ್ಲಿ ಈ ಎಲ್ಲ ಸಿನಿಮಾಗಳಲ್ಲಿ ಎರಡನೆಯ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡು ಉತ್ತಮ ಅಭಿನಯ ಪ್ರದರ್ಶಿಸಿದ್ದಾರೆ. ಕೀರ್ತಿ ಅವರು 2015ರಲ್ಲಿ ದುನಿಯಾ ವಿಜಯ್ ಅವರೊಂದಿಗೆ ಸಪ್ತಪದಿ ತುಳಿದರು. ಇವರಿಬ್ಬರದ್ದು ಪ್ರೇಮ ವಿವಾಹ.

ಮದುವೆಯ ನಂತರ ಅಭಿನಯದಿಂದ ದೂರ ಉಳಿದ ಕೀರ್ತಿ ಪಟಾಡಿ, ದುನಿಯಾ ವಿಜಯ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ದುನಿಯಾ ವಿಜಯ್ ಅವರ ಮಕ್ಕಳನ್ನು ಕೂಡ ಎರಡನೇ ಪತ್ನಿಯಾಗಿ ಬಂದರೂ ಕೀರ್ತಿ ತುಂಬಾನೇ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಜಿಮ್ ನಲ್ಲಿ ಹೆಚ್ಚು ಸಮಯ ಕಳೆಯುವ ಕೀರ್ತಿ ಅವರಿಗೆ ಬೈಕ್ ಓಡಿಸುವುದು ಒಂದು ಹವ್ಯಾಸ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಕೀರ್ತಿ ವಿಜಯ್ ಹಲವು ವಿಡಿಯೋಗಳನ್ನು ಫೋಟೋಗಳನ್ನು ಆಗಾಗ ಅಪ್ಲೋಡ್ ಮಾಡುತ್ತಾರೆ. ನೋಡುವುದಕ್ಕೆ ಬಹಳ ಸುಂದರವಾಗಿರುವ ಕೀರ್ತಿಯವರ ಹೊಸ ಫೊಟೋಶೂಟ್ ಗಳು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿವೆ.

Leave a Reply

Your email address will not be published. Required fields are marked *