ಇಂದು ಸ್ಯಾಂಡಲ್ವುಡ್ ನಲ್ಲಿ ಹಬ್ಬದ ವಾತಾವರಣ ಎಲ್ಲಾ ಭಾಷೆಯಲ್ಲಿ ನಟ ನಟಿಯರು ಒಂದೇ ಅವಾರ್ಡ್ ಫಂಕ್ಷನ್ ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ಅವಾರ್ಡ್ ಫಂಕ್ಷನ್ ಯಾವುದೇ ಸಮಸ್ಸೆ ಇಲ್ಲದೆ ಹತ್ತು ವರ್ಷಗಳಿಂದ ನಡೆಸಿಕೊಂಡು ಬರುವುದು ಅಷ್ಟು ಸುಲಭವಲ್ಲ ಸೈಮಾ ಅವಾರ್ಡ್ ಮುಖ್ಯಸ್ಥರು ತಿಳಿಸಿದ್ದಾರೆ. ಹೌದು, ನಾಲ್ಕು ರಾಜ್ಯಗಳ ಸಿನೆಮಾ ತಾರೆಯರು ಹಾಗೂ ತಂತ್ರಜ್ಞರು ಬಹಳ ಸಂತೋಷದಿಂದ ಒಂದು ಸೇರುವ ಸೈಮಾ ಅವಾರ್ಡ್ ಈ ಸಲ ಅದೃಷ್ಟ ಎನ್ನುವಂತೆ ನಮ್ಮ ಬೆಂಗಳೂರಿನಲ್ಲಿಯೇ ಅದ್ದೂರಿಯಾಗಿ ನಡೆಯುತ್ತಿದೆ.
ನಿನ್ನೆ ಯಿಂದ ಅದ್ದೂರಿಯಾಗಿ ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಸೈಮಾ ಅವಾರ್ಡ್ ಅದ್ದೂರಿಯಾಗಿ ನಡೆಯುತ್ತಿದೆ. ಇದಕ್ಕೆ ಪ್ರಮುಖ ಕಾರಣ ಕೂಡ ಇದೇ. ಇಂದು ನಾವು ಕನ್ನಡದ ಕಂದ ರಾಜರತ್ನ ಪುನೀತ್ ರಾಜ್ ಕುಮಾರ್ ಅವರನ್ನ ಕಳೆದುಕೊಂಡಿದ್ದೇವೆ ಅವರಿಗೆ ಗೌರವ ಸೂಚಿಸುವ ಸಲುವಾಗಿ ಅವರ ಸ್ಮರಣಾರ್ಥ ಬೆಂಗಳೂರಿನಲ್ಲಿ ಸೈಮಾ ಅವಾರ್ಡ್ ನಡೆಸಲಾಗುತ್ತಿದೆ.
ಇದೀಗ ಸ್ಯಾಂಡಲ್ವುಡ್ ನ ಸಿನೆಮಾಗಳು ಪ್ಯಾನ್ ಇಂಡಿಯಾ ಸಿನೆಮಾಗಳಾಗಿ ಬದಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೈಮಾ ಅವಾರ್ಡ್ ಗೆ ಕನ್ನಡದ ಕೆಲವು ಸಿನೆಮಾಗಳು ಕೂಡ ನಾಮ ನಿರ್ದೇಶನಗೊಂಡಿದ್ದವು ಮ ದಕ್ಷಿಣ ಭಾರತದ ವಿವಿಧ ಸಿನೆಮಾಗಳು ನಾಮ ನಿರ್ದೇಶನಗೊಂಡಿದ್ದು ಎಲ್ಲಾ ದಿಗ್ಗಜ ನಟ ನಟಿಯರು ಕೂಡ ಸೈಮಾ ಅವಾರ್ಡ್ ಗೆ ಸಾಕ್ಷಿಯಾಗಿದ್ದಾರೆ.
2021ರಲ್ಲಿ ತೆರೆಕಂಡ ಕನ್ನಡ, ತಮಿಳು, ತೆಲುಗು, ಮಲಯಾಳಂ, ಎಲ್ಲಾ ಚಿತ್ರಗಳ ಹೆಸರುಗಳು ಸೈಮಾ ಅವಾರ್ಡ್ ಗೆ ಸೂಚಿಸಲಾಗಿದೆ. ಆ ಪೈಕಿ ಹಲವು ಕನ್ನಡ ಸಿನೆಮಾಗಳು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಕನ್ನಡದ ದರ್ಶನ್ ಅಭಿನಯದ ರಾಬರ್ಟ್ ಸಿನೆಮಾದ ಛಾಯಾಗ್ರಾಹಣಕ್ಕೆ ಬೆಸ್ಟ್ ಸಿನೆಮಾಟೋಗ್ರಾಫಿ ಪ್ರಶಸ್ತಿ ದೊರಕಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯ.
ಇನ್ನು ನಿನ್ನ ಸನಿಹಕೆ ಸಿನೆಮಾದ ನಿನ್ನ ಪರಿಚಯ ಎನ್ನುವ ಹಾಡಿಗೆ ‘ಅತ್ಯುತ್ತಮ ಗೀತ ರಚನೆಕಾರ ಎನ್ನುವ ಪ್ರಶಸ್ತಿ ಮೊದಲ ಬಾರಿಗೆ ಗಾಯಕ ವಾಸುಕಿ ವೈಭವ್ ಅವರ ಪಲಾಗಿದೆ. ಇನ್ನು ಯುವರತ್ನ ಸಿನೆಮಾಕ್ಕಾಗಿ ಉತ್ತಮ ನಟ ಪ್ರಶಸ್ತಿಯನ್ನು ಡಾ. ಪುನೀತ್ ರಾಜ್ ಕುಮಾರ್ ಅವರಿಗೆ ನೀಡಿದ್ದು, ಪುನೀತ್ ರಾಜ್ ಕುಮಾರ್ ಅವರ ನೆನಪುಗಳು ಮತ್ತೆ ಮಾರುಕಳಿಸುವಂತೆ ಮಾಡಿದೆ. ಇತ್ತೀಚಿಗೆ ಕನ್ನಡದಲ್ಲಿ ಬಹುಬೇಡಿಕೆಯ ನಟಿಯಾಗಿ ಬ್ಯುಸಿಯಾಗಿರುವ ನಟಿ ಆಶಿಕಾ ರಂಗನಾಥ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನೆಮಾದ ನಿರ್ದೇಶಕರಾದ ತರುಣ್ ಸುಧೀರ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅತ್ಯುತ್ತಮ ನಿರ್ದೇಶಕ ಹಾಗೂ ಅತ್ತ್ಯುತ್ತಮ ಸಂಗೀತ ರಚನೆಕಾರ ಪ್ರಶಸ್ತಿ ಗಳಿಸಿದ್ದಾರೆ. ಅತ್ಯುತ್ತಮ ಕ್ರಿಟಿಕ್ಸ್ ಸಿನೆಮಾ ಬಡವ ರಾಸ್ಕಲ್ ಅಗಿದ್ದು ನಟಿ ಅಮೃತ ಅಯ್ಯಂಗಾರ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಪೊಗರು ಸಿನೆಮಾದ ಅಭಿನಯಕ್ಕಾಗಿ ಅತ್ಯುತ್ತಮ ಹಾಸ್ಯ ನಟ ಪ್ರಶಸ್ತಿ ನಟ ಚಿಕ್ಕಣ್ಣ ಅವರಿಗೆ ದೊರೆತಿದೆ.
ಅತ್ಯುತ್ತಮ ಪೋಷಕ ನಟಿ ಆರೋಹಿ ನಾರಾಯಣ್ ಹಾಗೂ ಅತ್ಯುತ್ತಮ ಪೋಷಕ ನಟ ಪ್ರಮೋದ್ ಸೈಮಾ ಪ್ರಶಸ್ತಿ ಸ್ವೀಕರಿಸಿದ್ದಾರೆ. ಕನ್ನಡದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದ ರಾಜ್. ಬಿ ಶೆಟ್ಟಿ ಅಭಿನಯದ ಗರುಡಗಮನ ವೃಷಭವಾಹನ ಚಿತ್ರದ ಸೋಜಿಗದ ಸೋಜಿ ಮಲ್ಲಿಗೆ ಹಾಡಿಗೆ ಚೈತ್ರ ಆಚಾರ್ ಅವರು ಅತ್ಯುತ್ತಮ ಹಿನ್ನಲೆ ಗಾಯಕಿ ಪ್ರಶಸ್ತಿ ತಣ್ಣದಾಗಿಸಿಕೊಂಡಿದ್ದಾರೆ. ಇವತ್ತೂ ನಡೆಯಲಿರುವ ಸೈಮಾ ಅವಾರ್ಡ್ ಇನ್ನಷ್ಟು ಪ್ರಶಸ್ತಿಗಳನ್ನು ಕನ್ನಡ ಕಲಾವಿದರ ಪಲಾಗಲಿದೆ. ಇನ್ನು ಸೈಮಾ ಅವಾರ್ಡ್ ನಲ್ಲಿ ಶಿವಣ್ಣ, ಡಾಲಿ, ಯಶ್, ದರ್ಶನ್, ಧನಂಜಯ್, ಅಭಿಷೇಕ್ ಅಂಬರೀಶ್, ರಚಿತಾ ರಾಮ್, ರಾಧಿಕಾ ಪಂಡಿತ್, ಆಶಿಕಾ ರಂಗನಾಥ್, ಇನ್ನು ಹಲವು ನಟ ನಟಿಯಾರು ಪಾಲ್ಗೊಂಡಿದ್ದರು.