ಮೊಟ್ಟ ಮೊದಲ ಭಾರಿಗೆ ಮಹಾನಗರಿ ಬೆಂಗಳೂರಿನಲ್ಲಿ ಸೈಮಾ ಅವಾರ್ಡ್ ನಡೆದಿದ್ದು ದಕ್ಷಿಣ ಭಾರತದ ಸ್ಟಾರ್ ನಟರು ಸೇರಿದ್ದರು. ಹೌದು ಸೆಪ್ಟೆಂಬರ್ 10 ಹಾಗೂ 11 ರಂದು ಸೈಮಾ ಅವಾರ್ಡ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ಸೈಮಾ ಅವಾರ್ಡ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಈ ಭಾರಿ ಕರುನಾಡಿನ ಮಾಣಿಕ್ಯ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಣೆ ಮಾಡಲಾಗಿತ್ತು. ದಕ್ಷಿಣ ಭಾರತದ ತಾರೆಯರ ಜೊತೆ ಬಾಲಿವುಡ್ ನಟ ನಟಿಯರು ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದರು.
ದಕ್ಷಿಣ ಭಾರತ ಚಿತ್ರರಂಗದಲ್ಲಿ ಕಳೆದ ವರ್ಷ ತೆರೆಕಂಡ ಸಿನೆಮಾಗಳಿಗೆ ಹಲವು ವಿಭಾಗಗಳಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 10ನೇ ಸೈಮಾ ಪ್ರಶಸ್ತಿ ಕಾರ್ಯಕ್ರಮ ನಮ್ಮ ಬೆಂಗಳೂರಿನಲ್ಲಿ ನಡೆದಿದ್ದು, ದಕ್ಷಿಣ ಭಾರತದ ತರೆಯರ ಜೊತೆಗೆ ಬಾಲಿವುಡ್ ತಾರೆಯರು ಕೂಡ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಹೌದು, ಕಮಲ್ ಹಾಸನ್, ರಣ್ ವೀರ್ ಸಿಂಗ್, ಯಶ್, ಅಲ್ಲು ಅರ್ಜುನ್, ಶಿವರಾಜ್ ಕುಮಾರ್, ಪ್ರಜ್ವಲ್ ದೇವರಾಜ್, ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಸಾಕಷ್ಟು ಸೂಪರ್ ಸ್ಟಾರ್ ಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಆದರೆ ಇದೀಗ ಸೈಮಾ ದವರು ದರ್ಶನ್ ಅವರ ಬಗ್ಗೆ ಮಾಡಿದ ಪೋಸ್ಟ್ ಬಗ್ಗೆ ತಿಳಿದರೆ ಖಂಡಿತ ಅಚ್ಚರಿಯ ಜೊತೆಗೆ ನಿಮಗೆ ಖುಷಿಯೂ ಕೂಡ ಆಗುತ್ತದೆ. ಇನ್ನು, ಶಿವಣ್ಣ ದಂಪತಿಗಳು ಹಾಗೂ ಶಿವಣ್ಣ ಸಹೋದರಿಯರು ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ತನ್ನ ಕುಟುಂಬದ ಜೊತೆ ವೇದಿಕೆ ಹತ್ತಿದ ಶಿವಣ್ಣ ಪ್ರೀತಿಯ ತಮ್ಮ ಅಪ್ಪು ಅವರನ್ನು ನೆನಪಿಸಿಕೊಂಡು ಅಪ್ಪು ಗಾಗಿ ಹಾಡೊಂದನ್ನು ಹಾಡಿದ್ದರು. ಪುನೀತ್ ರಾಜ್ ಕುಮಾರ್ ಅವರಿಗೆ ತುಂಬಾ ಇಷ್ಟವಾದ ‘ಬಾನದಾರಿಯಲ್ಲಿ ಸೂರ್ಯ ಜಾರಿ ಹೋದಾ.. ಹಾಡನ್ನು ಹಾಡಿ ಭಾವುಕಾರಾಗಿದ್ದರು.
ಅದಲ್ಲದೆ, ಶಿವಣ್ಣ ಈ ಹಾಡನ್ನು ಹೇಳುತ್ತಿದ್ದಂತೆ ಇಡೀ ಕುಟುಂಬ ಅಪ್ಪು ನೆನೆದು ಕಣ್ಣೀರು ಸುರಿಸುತ್ತಿದ್ದರು. ಶಿವಣ್ಣನು ಮುದ್ದಿನ ತಮ್ಮನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದರು. ಈ ವೇಳೆಯಲ್ಲಿ ವೇದಿಕೆಯಲ್ಲಿ ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್, ಬಾಲಿವುಡ್ ಸ್ಟಾರ್ ರಣ್ ವೀರ್ ಸಿಂಗ್ ಹಾಗೂ ರಾಕಿಂಗ್ ಸ್ಟಾರ್ ಯಶ್ ವೇದಿಕೆಯಲ್ಲಿದ್ದು, ಈ ಭಾವುಕ ಕ್ಷಣವನ್ನು ನೋಡಿ ಬೇಸರ ವ್ಯಕ್ತಪಡಿಸಿದ್ದರು.
ಕಳೆದ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ನಡೆದ ಸೈಮಾ ಕಾರ್ಯಕ್ರಮದಲ್ಲಿ ಮೊದಲ ದಿನ ಕನ್ನಡ ಹಾಗೂ ತೆಲುಗು ಸಿನಿ ರಂಗದವರ ಸಿನೆಮಾಗಳಿಗೆ ಪ್ರಶಸ್ತಿಯನ್ನು ನೀಡಲಾಗಿತ್ತು. ಭಾನುವಾರ ತಮಿಳು ಮತ್ತು ಮಲಯಾಳಂ ಚಿತ್ರರಂಗದ ಸಿನೆಮಾಗಳಿಗೆ ಪ್ರಶಸ್ತಿಯನ್ನು ವಿತರಿಸಲಾಗಿತ್ತು. ಅಷ್ಟೇ ಅಲ್ಲದೇ, ಸೈಮಾದಲ್ಲಿ ಕನ್ನಡದ ಪರ ಚಾಲೆಂಜಿಂಗ್ ಸ್ಟಾರ್ ಅಭಿನಯದ ರಾಬರ್ಟ್ ಹತ್ತು ವಿಭಾಗದಲ್ಲಿ ನಾಮಿನೆಟ್ ಆಗಿತ್ತು.
ಈ ಮೂಲಕ ಅತೀಹೆಚ್ಚು ವಿಭಾಗದಲ್ಲಿ ನಾಮನಿರ್ದೇಶನಗೊಂಡ ಕನ್ನಡ ಚಲನಚಿತ್ರ ಎನ್ನುವ ಖ್ಯಾತಿಗೆ ಪಾತ್ರವಾಗಿತ್ತು. ಅದರ ಜೊತೆಗೆ, ರಾಜ್ ಬಿ ಶೆಟ್ಟಿ ನಿರ್ದೇಶನದ ಗರುಡ ಗಮನ ಚಿತ್ರಕ್ಕೆ ಎಂಟು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು. ಅದರ ಜೊತೆಗೆ, ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರ ಏಳು ವಿಭಾಗಗಳಲ್ಲಿ ನಾಮಿನೆಟ್ ಆಗಿತ್ತು. ಈ ಭಾರಿ ಹೆಚ್ಚು ವಿಭಾಗಗಳಲ್ಲಿ ನಾಮಿನೆಟ್ ಆದ ಈ ಮೂರು ಚಿತ್ರಗಳ ನಡುವೆ ಸೈಮಾದಲ್ಲಿ ಪೈಪೋಟಿ ಇತ್ತು.
ಕೊನೆಗೂ ಅತೀಹೆಚ್ಚು ವಿಭಾಗಗಳಲ್ಲಿ ನಾಮಿನೆಟ್ ಆದ ರಾಬ್ಬರ್ಟ್ ಸಿನೆಮಾ ಪ್ರಶಸ್ತಿಯನ್ನು ಗೆದ್ದು ಕೊಂಡಿತು. ಆದರೆ ಇದೀಗ ಸೈಮಾದವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್ ಹಾಕಿರುವುದು ದರ್ಶನ್ ಅವರ ಕುರಿತು. ಸೈಮಾದವರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿಬಾಸ್ ಅವರನ್ನು ಈ ಸೈಮಾ ಅವಾರ್ಡ್ ಕಾರ್ಯಕ್ರಮದ ಕೇಂದ್ರ ಬಿಂದು ಎಂದು ಘೋಷಣೆ ಮಾಡಿದ್ದರೆ. ಈ ವಿಚಾರ ಸಿಕ್ಕಾಪಟ್ಟೆ ವೈ’ರಲ್ ಅಗಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.