ನಮಸ್ತೆ ಪ್ರೀತಿಯ ವೀಕ್ಷಕರೆ ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ನಟ ಅಂದರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂತನೇ ಹೇಳಬಹುದು. ದರ್ಶನ್ ಅವರಿಗೆ ಕೇವಲ ಪುರುಷರು ಮಾತ್ರವಲ್ಲದೆ ಮಹಿಳೆಯರು ಕೂಡ ಅಭಿಮಾನಿಗಳಿದ್ದಾರೆ ಎಂಬ ವಿಚಾರ ಸಾಕಷ್ಟು ಬಾರಿ ಸಾಬೀತಾಗಿದೆ. ಈಗಲೂ ಕೂಡ ಅಂತಹದೇ ಒಂದು ಸನ್ನಿವೇಶ ಎದುರಾಗಿದೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಅವರ ಅಭಿನಯದ ‘ಬನಾರಸ್’ ಚಿತ್ರ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದ್ದು ಈ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಸೇರಿದಂತೆ ‘ಬನಾರಸ್’ ಚಿತ್ರತಂಡ ಪ್ರತಿ ಜಿಲ್ಲೆಗೂ ಹೋಗಿ ಅಲ್ಲಿ ಚಿತ್ರದ ಪ್ರಮೋಷನ್ ಮಾಡುತ್ತಿದ್ದಾರೆ
ನೆನ್ನೆಯಷ್ಟೇ ಹುಬ್ಬಳ್ಳಿಯಲ್ಲೂ ಕೂಡ ಅದ್ದೂರಿಯಾಗಿ ‘ಬನಾರಸ್’ ಸಿನಿಮಾದ ಪ್ರೀ ಈವೆಂಟ್ ಕಾರ್ಯಕ್ರಮದನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಮುಖ್ಯ ಅತಿಥಿಯಾಗಿ ಕರಗಿಸಲಾಗಿತ್ತು.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಿತ್ರತಂಡಕ್ಕೆ ಶುಭ ಕೋರುವುದಕ್ಕಾಗಿ ಹುಬ್ಬಳ್ಳಿಗೆ ತೆರಳಿದರು ಅಷ್ಟೇ ಅಲ್ಲದೆ ಝೈದ್ ಖಾನ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ‘ಬನಾರಸ್’ ಸಿನಿಮಾಕ್ಕೆ ಸಂಬಂಧಪಟ್ಟಂತಹ ಎಲ್ಲಾ ಕಾರ್ಯ ಚಟುವಟಿಕೆಯಲ್ಲೂ ಕೂಡ ದರ್ಶನ್ ಅವರು ಇದೀಗ ಪಾಲ್ಗೊಂಡಿದ್ದಾರೆ.
ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ದರ್ಶನ್ ಅವರು ಕೂಡ ಮುಖ್ಯ ಅತಿಥಿ ಪಾತ್ರ ಒಂದರಲ್ಲಿ ನಟನೆ ಮಾಡಿದ್ದಾರೆ ಆದರೆ ಈ ಸಿನಿಮಾದಲ್ಲಿ ದರ್ಶನ್ ಅವರು ನಟನೆ ಮಾಡಿರುವ ವಿಚಾರವನ್ನು ಚಿತ್ರದಂಡ ಎಲ್ಲಿಯೂ ಕೂಡ ಬಿಟ್ಟು ಕೊಟ್ಟಿಲ್ಲ. ದರ್ಶನ್ ಅವರು ಯಾವ ಪಾತ್ರದಲ್ಲಿ ಬಂದು ಈ ಸಿನಿಮಾದಲ್ಲಿ ಸೇರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುವ ದೃಷ್ಟಿಯಿಂದಾಗಿ ಈ ಒಂದು ಸೀನ್ ಅನ್ನು ಹಾಗೂ ಪೋಸ್ಟರ್ ಅನ್ನು ಚಿತ್ರತಂಡ ಎಲ್ಲಿಯೂ ಕೂಡ ರಿವಿಲ್ ಮಾಡಿಲ್ಲ.
ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವಂತಹ ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ದರ್ಶನ್ ಅವರು ವೇದಿಕೆಯ ಮುಂದಿನ ಸಾಲಿನಲ್ಲಿ ಕುಳಿತುಕೊಂಡಿದ್ದರು. ದರ್ಶನ್ ಅವರನ್ನು ನೋಡುತ್ತಿದ್ದ ಹಾಗೆ ಸಾಕಷ್ಟು ಅಭಿಮಾನಿಗಳು ಡಿ ಬಾಸ್ ಎದ್ದು ಜೈಕಾರ ಹಾಕಲು ಪ್ರಾರಂಭ ಮಾಡಿದರು. ಇನ್ನೂ ಕೆಲವು ಅಭಿಮಾನಿಗಳು ಮುಗಿಬಿದ್ದು ಸೆಲ್ಫಿ ತೆಗೆಯುವುದಕ್ಕೆ ಪ್ರಯತ್ನ ಪಟ್ಟರು ಆದರೆ ದರ್ಶನ್ ಅವರು ಯಾರ ಕೈಗೂ ಸಿಗದೆ ಮುಂದೆ ಬಂದು ಕೂತಿರುತ್ತಾರೆ.
ಇದೇ ಸಮಯದಲ್ಲಿ ಯುವತಿಯೊಬ್ಬಳು ಮೊಬೈಲ್ ಹಿಡಿದು ಕೊಂಡು ಬಂದು ದರ್ಶನ್ ಕುಳಿತಿರುವ ಜಾಗದಲ್ಲಿಯೇ ಕುಳಿತುಕೊಂಡು ಸೆಲ್ಫಿ ತೆಗೆಯಲು ಮುಂದಾಗುತ್ತಾಳೆ. ಈ ಸಮಯದಲ್ಲಿ ದರ್ಶನ್ ಆ ಹುಡುಗಿಯ ಮೊಬೈಲ್ ಅನ್ನು ಕಸಿದುಕೊಳ್ಳುತ್ತಾರೆ ತದನಂತರ “ನೋಡಮ್ಮ ನಾನು ಯಾರಿಗೂ ಕೂಡ ಸೆಲ್ಫಿ ಕೊಟ್ಟಿಲ್ಲ ಫೋಟೋ ತೆಗೆಸಿಕೊಂಡಿಲ್ಲ ಈಗ ನಿನಗೆ ನಾನು ಸೆಲ್ಫಿ ತೆಗೆಯಲು ಅವಕಾಶ ಕೊಟ್ಟರೆ ಅವರೆಲ್ಲರಿಗೂ ಮೋಸ ಮಾಡಿದಂತಾಗುತ್ತದೆ, ಹಾಗಾಗಿ ದಯವಿಟ್ಟು ಸೆಲ್ಫಿ ಮತ್ತು ಫೋಟೋ ತೆಗೆಯಬೇಡ. ಸದ್ಯಕ್ಕೆ ಈ ಕಾರ್ಯಕ್ರಮವನ್ನು ವೀಕ್ಷಣೆ ಮಾಡು, ಬಿಡುವ ಆದಾಗ ಈ ಕಾರ್ಯಕ್ರಮದಿಂದ ಹೊರಡುವ ಸಮಯದಲ್ಲಿ ನಾನೇ ಎಲ್ಲರಿಗೂ ಸೇಲ್ಫಿಗೆ ಪೋಸ್ ನೀಡುತ್ತೇನೆ ಎಂದು ಬುದ್ಧಿವಾದವನ್ನು ಹೇಳಿದ್ದಾರೆ”
ಸದ್ಯಕ್ಕೆ ದರ್ಶನ್ ಅವರು ಯುವತಿಯ ಮೊಬೈಲ್ ಕಸಿದುಕೊಂಡಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ ಇದು ಒಂದು ಕಡೆ ಮೆಚ್ಚುಗೆ ಪಡೆದರೆ ಇನ್ನೊಂದು ಕಡೆ ಆ.ಕ್ರೋ.ಶ.ವ.ನ್ನು ವ್ಯಕ್ತಪಡಿಸುವಂತಿದೆ. ಹೌದು ಹುಡುಗಿ ಅಂತನೂ ನೋಡದೆ ಮೊಬೈಲ್ ಕಸಿದುಕೊಂಡಿದ್ದಾರೆ ಎಂದು ಕೆಲವು ನೆಟ್ಟಗರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ದರ್ಶನ್ ನಿಜಕ್ಕೂ ಕೂಡ ಗ್ರೇಟ್ ಏಕೆಂದರೆ ಒಬ್ಬರಿಗೆ ಸೆಲ್ಫಿ ಕೊಟ್ಟರೆ ಮತ್ತೊಬ್ಬರಿಗೆ ಮೋಸವಾಗುತ್ತದೆ ಎಂಬ ಮನೋ ದೃಷ್ಟಿಯಿಂದ ಆಕೆಗೆ ಬುದ್ಧಿವಾದ ಹೇಳಿ ಕಳಿಸಿದ್ದಾರೆ ಎಂದು ಅವರನ್ನು ಮೆಚ್ಚಿಕೊಂಡಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.