ಚಂದನವನದಲ್ಲಿ ಡಾ.ರಾಜ್ ಕುಮಾರ್ ಅವರನ್ನು ಬಿಟ್ಟರೆ ಅತ್ಯಂತ ಜನಪ್ರಿಯತೆ ಹೊಂದಿದ ಅತೀ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಹೊಂದಿರುವ ನಟ ಅಂದರೆ ನಮ್ಮ ನಿಮ್ಮೆಲ್ಲರ ಮೆಚ್ಚಿನ ನಟ ಡಾ. ವಿಷ್ಣುವರ್ಧನ್ ಅವರು ಎಂದು ತಪ್ಪಾಗಲಾದರದು. ಕನ್ನಡ ಸಿನೆಮಾರಂಗದಲ್ಲಿ ಬರೋಬ್ಬರಿ ಇನ್ನೂರು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಈ ಸಿಂಹ ಅಭಿಮಾನಿಗಳ ಆರಾಧ್ಯ ದೇವರು ಕೂಡ ಹೌದು.
ಡಾ. ವಿಷ್ಣುವರ್ಧನ್ ಅವರ ಸರಳತೆ, ಅವರು ಬದುಕಿದ್ದ ಪರಿ ಅವರ ನಟನೆ ಮಾಡುತ್ತಿದ್ದಂತ ಸಿನೆಮಾಗಳ ಆಯ್ಕೆ ಎಲ್ಲವನು ನಿಮಗೆ ವಿಶ್ಲೇಷಣೆ ಮಡುತ್ತಾ ಹೋದರೆ ಖಂಡಿತ ಈ ಜನುಮವೇ ಸಾಲದು. ಇನ್ನು ಕನ್ನಡ ಸಿನಿ ಪ್ರೇಕ್ಷಕರು ನಟ ವಿಷ್ಣುವರ್ಧನ್ ಅವರ ಸೂರ್ಯವಂಶ ಸಿನೆಮಾವನ್ನು ಮರೆಯಲು ಸಾಧ್ಯವೇ? ಖಂಡಿತಾವಾಗಿಯೂ ಇಲ್ಲ. ಆ ಚಿತ್ರ ರಿಮೆಕ್ ಆಗಿದ್ದರು ಕೂಡ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡುಕೊಂಡಿತು, ಈ ಕನ್ನಡದ ಸೊಗಡಿಗೆ ತಕ್ಕಂತೆ ಎಸ್ ನಾರಾಯಣ್ ಅವರು ನಿರ್ದೇಶನ ಮಾಡಿದ್ದಾರೆ.
ಸೂರ್ಯವಂಶ ಚಿತ್ರದ ಹಾಡುಗಳು, ವಿಷ್ಣುವರ್ಧನ್ ಅವರ ಅಭಿನಯ ದೊಡ್ಡಣ್ಣ ಹಾಗೂ ಮುಖ್ಯಮಂತ್ರಿ ಚಂದ್ರು ಅವರ ಪಂಚಿಂಗ್ ಡೈಲಾಗ್ ಗಳು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು ಈ ಚಿತ್ರ ಇಂದಿಗೂ ಕೂಡ ಟಿವಿ ಗಳಲ್ಲಿ ಪ್ರದರ್ಶನವಾಗಿ ಮನೆ ಮಂದಿಯಲ್ಲ ಕೂತು ಚಿತ್ರವನ್ನು ವೀಕ್ಷಿಸುತ್ತಾರೆ. ಅಲ್ಲದೆ ಚಿತ್ರದ ಹಾಡುಗಳು ಈಗಲೂ ಕೂಡ ಇಂದಿನ ಯುವ ಯುವಕರಿಗೆ ಫೆವರೇಟ್ ಹಾಡುಗಳಗಿದ್ದು. ಇಂದಿಗೂ ಕೂಡ ಹಾಡುಗಳನ್ನು ಕೇಳುತ್ತಾರೆ.
ಇನ್ನು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ಸಿನಿ ಜೀವನವನ್ನು ಪ್ರಾರಂಭಿಸಿದ ನಟಿ ಇಶಾ ಕೊಪ್ಪಿಕ್ಕರ್ ಅಭಿನಯದ ಮೊದಲ ಸಿನೆಮಾದಲ್ಲೇ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಕಂದುಕೊಳ್ಳುತ್ತಾರೆ. ಆಕೆಯ ಸೌಂದರ್ಯಕ್ಕೆ ಅಂದಿನ ಯುವಪೀಳಿಗೆ ಮನ ಸೊತ್ತಿದ್ದು. ಆ ನಟಿಯ ಗ್ಲಾಮಾರ್ ನೋಡಲೆಂದು ಅದೆಷ್ಟೋ ಜನ ಸೂರ್ಯವಂಶ ಚಿತ್ರವನ್ನು ನೋಡಿದ್ದರು.
ಡಾ. ವಿಷ್ಣುವರ್ಧನ್ ಅವರ ಜೊತೆ ತೆರೆಹಂಚಿಕೊಂಡ ಕನ್ನಡಿಗರ ಹೃದಯ ಕದ್ದ ಚಲುವೆ ಇಶಾ ಕೊಪ್ಪಿಕ್ಕರ್ ಅವರು ಮೂಲತಹ ಬಾಲಿವುಡ್ ನವರಾಗಿದ್ದು, ಹಿಂದಿ ಕನ್ನಡ, ತೆಲುಗು, ತಮಿಳು,ಮರಾಠಿ ಸಿನೆಮಾಗಳಲ್ಲಿ ಅಭಿನಯಿಸಿ ಭಾರತ ಚಿತ್ರರಂಗದ ಸಕ್ಕತ್ ಗ್ಲಾಮರ್ಸ್ ನಟಿ ಎಂದೆಂಸಿಕೊಂಡರು. ಇಶಾ ಅವರು 1976 ರಲ್ಲಿ ಮುಂಬೈನಲ್ಲಿ ಜನಿಸಿದ್ದು ಮೊದ ಮೊದಲು ಮಾಡಿಲಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ನಂತರ 1998 ರಲ್ಲಿ ಚಂದ್ರಲೇಖ ಎಂಬ ತೆಲುಗು ಚಿತ್ರದ ಮೂಲಕ ತಮ್ಮ ಬಣ್ಣದ ಜೀವನವನ್ನು ಪ್ರಾರಂಭಿಸಿದರು.
ಕನ್ನಡದಲ್ಲಿ ತಮ್ಮ ಮೊದಲ ಚಿತ್ರದಲ್ಲೇ ವಿಷ್ಣುವರ್ಧನ್ ಅವರ ಜೊತೆ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡ ಅವರು, ನಂತರ, ‘ಹೂ ಅಂತಿಯಾ ಉಹೂ ಅಂತೀಯಾ’ ಚಿತ್ರದಲ್ಲಿ ನಟಿಸಿ ಕನ್ನಡಡಿಗರ ನೆಚ್ಚಿನ ನಟಿ ಯಾದರು. ನಂತರ ಕ್ರೀಜಿ ಸ್ಟಾರ್ ರವಿಚಂದ್ರನ್ ಅವರ ಜೊತೆ ಓ ನನ್ನ ನಲ್ಲೆ ಚಿತ್ರದಲ್ಲಿ ಬಣ್ಣ ಹಚ್ಚಿದ ಇಶಾ, ಅವರಿಗೆ ಈ ಸಿನೆಮಾ ದೊಡ್ಡ ಮಟ್ಟದಲ್ಲಿ ಹೆಸರು ತಂದು ಕೊಡುವ ಜೊತೆಗೆ ಚಿತ್ರ ಸೂಪರ್ ಹಿಟ್ ಆಯಿತು.
ನಟಿ ಇಶಾ ಕೊಪ್ಪಿಕ್ಕರ್ ಅವರು ಪಂಚ ಭಾಷೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದು. ಅಂದಿನ ಕಾಲದಲ್ಲಿ ಸಿನೆಮಾ ರಸಿಕರ ಹೃದಯ ಕದ್ದ ಚೋರಿ ಕೂಡ ಆಗಿದ್ದರು. ಎಲ್ಲವು ಚನ್ನಾಗಿಯೇ ಇತ್ತು ಸಿನಿಮಾಗಳಲ್ಲಿ ನಟಿಸುವ ಒಳ್ಳೆಯ ಅವಕಾಶಗಳು ಬರುತ್ತಾಲೆ ಇದ್ದವು. ಆದರೂ ಕೂಡ ಸಾಕಷ್ಟು ವರ್ಷಗಳ ಕಾಲ ಸಿನೆಮಾರಂಗದಿಂದ ದೂರ ಉಳಿದಿದ ನಟಿ ಇಶಾ ಕೊಪ್ಪಿಕ್ಕರ್ ಅವರು ಮತ್ತೆ ಶಿವಣ್ಣ ಅವರ ಕವಚ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಇದೀಗ ಬಾಲಿವುಡ್ ನಲ್ಲಿಯೂ ಕೂಡ ಅಭಿನಯಿಸುತ್ತಿರುವ ಸುದ್ಧಿ ಕೇಳಿ ಬರುತ್ತಿದೆ.
ಇನ್ನು 2009 ರಲ್ಲಿ ಖ್ಯಾತ ಉದ್ಯಮಿ ಟಮ್ಮಿ ನಾರಂಗ್ ಎಂಬುವರನ್ನು ಮದುವೆಯಾಗಿದ್ದು ಇಶಾ 2014 ರಲ್ಲಿ ರಿಯಾನ ಎಂಬ ಮುದ್ದಾದ ಹೆಣ್ಣು ಮಗಳಿಗೆ ಜನ್ಮ ನೀಡಿದ್ದಾರೆ. ಸದ್ಯಕ್ಕೆ ಈ ದಂಪತಿಗಳು ಮುಂಬೈನಲ್ಲಿ ವಾಸಿಸುತ್ತಿದ್ದು. ಈಗಲೂ ಕೂಡ ಇಶಾ ಕೆಲ ಹಿಂದಿ ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸುತ್ತಿದ್ದು. ಅವಕಾಶಗಳು ಸಿಗುವವರೆಗೂ ನಟಿಸುತ್ತೇನೆ ಎಂದು ಹೇಳಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ