ಸೂರ್ಯನೊಬ್ಬ ಚಂದ್ರನೊಬ್ಬ, ರಾಜನೂ ಒಬ್ಬ, ಈ ರಾಜನೂ ಒಬ್ಬ…ಈ ನಗು ಮರೆಯಾಗಿ ಇವತ್ತಿಗೆ ಒಂದು ವರ್ಷ.?ಮತ್ತೆ ಹುಟ್ಟಿ ಬನ್ನಿ, ಅಪ್ಪು! ❤️

ಆತನದ್ದು ಸಾರ್ಥಕ ಬದುಕು. ತನ್ನ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆಯಿರದೆ, ಸಾರ್ಥಕವಾಗಿ ಬದುಕಿದ ಜೀವ ಪುನೀತ್. ಹೆಣ್ಣು ಮಕ್ಕಳೊಂದಿಗೆ ಯಾವತ್ತೂ ಅಸಭ್ಯವಾಗಿ ವರ್ತಿಸದೆ ಅವರನ್ನು ಸದಾ ಗೌರವದಿಂದ ನೋಡುತ್ತಾ, ಒಂದೆರಡು ಚಲನಚಿತ್ರ 25 ದಿನ ಓಡಿದರೆ ದೊಡ್ಡ ಸೆಲೆಬ್ರಿಟಿಯಂತೆ ವರ್ತಿಸುವ ಈಗಿನ ಮಾಡರ್ನ್ ಚಿತ್ರರಂಗದಲ್ಲಿ, ತಾನು ಎಷ್ಟೇ ಯಶಸ್ವಿಗಳಿಸಿದರೂ ‘ನಾನೇ’ ನನ್ನಿಂದನೆ ಎಲ್ಲಾ ಎನ್ನುವ ಅಹಂ ಭಾವನೆಯನ್ನು ಮೈಗೂಡಿಸಿಕೊಳ್ಳದೆ ತನಗಿಂತಲೂ ಕಿರಿಯ ನಟರೊಂದಿಗೆ ಅನ್ಯೋನ್ಯತೆಯಿಂದ ಇದ್ದವರು ಇವರು. ರಾಜಕೀಯ ಕೇಸರೆರೆಚಾಟದಿಂದ ,ಡ್ರಗ್ಸ್, ಆಲ್ಕೋಹಾಲ್ ಮುಂದಾದ ವಿಷಯಗಳಿಂದ ದೂರವಿದ್ದ ನಟ ಪುನೀತ್.

ಹುಟ್ಟುತ್ತಲೇ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಪುನೀತ್ ಸಮಾಜದ ಮುಂದೆ ನಾನೊಬ್ಬ ಆಗರ್ಭ ಶ್ರೀಮಂತ, ನನ್ನ ತಂದೆ ಭಾರಿದೊಡ್ಡ ನಟ ಹಾಗಾಗಿ ನನ್ನನ್ನು ಗೆಲ್ಲಿಸಿ ಅಂತ ಹೇಳಿಕೊಂಡು ತಿರುಗಾಡಿದನ್ನು ನಾನಂತೂ ನೋಡಿಲ್ಲ. ತಂದೆಯ ಬೆನ್ನು ಹತ್ತಿ ಯಶಸ್ಸು ಗಳಿಸುವ ಎಷ್ಟೋ ಅವಕಾಶಗಳು ಇದ್ರೂ ಅದನ್ನೆಲ್ಲಾ ಆದಷ್ಟು ಬದಿಗೆಸರಿಸಿ ತನ್ನದೇ ಕಠಿಣ ಪರಿಶ್ರಮದಿಂದ ಮೇಲೆ ಬಂದ ನಟ ಪುನೀತ್.

ಸಭ್ಯವಾಗಿ, ಯಾವುದೇ ತುಂಡು ಉಡುಗೆ, ಬ್ರೇಕ್ ಡ್ಯಾನ್ಸ್ ಇಲ್ಲದೆ, ಯಾವುದೇ ಧರ್ಮದ ಸಂಸ್ಕೃತಿಯನ್ನು ಅಪಹಾಸ್ಯ ಮಾಡದೆ ಒಂದು ಕುಟುಂಬ ಕೂತು ನೋಡುವಂತ, ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಚಲನಚಿತ್ರಗಳನ್ನು ಮಾಡಿದ ಹೆಗ್ಗಳಿಕೆ ಪುನೀತ್ ಅವರದ್ದು. ಮನೆಗೆ ಒಳ್ಳೆಯ ಮಗನಾಗಿ, ನಾಡಿಗೆ ಮಾದರಿ ನಟನಾಗಿ, ಸಮಾಜಕ್ಕೆ ಉತ್ತಮ ಸೇವಕನಾಗಿ, ಚಲನಚಿತ್ರರಂಗದಲ್ಲಿ ಅದೆಷ್ಟೋ ಜನರಿಗೆ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದವರು, ಚಿತ್ರರಂಗಕ್ಕೆ ಮಾರ್ಗದರ್ಶಕನಾಗಿ ಇದ್ದವರು ಪುನೀತ್.

ಆ ದಿನಗಳಲ್ಲಿ ಪುನೀತ್ ಪಾರ್ಥಿವ ಶರೀರ ನೋಡಲು 25ಲಕ್ಷಕ್ಕೂ ಅಧಿಕ ಜನ ಬಂದು ಹೋಗಿದ್ರು. ಅಷ್ಟು ನೂಕು ನುಗ್ಗಲು ಇದ್ರೂ ಅಲ್ಲಿ ಎಲ್ಲೂ ಕಳ್ಳತನ ಆಗಿರಲಿಲ್ಲ. So ಕಾಲ್ಡ್ ಬಾದ್ ಷಾ ಶಾರುಖ್ ನ ಮಗ ವ್ಯಸನಿ ಖಾನ್ ಜೈಲಿಂದ ಬಿಡುಗಡೆ ಆಗಿ ಮನೆಗೆ ಮೆರವಣಿಗೆಯಲ್ಲಿ ಬರುವಾಗ ಅಬ್ಬಾಬ್ಬಾ ಅಂದ್ರೆ 100 ಜನ ಇದ್ರು, ಅಲ್ಲಿ 4 ಮೊಬೈಲ್ ಕಳ್ಳತನ ಆಗಿತ್ತು. ಅವರವರ ಯೋಗತ್ಯೆಗೆ ತಕ್ಕ ನಡತೆಯಿರುವ ಜನಗಳು ಅವರವರ ಹತ್ರ ಸೆರ್ತಾರೆ ಅಷ್ಟೇ ಅನೋದಕ್ಕೆ ಇದು ಉತ್ತಮ ನಿದರ್ಶನ.

ನಮ್ಮ ಮಂಗಳೂರಿನ ಜನ ಸಿನಿಮಾ ನಟರ ಬಗ್ಗೆ ಅಭಿಮಾನ ಹೊಂದಿರೋದು, ಅವರ ಕಟೌಟ್ ಹಾಕೋದು ಎಲ್ಲಾ ಭಾರಿ ಕಡಿಮೆ.ಯಾರಾದರೂ ಚಿತ್ರನಟ ಬಂದರೆ ಸುತ್ತುವರಿಯೋದು ಹಾಗೂ ಅಭಿಮಾನ ವ್ಯಕ್ತಪಡಿಸೋದು, ಜೈಕಾರ ಹಾಕೋದೆಲ್ಲ ಕಾಣ ಸಿಗೋದು ಬಾರಿ ಅಪರೂಪ. ಡಾಕ್ಟರ್ ರಾಜ್ ಕುಮಾರ್, ವಿಷ್ಣುವರ್ಧನ್ ಅವರು ತೀರಿಕೊಂಡಾಗಲೂ ಬೆಂಗಳೂರಿನ ರೀತಿಯ ಸ್ಪಂದನೆ ಮಂಗಳೂರಲ್ಲಿ ಇಲ್ಲಿರಲಿಲ್ಲ ಆದರೆ ನಮ್ಮ ಅಪ್ಪು ಪುನೀತ್ ತೀರಿಕೊಂಡಾಗ ಈ ಕಡೆಯ ಜನರಿಗೂ ಮನೆಯ ಮಗನನ್ನು ಕಳಕೊಂಡ ರೀತಿಯ ದುಃಖ ಇತ್ತು. ಬಹುತೇಕ ಎಲ್ಲರ ಕಣ್ಣಂಚಿನಲ್ಲಿ ಕಣ್ಣೀರಿತ್ತು. ಪ್ರತಿಯೊಬ್ಬರ ಬಾಯಲ್ಲೂ ಛೇ ಅವರಿಗೆ ಹೀಗಾಗಬಾರದಿತ್ತು ಅನ್ನುವ ಮರುಕವಿತ್ತು ನೋವಿತ್ತು. ಇದು ಪುನೀತ್ ಅವರ ಜನಪ್ರಿಯತೆಗೆ, ಜನರಿಗೆ ಅವರ ಮೇಲಿದ್ದ ಗೌರವ,ಪ್ರೀತಿಗೆ ಸಾಕ್ಷಿ.

ಪುನೀತ್ ಅವರನ್ನು ಕಳ್ಕೊಂಡು ವರ್ಷಗಳೇ ಕಳೆಯಿತು, ದಿನಗಳ ಮೇಲೆ ದಿನಗಳು ಉರುಳಿತು, ನಡೆಯಬಾರದ ಘಟನೆಯೊಂದು ಮಿಂಚಿನಂತೆ ಮಿಂಚಿ ಸಿಡಿಲಿನಂತೆ ಬಡಿದೆ ಹೋಯಿತು. ಅದ್ಯಾಕೋ ಇವತ್ತು ಮತ್ತೆ ಅದನ್ನು ನೆನೆದು ಮನಸ್ಸು ತುಂಬಾ ಭಾರ ಆಗ್ತಾ ಇದೆ. ಬೆಟ್ಟದ ಹೂವು ಬಾಡಿಹೋಯಿತೋ, ಆಡಿಸಿದಾತ ಬೇಸರ ಮೂಡಿಸಿ ಆಟ ಮುಗಿಸಿದನೋ ಎನ್ನುವಂತಿದೆ ಪರಿಸ್ಥಿತಿ. ಯುದ್ಧವೇ ಮಾಡದೇ ರಾಜ್ಯವನ್ನು ಗೆದ್ದ ರಾಜಕುಮಾರನ ನೆನಪು ಯಾವತ್ತಿಗೂ ಶಾಶ್ವತ. ಪುನೀತ್ ಅವರ ಆದರ್ಶ ನೆನಪುಗಳು ಯಾವತ್ತಿಗೂ ಅಮರ.

Leave a Reply

Your email address will not be published. Required fields are marked *