‘ಸಿನಿಮಾ ಅಂದ್ರೆ ಇದು’ ಕಾಂತಾರ ನೋಡಿ ರಿಷಬ್ ಶೆಟ್ಟಿ ಹೊಗಳಿ ಹ್ಯಾಂಗೋವರ್​ಗೆ ಹೋದ ನಟಿ ಕಂಗನಾ ರಣಾವತ್

ನಮಸ್ತೆ ಪ್ರೀತಿಯ ವೀಕ್ಷಕರೆ ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರು ಯಾವುದೇ ವಿಚಾರವಾಗಲಿ ಇನ್ನೊಬ್ಬರನ್ನು ಹೊಗಳಿದಿಕ್ಕಿಂತ ತೇಗಳಿದ್ದೆ ಹೆಚ್ಚು. ಯಾವುದಾದರು ಹೊಸ ಸಿನೆಮಾ ಬಿಡುಗಡೆಯದರೆ ಅದನ್ನು ನೋಡಿ ಟೀಕೆ ಮಾಡಿರೋದೇ ಹೆಚ್ಚು. ವಿವಾದಗಳನ್ನು ಅವರು ಸದಾ ಮೈಮೇಲೆ ಎಳೆದುಕೊಳ್ಳುತ್ತಾಳೆ ಇರುತ್ತಾರೆ. ಆದರೆ, ಈಗ ಅವರು ಇಡೀ ದೇಶವೇ ನೋಡಿ ಮೆಚ್ಚಿ ಕೊಂಡಿರುವ ಕಾಂತಾರ ಸಿನೆಮಾ ನೋಡಿ ಬಂದು ಅದನ್ನು ಮನಸಾರೆ ಹಾಡಿ ಹೊಗಳಿದ್ದಾರೆ. ನಿರ್ದೇಶಕ ರಿಷಬ್ ಶೆಟ್ಟಿ ಅವರ ಕೆಲಸವನ್ನು ಮನತುಂಬಾ ಮೆಚ್ಚಿಕೊಂಡಿದ್ದಾರೆ. ಬಾಲಿವುಡ್ ನಟಿಯ ಬಾಯಿಯಿಂದ ಕಾಂತಾರ ಸಿನಿಮಾಕ್ಕೆ ಮೆಚ್ಚಿಗೆ ಸಿಕ್ಕಿದ್ದು ರಿಷಬ್ ಶೆಟ್ಟಿ ಅಭಿಮಾನಿಗಳಿಗೆ ಖುಷಿಯನ್ನು ಹೆಚ್ಚಿಸಿದೆ.

ನಟಿ ಕಂಗನಾ ಇದುವರೆಗೂ ಯಾವ ಸಿನೆಮಾವನ್ನು ಸುಖ ಸುಮ್ಮನೆ ಹೊಗಳಿದವರಲ್ಲ. ಆದರೆ, ‘ಕಾಂತಾರ’ ವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಕಾಂತಾರ ಚಿತ್ರವನ್ನು ಕುಟುಂಬ ಸಮೇತರಾಗಿ ನೋಡಿ ಬಂದಿದ್ದಾರೆ ನಟಿ ಕಂಗನಾ. ಸಿನೆಮಾ ಯಾವ ರೀತಿಯ ಅನುಭವ ನೀಡಿತು ಎಂಬ ಬಗ್ಗೆ ವಿಡಿಯೋ ಮಾಡಿದ್ದಾರೆ. ‘ನಾನು ಕುಟುಂಬದವರ ಜೊತೆ ಕಾಂತಾರ ನೋಡಿ ಬಂದೆ. ಈಗಲೂ ನಾನು ಶೇಕ್ ಆಗುತ್ತಿದ್ದೇನೆ. ಎಂತಹ ಅದ್ಭುತ ಅನುಭವ. ರಿಷಬ್ ಶೆಟ್ಟಿ ಅವರೇ ನಿಮಗೆ ಹ್ಯಾಟ್ಸ್ ಆಫ್. ಬರವಣಿಗೆ, ನಿರ್ದೇಶನ, ನಟನೆ, ಆಕ್ಷನ್ ಎಲ್ಲವೂ ಬ್ರಿಲಿಯಂಟ್. ನಂಬೋಕೆ ಸಾಧ್ಯವಾಗುತ್ತಿಲ್ಲ’ ಎಂದು ವಿಡಿಯೋದಲ್ಲಿ ಕಂಗನಾ ಹೇಳಿದ್ದಾರೆ.

ಸಂಪ್ರದಾಯಕ, ಜಾನಪದ ವಿಚಾರ, ಸ್ಥಳೀಯ ಸಮಸ್ಯೆಗಳನ್ನು ಸಿನೆಮಾದಲ್ಲಿ ಹದವಾಗಿ ಬೆರೆಸಲಾಗಿದೆ. ಇಂಥ ಸುಂದರ ಛಾಯಾಗ್ರಹಣ, ಸಿನೆಮಾ ಎಂದರೆ ಇದು. ಒಂದು ವಾರಗಳ ಕಾಲ ಈ ಹ್ಯಾಂಗೋವರ್ ನಿಂದ ಹೊರಬರಲು ಸಾಧ್ಯವಿಲ್ಲ’ ಎಂದು ಕಂಗನಾ ಘೋಷಿಸಿದ್ದಾರೆ.

‘ಕಾಂತಾರ’ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಸುಮಾರು 170ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿ ಆಗಿದೆ. ಈ ಮೂಲಕ ಕನ್ನಡದ ಹಲವು ಸಿನೆಮಾಗಳು ಮಾಡಿದ ದಾಖಲೆಗಳನ್ನು ಈ ಕಾಂತಾರ ಚಿತ್ರ ಚಚ್ಚಿ ಉಡೀಸ್ ಮಾಡಿದೆ. ಈ ಮೂಲಕ ಈ ವರ್ಷ ತೆರೆಗೆ ಬಂದ ಕನ್ನಡದ ಚಿತ್ರಗಳ ಪೈಕಿ ಅತಿ ಹೆಚ್ಚು ಗಳಿಕೆ ಮಾಡಿದೆ ಎರಡನೇ ಚಿತ್ರ ಇದಾಗಿದೆ. ಮೊದಲು ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಇದೆ.

ಬರೇ ಕನ್ನಡದ ಜನತೆಗೆ, ಕರ್ನಾಟಕದಲ್ಲಿ ಮಾತ್ರ ಅಲ್ಲದೇ ಬೇರೆ ಭಾಷೆಯಲ್ಲಿ ಕೂಡ ಅದು ಬಾಲಿವುಡ್ ಸ್ಟಾರ್ ನಟ ನಟಿಯರು ಈ ಚಿತ್ರವನ್ನು ಹೃದಯಪೊರಕವಾಗಿ ಹರಿಸುತ್ತಿದ್ದಾರೆ ಎಂದರೆ ನಿಜವಾಗಿಯೂ ಹೆಮ್ಮೆಯ ವಿಷಯ. ಧನ್ಯವಾದಗಳು ರಿಷಬ್ ಶೆಟ್ಟಿ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *