ಸಾಮಾಜಿಕ ಜಾಲತಾಣಗಳು ಎಲ್ಲರಿಗೂ ಕೂಡ ಒಂದೊಳ್ಳೆ ಅವಕಾಶಗಳನ್ನು ನೀಡಿದೆ. ಹೌದು, ಇತ್ತೀಚೆಗಿನ ದಿನಗಳಲ್ಲಿ ತಮ್ಮ ಪ್ರತಿಭೆಗಳನ್ನು ತೋರಿಸಲು ವೇದಿಕೆಗಾಗಿ ಕಾಯುವ ಅಗತ್ಯವಿಲ್ಲ. ಹೌದು ಸೋಶಿಯಲ್ ಮೀಡಿಯಾಗಳು ಪ್ರತಿಭೆಗಳಿಗೆ ಒಂದೊಳ್ಳೆ ಅವಕಾಶಗಳನ್ನು ಮಾಡಿಕೊಟ್ಟಿದೆ. ಹೀಗಾಗಿ ಅನೇಕರು ತಮ್ಮ ಪ್ರತಿಭೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಇಡೀ ಜಗತ್ತಿಗೆ ತೋರಿಸುವ ಮೂಲಕ ಸೆಲೆಬ್ರಿಟಿಗಳಾಗಿ ಇದ್ದಾರೆ.
ಅದರಲ್ಲಿಯೂ ಇಂದಿನ ಯುವಕ ಯುವತಿಯರ ಬಗ್ಗೆ ಹೇಳಬೇಕೇ, ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದರಲ್ಲಿ ಎತ್ತಿದ ಕೈ. ಅಷ್ಟೇ ಅಲ್ಲದೆ ಇಂದಿನ ಯುವಕರು ಯುವತಿಯರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್. ಹೀಗಾಗಿ ತಮ್ಮ ಡ್ಯಾನ್ಸ್ ಹಾಗೂ ಇನ್ನಿತರ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸಾಕಷ್ಟು ಫ್ಯಾನ್ಸ್ ಫಾಲ್ಲೋರ್ಸ್ ಅನ್ನು ಹೊಂದಿದ್ದಾರೆ.
ಮತ್ತೊಂದೆಡೆ ಪ್ರಶ್ನೆ ಹಾಗೂ ಫೋಟೋಗಳ ಮೂಲಕ ಟ್ಯಾಲೆಂಟ್ ಅನ್ನು ಗುರುತಿಸಿಕೊಳ್ಳ ಬಹುದಾಗಿದೆ. ಹೌದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಫೋಟೋಗಳು ಕ್ವಿಜ್ ಗಳು ತಲೆಗೆ ಹುಳ ಬಿಡುವ ಕೆಲಸಗಳನ್ನು ಮಾಡುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ತಲೆಗೆ ಹುಳ ಬಿಡುವ ಮೂಲಕ ಸಾಕಷ್ಟು ಪ್ರಶ್ನೆಗಳು ಹಾಗೂ ಪಝಲ್ ಗಳುನೆಟ್ಟಿಗರಿಗೆ ತಲೆ ಖರ್ಚು ಮಾಡುವಂತೆ ಮಾಡುತ್ತವೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಫೋಟೋದಲ್ಲಿ ಕಪ್ಪು ಬಿಳಿ ಬಣ್ಣದ ಜೀಬ್ರಾ ಪಟ್ಟಿಯಂತೆ ಕಾಣಿಸುತ್ತದೆ. ಆದರೆ ಇದರಲ್ಲಿ ಏನೋ ಒಂದು ವಸ್ತುವಿದೆ. ಹೌದು ಈ ಕಾರ್ಪೆಟ್ ಮೇಲೆ ಎಲ್ಲರೂ ಇಷ್ಟ ಪಡುವ ಮೊಬೈಲ್ ಇಡಲಾಗಿದೆ. ಆದರೆ ಈ ಚಿತ್ರವು ಎಲ್ಲರನ್ನು ಗೊಂದಲಕ್ಕೆ ಈಡು ಮಾಡುತ್ತದೆ. ಅಂದಹಾಗೆ, 2016 ರಲ್ಲಿ ಕಪ್ಪು ಬಿಳಿ ಬಣ್ಣದ ಫೋಟೋವೊಂದು ವೈರಲ್ ಆಗಿತ್ತು.
ಈ ಫೋಟೋವೊಂದನ್ನು ಜೀ ಯಾಹ್ ಮೇ ಎನ್ನುವ ಬಳಕೆದಾರರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಆದರೆ ಇಲ್ಲಿಯವರೆಗೆ ಈ ಫೋಟೋಗೆ ಲೈಕ್ ಮಾಡಿದವರ ಸಂಖ್ಯೆ ಲಕ್ಷ 52 ಸಾವಿರ. ಅಷ್ಟೇ ಅಲ್ಲದೇ ಈ ಫೋಟೋವನ್ನು ಶೇರ್ ಮಾಡಿದವರ ಸಂಖ್ಯೆ 22 ಸಾವಿರಕ್ಕೂ ಅಧಿಕ. ಅದಲ್ಲದೆ ಅನೇಕರು ಈ ಕಾರ್ಪೆಟ್ ಮೇಲಿರುವ ಮೊಬೈಲ್ ಫೋನ್ ಹುಡುಕಲು ಹರಸಾಹಸ ಪಟ್ಟಿದ್ದಾರೆ.
ಆದರೆ ಈ ಮೊಬೈಲ್ ಫೋನ್ ಅಷ್ಟು ಸುಲಭವಾಗಿ ಕಣ್ಣಿಗೆ ಬಿದ್ದಿಲ್ಲ. ಇದಕ್ಕೆ ಕಾರಣ ಮೊಬೈಲ್ ಬ್ಯಾಕ್ ಕವರ್ ಕೂಡ ಕಪ್ಪು ಬಿಳಿ ಕಾರ್ಪೆಟ್ ಬಣ್ಣದ್ದೇ ಆಗಿದೆ. ಹಾಗಾದರೆ ಮೊಬೈಲ್ ಫೋನ್ ಇಲ್ಲಿದೆ ಎನ್ನುವುದಕ್ಕೆ ಉತ್ತರ ಕೂಡ ನಾವೇ ಹೇಳ್ತೇವೆ. ಹೌದು ಬಲಭಾಗಕ್ಕೆ ಟೇಬಲ್ ಬರುವಂತೆ ಮೊಬೈಲ್ ಫೋನ್ ತಿರುಗಿಸಿದರೆ, ಮೊಬೈಲ್ ಅನ್ನು ತಲೆ ಕೆಳಗಾಗಿ ಇಡಲಾಗಿದೆ. ಒಂದು ವೇಳೆ ಈ ಮೊಬೈಲ್ ಫೋನ್ ಕಂಡರೆ ನೀವಿಲ್ಲಿ ಪ್ರತಿಕ್ರಿಯೆ ನೀಡಿ.