ಸಾರಿಗೆ ಬಸ್ ನಿರ್ವಾಹಕನ ಬೇಜವಾಬ್ದಾರಿ ಆಸಡ್ಡಿತನಕ್ಕೆ ಯುವತಿ ಬ-ಲಿ-ಯಾಗಿದ್ದು, ಸಾ-ವಿ-ನಲ್ಲೂ ಸಾರ್ಥಕತೆ ಮೆರೆದಿರುವಂತಹ ಘಟನೆ ನಡೆದಿದೆ. ಸೋಮನಹಳ್ಳಿ ತಾಲೂಕಿನ ತಾಂಡ್ಯದ ರಕ್ಷಿತಾ ಮೃ’ತ ಯುವತಿ. ಬಸ್ ನಿಂದ ಕೆಳಗೆ ಬಿದ್ದು ರಕ್ಷಿತಾ ಮೆದುಳು ಸಂಪೂರ್ಣ ನಿಷ್ಕ್ರಿಯವಾಗಿತ್ತು. ಚಿಕ್ಕಮಂಗಳೂರಿನ ಬಸವನಹಳ್ಳಿ ಸರ್ಕಾರಿ ಪಿಯು ಕಾಲೇಜ್ ನಲ್ಲಿ ರಕ್ಷಿತಾ ವ್ಯಾಸಂಗ ಮಾಡುತ್ತಿದ್ದರು. ಮಗಳ ಅಂಗಾಂಗ ದಾನಕ್ಕೆ ಪೋಷಕರಾದ ತಾಯಿ ಲಕ್ಷ್ಮೀ ಬಾಯಿ, ತಂದೆ ಸುರೇಶ್ ನಾಯಕ್ ಸಂಪೂರ್ಣ ಒಪ್ಪಿಗೆ ನೀಡಿ ಹೆಮ್ಮೆಗೆ ಒಳಗಾಗಿದ್ದಾರೆ.
ಸದ್ಯ ಚಿಕ್ಕಮಂಗಳೂರು ಜಿಲ್ಲೆ ಆಸ್ಪತ್ರೆಯಲ್ಲಿರುವ ರಕ್ಷಿತಾ ನಾಯಕ್ ಮೃ’ತ ದೇಹವಿದ್ದು, ಇಂದು ಸಂಜೆ ತಜ್ಞರ ತಂಡ ಚಿಕ್ಕಮಂಗಳೂರಿಗೆ ಆಗಮಿಸಲಿದೆ. ನಾಳೆ ಮಧ್ಯಾಹ್ನದ ಹೊತ್ತಿಗೆ 2 ಹೆಲಿಕ್ಯಾಪ್ಟರ್ ನಲ್ಲಿ ಅಂಗಾಂಗ ರವಾನೆ ಮಾಡಲಿದ್ದು, ಇದೇ ಮೊದಲ ಬಾರಿಗೆ ಅಪರೂಪದ ಪ್ರಕಾರಣಕ್ಕೆ ಕಾಫಿನಾಡು ಚಿಕ್ಕಮಂಗಳೂರು ಸಾಕ್ಷಿಯಾಗಲಿದೆ. ಬಸ್ ನಿಂದ ಬಿದ್ದು ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡ ಬಾಲಕಿಯ ಅಂಗಾಗ ದಾನಕ್ಕೆ ಪೋಷಕರು ಮುಂದಾಗಿದ್ದು, ಮಗಳ ಸಾ’ವಿ’ನ ದುಃಖದಲ್ಲೂ ಮಾದರಿಯಾಗಿದ್ದಾರೆ.
ಕಡೂರು ತಾಲೂಕಿನ ಸೋಮನಹಳ್ಳಿಯ ನಿವಾಸಿ ರಕ್ಷಿತಾ ಬಸವನಹಳ್ಳಿ ಸರ್ಕಾರಿ ಪಿಯು ಕಾಲೇಜಿಗೆ ಹೋಗುವಾಗ ಬಸ್ನಿಂದ ಕೆಳಗೆ ಬಿದ್ದು ಗಂ-ಭೀ-ರ-ವಾಗಿ ಗಾಯಗೊಂಡಿದ್ದಳು. ರಕ್ಷಿತಾಳನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ವೈದ್ಯರು ಪರೀಕ್ಷೆ ನಡೆಸಿ ಯುವತಿಯ ಮೆದುಳು ನಿಷ್ಕ್ರಿಯಗೊಂಡ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಮಗಳ ಅಂಗಾಂಗ ದಾನಕ್ಕೆ ಪೋಷಕರ ನಿರ್ಧಾರ ಮಾಡಿದ್ದಾರೆ.
ನಮ್ಮ ಮಗಳನ್ನು ನಾವು ಕೂಲಿ ಕೆಲಸ ಮಾಡಿಕೊಂಡು ಓದಿಸುತ್ತಿದ್ದೇವೆ. ಭಾನುವಾರ ನಾನು’ ನನ್ನ ಯಜಮಾನ್ರು ಕೂಲಿ ಕೆಲಸಕ್ಕೆ ತೆರಳಿದ್ದಾಗ ನಮಗೆ ಫೋನ್ ಬಂತು. ನಾವು ಆಸ್ಪತ್ರೆಗೆ ಬಂದು ನೋಡಿದಾಗ ಮಗುವಿಗೆ ಈ ರೀತಿ ಆಗಿತ್ತು. ಮಗಳು ಮಾತನಡುತ್ತಿರಲಿಲ್ಲ. ನಮ್ಮ ಮಗಳು ಎಲ್ಲಾದರೂ ಇನ್ನೂ ಬದುಕಿರಲಿ ಎಂದು ಅಂಗಾಂಗ ದಾನ ಮಾಡಿದ್ದೇವೆ ಎಂದು ಪೋಷಕರು ಹೇಳಿದ್ದಾರೆ.
ನೋವಿನಲ್ಲೂ ಸಾರ್ಥಕತೆ ಮೆರೆದ ತಂದೆ ತಾಯಿ ಇವರ ಕುಟುಂಬಕ್ಕೆ ಆ ದೇವರು ನೋವನ್ನು ಮರೆಯುವ ಶಕ್ತಿ ಬರಿಸಲು ಎಂದು ಕೇಳಿಕೊಳ್ಳುವ. ಈ ಮಾಹಿತಿಯನ್ನು ಆದಷ್ಟು ಶೇರ್ ಮಾಡಿ ಯುವತಿಗೆ ಗೌರವಿಸೋಣ.