ನಮಸ್ತೆ ಪ್ರೀತಿಯ ವೀಕ್ಷಕರೆ ಸಿನೆಮಾರಂಗಕ್ಕೆ ಎಂಟ್ರಿ ಕೊಟ್ಟು ಬದುಕು ಕಟ್ಟಿಕೊಂಡು ಎಲ್ಲರಿಗೂ ಯಶಸ್ಸು ಎನ್ನುವುದು ಒಲಿದು ಬರುವುದಿಲ್ಲ. ಸಾವಿರಾರು ಕನಸು ಹೊತ್ತು ಈ ರಂಗಕ್ಕೆ ಎಂಟ್ರಿ ಕೊಡುವ ಅನೇಕರು ಗೆಲುವಿನ ಜೊತೆಗೆ ಸೋಲನ್ನು ಕಾಣುತ್ತಾರೆ. ಆದರೆ ಜನರಿಗೆ ಈ ಸಿನೆಮಾರಂಗದಲ್ಲಿರುವವರು ಶ್ರೀಮಂತರು ಎಂದೇ ಭಾವಿಸುತ್ತಾರೆ. ಅಷ್ಟೇ ಅಲ್ಲದೇ ಅವರಿಗೇನು ಕಡಿಮೆ ಕೈ ತುಂಬಾ ಸಂಪಾದನೆ ಮಾಡುತ್ತಾರೆ, ನೇಮ್ ಫೇಮ್ ಎರಡು ಇದೆ ಎಂದುಕೊಳ್ಳುತ್ತೇವೆ.
ಆದರೆ ಸಿನೆಮಾರಂಗದವರ ಬದುಕು ಕೂಡ ಕಷ್ಟದಿಂದ ತುಂಬಿರುತ್ತದೆ. ಅಂದಹಾಗೆ, ಸೋಲು ಹಾಗೂ ಗೆಲುವನ್ನು ಜೊತೆಯಾಗಿ ಕಂಡವರಲ್ಲಿ ನಟ ಕಾಮ್ ನಿರ್ದೇಶಕ ದ್ವಾರಕೀಶ್ ಅವರು ಒಬ್ಬರು. ಆದರೆ ಈ ಸಿನೆಮಾರಂಗದಲ್ಲಿದ್ದುಕೊಂಡೇ ಎಷ್ಟು ಮನೆ ಮಾಡಿದ್ದಾರೆ ಎಂದು ತಿಳಿದರೆ ಅಚ್ಚರಿಯಾಗುತ್ತದೆ, ಇಲ್ಲದೆ ಸಂಪೂರ್ಣ ಮಾಹಿತಿ. ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡವರಲ್ಲಿ ದ್ವಾರಕೀಶ್ ಅವರು ಕೂಡ ಒಬ್ಬರು ಎನ್ನಬಹುದು. ಆ ಕಾಲಕ್ಕೆ ಸಿನೆಮಾರಂಗದಲ್ಲಿ ಬದುಕು ಕಟ್ಟಿಕೊಳ್ಳುವುದು ಸುಲಭ.
ಅಷ್ಟೇ ಅಲ್ಲದೇ, ಈಗ ನಟರಿಗೆ ಸಿಗುವ ಕೋಟಿ ಕೋಟಿ ಸಂಭಾವನೆಯು ಆ ಕಾಲದ ಕಲಾವಿದರಿಗೆ ಸಿಗುತ್ತಿರಲಿಲ್ಲ.. ಲಕ್ಷ ಹಾಗೂ ಸಾವಿರ ರೂಪಾಯಿಗಳಲ್ಲಿಯೇ ಸಂಭಾವನೆಯು ನಿಗಧಿಯಾಗುತ್ತಿತ್ತು. ಅದರಲ್ಲಿಯೂ ದೊಡ್ಡ ಮಟ್ಟಿಗೆ ಹಣ ಹಾಕಿ ಸಿನೆಮಾ ಮಾಡುವುದು ಕೂಡ ಕಷ್ಟಕರ. ಆದರೆ ನಟ, ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಸಿನೆಮಾರಂಗದಲ್ಲಿ ಗುರುತಿಸಿಕೊಂಡಿದ್ದ ದ್ವಾರಕೀಶ್ ಅವರು ಅನೇಕ ಸಿನೆಮಾಗಳಿಗೆ ಬಂಡವಾಳ ಹಾಕಿ ಕೈ ಸುಟ್ಟು ಕೊಂಡ ಪ್ರಮಯವೇ ಹೆಚ್ಚು.
80 ವರ್ಷ ತುಂಬಿರುವ ಹೊತ್ತಿನಲ್ಲಿ ದ್ವಾರಕೀಶ್ ಅವರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಳೆದ ಆಗಸ್ಟ್ 27 ರಂದು ಆಯೋಜಿಸತ್ತು. ಈ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ್ದು, ತದನಂತರದಲ್ಲಿ ಮಾತನಾಡಿದ ನಟ ದ್ವಾರಕೀಶ್, 20ವರ್ಷಕ್ಕೆ ಚಿತ್ರರಂಗಕ್ಕೆ ಬಂದೆ. ಅಲ್ಲಿಂದ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. 54 ಚಿತ್ರಗಳನ್ನು ನಿರ್ಮಾಣ ಮಾಡಿದ್ದೇನೆ. ನಾನು ಸಿನೆಮಾ ಆಸೆಗಳ ಹಿಂದೆ ಹೋದೆ. ಅದಕ್ಕಾಗಿ ನಾನು ಗಳಿಸಿ, ಕಟ್ಟಿಸಿದ ಮನೆಗಳನ್ನು ಮಾರಿಕೊಂಡೆ ನಿಜ.
ಆದರೆ, ಮಾರಕ್ಕೆ ಆಗದ ಮನೆಯನ್ನು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಕಟ್ಟಿದ್ದೇನೆ. ಅದುನನ್ನ ನಿಜವಾದ ಮನೆ. ಇದೆಲ್ಲ ಕ್ಷಣಿಕ ಮಾತ್ರ. ಇನ್ನೂ ಕಳೆದುಕೊಳ್ಳುದಕ್ಕೆ ಆಗದೆ ಇರುವ ಆಸ್ತಿ ಎಂದರೆ ನಾನು ಸತ್ತ ಮೇಲೆ ನನ್ನ ನೋಡಲು ಬರುವ ಕಲಾವಿದರು, ತಂತ್ರಜ್ಞರು ಮತ್ತು ಜನರು ಪ್ರೀತಿ. ಇದು ನನ್ನಿಂದ ಯಾವತ್ತೂ ದೂರ ಆಗಲ್ಲ. ದೊಡ್ಡ ಬಂಗಲೆಗಳು, ಹಣಕ್ಕಿಂತ ನಿಮ್ಮ ಪ್ರೀತಿ ಇದ್ದರೆ ಸಾಕು, ಎಂದು ದ್ವಾರಕೀಶ್ ಹೇಳಿದರು. ಈ ಮಾಹಿತಿ ಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.