ಸ್ಯಾಂಡಲ್ವುಡ್ ನ ಭಾಷಾ ಕಿಚ್ಚ ಸುದೀಪ್ ಯಾರೇ ಕಷ್ಟ ಕಾಲದಲ್ಲಿರಲಿ ಅವರ ಸಂಕಷ್ಟ ಅರಿತು ನಟ ಕಿಚ್ಚ ಸುದೀಪ್ ಸಹಾಯ ಮಾಡದೇ ಇರಲಾರರು ಕಷ್ಟ ಅಂತ ಬಂದವರಿಗೆ ಹಲವಾರು ಜನರಿಗೆ ತಮ್ಮ ಕೈಲಾದಷ್ಟು ಸಹಾಯವನ್ನು ಇಂದಿಗೂ ಮಾಡುತ್ತಾ ಬಂದಿದ್ದಾರೆ. ನಟ ಸುದೀಪ್ ತಮ್ಮ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮೂಲಕ ಶಿವಮೊಗ್ಗದ ಬಿ. ಹೆಚ್ ರಸ್ತೆಯಲ್ಲಿರುವ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡಿದ್ದಾರೆ. ಸುದೀಪ್ ಅವರ ಈ ದತ್ತು ಕಾರ್ಯಕ್ಕೆ ಕ್ಷೇತ್ರದ ಶಿಕ್ಷಣಾಧಿಕಾರಿಗಳು ಅಧಿಕೃತವಾಗಿ ಒಪ್ಪಿಗೆ ಕೊಟ್ಟಿದ್ದಾರೆ.
ಈ ಸರ್ಕಾರಿ ಶಾಲೆ 133 ವರ್ಷಗಳ ಹಳೆಯ ಕಟ್ಟಡ ಹೊಂದಿರುವ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಕಿಚ್ಚ ತಮ್ಮ ಸಮಾಜ ಸೇವಾ ಕಾರ್ಯವನ್ನು ಮುಂದುರಾರಿಸಿದ್ದಾರೆ. ಕಾರೋನ ಸಮಯದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದು ಸುದೀಪ್ ಇದೀಗ ಮಹತ್ವದ ಕಾರ್ಯವೊಂದಕ್ಕೆ ಕೈ ಜೋಡಿಸಿದ್ದಾರೆ. ಅದೇ ರೀತಿ ಮೂರು ವರ್ಷದ ಹಿಂದೆ ಕಿಚ್ಚ ಸುದೀಪ್ ತಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡಿದ್ದಾರೆ. ರಾಜ್ಯದ ಹಲವು ಮುಖಂಡರುಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಶಾಲೆಯನ್ನು ಅಭಿವೃದ್ಧಿ ಕಾರ್ಯವನ್ನು ಮಾಡುತ್ತಿದ್ದಾರೆ.
ಇದರಲ್ಲಿ ಸುದೀಪ್ ಕಿಚ್ಚ ಸುದೀಪ್ ಕೂಡ ಒಬ್ಬರು. ನಟ ಸುದೀಪ್ ಒಟ್ಟು ಎಂಟು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದು, ಅವುಗಳ ಮೂಲಸೌಕರ್ಯ ಅಭಿವೃದ್ಧಿ, ಗುಣಮಟ್ಟ ಸುಧಾರಣೆಗೆ ಕಿಚ್ಚ ಸುದೀಪ್ ನೆರವು ನೀಡಲಿದ್ದಾರೆ. ಸೆಂಟ್ ಜೋಸೆಫ್ ಮಹಾವಿದ್ಯಾಲಯ 18 ಶಾಲೆಗಳು, ರಾಜೀವ್ ಗಾಂಧಿ ವಿವಿ 10 ಶಾಲೆಗಳು ಹೀಗೆ ಇನ್ನೂ ಹಲವು ವಿವಿಗಳು, ಖಾಸಗಿ ಸಂಸ್ಥೆಗಳು ದತ್ತು ಪಡೆದಿದ್ದಾರೆ. ಸರ್ಕಾರವೂ ಸಹ ವಿವಿಧ ಖಾಸಗಿ ಕಂಪನಿಗಳಿಗೆ ಶಾಲೆಗಗಳನ್ನು ದತ್ತು ಪಡೆಯುವಂತೆ ಮನವಿ ಮಡಿದೆ.
ರಾಜ್ಯದಲ್ಲಿ 45 ಸಾವಿರ ಸರ್ಕಾರಿ ಶಾಲೆಗಿದ್ದು, ಅವುಗಳಲ್ಲಿ 20ಸಾವಿರ ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕಾರ ಮಾಡಿಸುವ ಗುರಿಯನ್ನು ಹೊಂದಲಾಗಿದೆ. ಶಾಲೆಗಳಿಗೆ ಹೈಟೆಕ್ ಸೌಚಾಲಯ, ಗ್ರಂಥಾಲಯ, ಹೈಟೆಕ್ ತರಗತಿಗಳು ಇನ್ನೂ ಹಲವು ಸೌಲಭ್ಯಗಳನ್ನು ದತ್ತು ಪಡೆದವರು ಶಾಲೆಗಳಿಗೆ ಒದಗಿಸಲಿದ್ದಾರೆ. ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಾಲ್ಕು ಸರ್ಕಾರಿ ಶಾಲೆ ದತ್ತು. ಶಾಲೆಯ ಅಭಿವೃದ್ಧಿಯತ್ತ ಚಿತ್ತ ಹರಿಸಿರುವ ಕಿಚ್ಚ ಸುದೀಪ್ ಮಕ್ಕಳ ಕಲಿಕೆಗಾಗಿ ಕಂಪ್ಯೂಟರ್ ಹೀಗೆ ಕೆಲವು ಅಗತ್ಯ ವಸ್ತುಗಳನ್ನು ದಾನ ಮಡಿದ್ದಾರೆ..
ಅಷ್ಟು ಮಾತ್ರವಲ್ಲದೆ ಶಾಲೆಯ ಕಟ್ಟದ ನಿರ್ಮಾಣ ಕೆಲಸ, ಪೈಟಿಂಗ್, ಶೌಚಾಲಯ ನಿರ್ಮಾಣ ಹೀಗೆ ಶಾಲೆಗೆ ಬೇಕಾದ ಮೂಲ ಸೌಕರ್ಯವನ್ನು ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಒದಗಿಸಿಕೊಟ್ಟಿದೆ. ಇವರ ಸಮಾಜ ಮುಖಿ ಕಾರ್ಯಕ್ಕೆ ಎಲ್ಲೆಡೆ ಸಾಕಷ್ಟು ಅಭಿಮಾನಿಗಳಿದ್ದು ಅದರಂತೆ ಚಿತ್ರದುರ್ಗದ ಬಗ್ನಾಡು ಪ್ರದೇಶದಲ್ಲಿ ಎಲ್ಲರೂ ಇವರ ಅಭಿಮಾನಿಗಳೆಂದರೂ ತಪ್ಪಾಗಲಾರದ.
ಸುಮಾರು ಮೂರು ವರ್ಷದ ಹಿಂದೆ ಕಿಚ್ಚ ಸುದೀಪ್ ಅವರು ಇಲ್ಲಿನ ಸರಕಾರಿ ಶಾಲೆಯ ಅಭಿವೃದ್ಧಿಗೆ ಸಹಾಯ ಮಾಡಿದ್ದು ಈಗ ಅದು ಸಂಪೂರ್ಣ ನಾವಿಕೃತ ವಾಗಿದ್ದು ಅಲ್ಲಿಯ ದಿನನಿತ್ಯ ಕಿಚ್ಚ ಸುದೀಪ್ ಅವರನ್ನು ನೆನೆಯುತ್ತಾರೆ. ಈಗ ಆ ಶಾಲೆ ಹೇಗಿರಬಹುದೆಂಬ ಕುರಿತು ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈ’ರಲ್ ಆಗಿದೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.