ದುನಿಯಾ ಸಿನೆಮಾ ಖ್ಯಾತಿಯ ನಟಿ ಶುಭ ಪೂಂಜಾ ರವರು ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮತ್ತಷ್ಟು ಅಭಿಮಾನಿಗಳಿಗೆ ಹತ್ತಿರ ಆಗಿದ್ದು ಶುಭಾ ಈಗಾಗಲೇ ಸಂತಸದ ಸಿಹಿ ಸುದ್ದಿ ಕೊಟ್ಟಿದ್ದಾರೆ. ಹೌದು ಶುಭ ಪೂಂಜಾ ಅವರು ಫೆಬ್ರವರಿ ನಲ್ಲಿ ವಿವಾಹವಾಗಿದ್ದು ಈ ಹಿಂದೆ ತಮ್ಮ ಪ್ರಿಯತಮನ ಬಗ್ಗೆ ಶುಭ ಪೂಂಜಾ ಹಲವು ಬಾರಿ ಹೇಳಿಕೊಂಡಿದ್ದರು.
ಹೌದು ಚಿನ್ನಿ ಬಾಂಬ್ ಎಂದು ತಮ್ಮ ಪತಿಯನ್ನು ಶುಭಾ ಪ್ರೀತಿಯಿಂದ ಕರೆಯುತ್ತಿದ್ದು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇರುವಾಗಲೇ ಅವರ ಹೆಸರನ್ನು ಶುಭ ಪೂಂಜಾ ರವರು ಪದೇ ಪದೇ ನೆನಪು ಮಾಡಿಕೊಂಡಿರೋದು ತಾವು ನೋಡಿರುತ್ತೀರಿ. ಹೌದು ಶುಭಾ ಮದುವೆ ಆಗುವ ಹುಡುಗನ ಬಗ್ಗೆ ಮೊದಲೇ ಹೇಳಿ ಕೊಂಡಿದ್ದು ಸದ್ಯ ಈಗಾಗಲೇ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಶುಭ ಪೂಂಜಾ ಬಹಳಾನೇ ಸರಳವಾಗಿ ಮದುವೆಯಾಗಿದ್ದು ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ನಡೆದಿದೆ. ಈ ವಿಚಾರವನ್ನು ಶುಭ ಪೂಂಜಾ ಮದುವೆ ಫೋಟೊಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದರು.
ಮದುವೆಯಾದ ಬಳಿಕ ಶುಭ ಪೂಂಜಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕವಾಗಿ ಈ ಕುರಿತು ಹಂಚಿಕೊಂಡಿದ್ದು ಪ್ರೀತಿಯ ಎಲ್ಲರಿಗೂ ನಮಸ್ಕಾರಗಳು. ಇಂದು ನಾನು ಹಾಗೂ ಸುಮಂತ್ ಮಹಾಬಲ ಗುರು ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟು ಬೀಡುವಿನಲ್ಲಿ ಸರಳ ವಿವಾಹವಾದೆವು. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ ಎಂದು ಪೋಸ್ಟ್‌ನಲ್ಲಿ ಶುಭಾ ಬರೆದು ಕೊಂಡಿದ್ದರು.
ಸಾಮಾನ್ಯವಾಗಿ ಸಿನಿಮಾ ತಾರೆಯರ ವಿವಾಹ ಅಂದರೆ ಅಲ್ಲಿ ಅದ್ದೂರಿತನ ಇರುತ್ತದೆ. ಆದರೆ ಶುಭ ಪೂಂಜಾ ರವರು ಮಾತ್ರ ಸುಮಂತ್ ಮಹಾಬಲ ಅವರೊಂದಿಗೆ ಸರಳವಾಗಿ ಮದುವೆಯಾಗಿದ್ದು ಯಾಕೆ ಶುಭ ಪೂಂಜಾ ಸರಳವಾಗಿ ಊರಿನಲ್ಲಿ ಮದುವೆ ಯಾದರು ಎಂಬ ಪ್ರಶ್ನೆಗೆ ಇದು ನನ್ನ ಊರು ಇದು ಅಜ್ಜಿ ಮನೆ ನಾನು ಹುಟ್ಟಿ ಬೆಳೆದ ಮನೆಯಲ್ಲಿಯೇ ಮದುವೆ ಆಗಬೇಕು ಎನ್ನುವ ಆಸೆ ಇತ್ತ. ಹಾಗಾಗಿ ಇಲ್ಲೇ ಮದುವೆ ಆಗಿದ್ದೇವೆ ಎಂದಿದ್ದಾರೆ. ಇನ್ನು ಕುಟುಂಬಸ್ಥರು ಗುರು ಹಿರಿಯರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ತಮ್ಮ ಊರು ಮಜಲಬೆಟ್ಟು ಬೀಡುವಿನಲ್ಲಿ ಸುಮಂತ್ ಮತ್ತು ಶುಭ ಪೂಂಜಾ ವೈವಾಹಿಕ ಬಾಳಿಗೆ ಕಾಲಿಟ್ಟಿದ್ದಾರೆ.
ಇನ್ನು ಶುಭ ಪೂಂಜಾ ಮತ್ತು ಸುಮಂತ್ ಮಹಾಬಲ ಅವರು ಎರಡು ವರ್ಷಗಳಿಂದ ಪ್ರೀತಿಯಲ್ಲಿ ಇದ್ದು ಮನೆಯವರ ಒಪ್ಪಿಯ ಮೇರೆಗೆ ದಾಂಪತ್ಯ ಜೀವನಕ್ಕೆ ಶುಭಾ ಸುಮಂತ್ ಕಾಲಿಟ್ಟಿದ್ದಾರೆ. ಸುಮಂತ್ ಅವರನ್ನು ಶುಭ ಪೂಂಜಾ ಪ್ರೀತಿಯಿಂದ ಚಿನ್ನಿ ಬಾಂಬ್ ಎಂದು ಕರೆಯುತ್ತಿದ್ದು ಇನ್ನು ಸುಮಂತ್ ಒಬ್ಬ ಉದ್ಯಮಿ ಆಗಿದ್ದು ಶುಭ ಪೂಂಜಾ ಜೊತೆಗೆ ಆಗಾಗ ಕಾಣಿಸಿಕೊಳ್ಳುತ್ತಾ ಇದ್ದರು. ಇನ್ನು ನಟಿ ಶುಭ ಪೂಂಜಾ ಮದುವೆ ಬಳಿಕ ಚಿತ್ರ ರಂಗದಲ್ಲಿ ಸಕ್ರಿಯವಾಗಿ ಇರಲಿದ್ದು ಸದ್ಯ ಅವರು ಅಭಿನಯದ ‘ತ್ರಿದೇವಿ’ ‘ಅಂಬುಜ’ ಚಿತ್ರಗಳು ಸದ್ದು ಮಾಡುತ್ತಿವೆ.ಇದರ ಜೊತೆಗೆ ರೈಮ್ಸ್ ಚಿತ್ರದಲ್ಲೂ ಶುಭಾ ಪೂಂಜಾ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಇನ್ನು ಮದುವೆ ಬಳಿಕ ಹೆಚ್ಚು ಸಮಯ ತೆಗೆದುಕೊಳ್ಳದೆ ಶೂಟಿಂಗ್‌ಗೆ ಮರಳಿದ್ದು ಮದುವೆ ಆದ ಒಂದೇ ವಾರಕ್ಕೆ ನಟಿ ಶುಭ ಪೂಂಜಾ ಚಿತ್ರೀಕರಣಕ್ಕೆ ಮರಳಿದ್ದರು ಹಾಗು ಶೂಟಿಂಗ್‌ನಲ್ಲಿ ಭಾಗಿ ಆಗಿದ್ದರು. ಶುಭ ಪೂಂಜಾ ಸದ್ಯ ‘ಅಂಬುಜಾ’ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಶೂಟಿಂಗ್ ಸೆಟ್‌ನಲ್ಲಿ ಇರುವ ಫೋಟೊವನ್ನು ಶುಭ ಪೂಂಜಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಶೂಟಿಂಗ್‌ಗೆ ಮರಳಿದ್ದೇನೆ ಎಂದು ಬರೆದು ಕೊಂಡಿದ್ದಾರೆ. ಈ ಚಿತ್ರದಲ್ಲಿ ಶುಭಾ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.ಇನ್ನು ಶುಭ ಮತ್ತು ಸುಮಂತ್ ಮಹಾಬಲ ಅವರು ಎರಡು ವರ್ಷಗಳಿಂದ ಪ್ರೀತಿಯಲ್ಲಿ ಇದ್ದು ಮನೆಯವರ ಒಪ್ಪಿಯ ಮೇರೆಗೆ ಈ ವೈವಾಹಿಕ ಜೀವಾನಕ್ಕೆ ಶುಭಾ ಸುಮಂತ್ ಕಾಲಿಟ್ಟಿದ್ದಾರೆ. ಇನ್ನು ಮದುವೆ ಆದ ಬಳಿಕ ಇಬ್ಬರೂ ಬ್ಯುಸಿ ಆಗಿದ್ದಾರಂತೆ. ಈ ಕಾರಣದಿಂದಾಗಿ ಹನಿಮೂನ್ ಗೂ ಕೂಡ ಹೋಗಿಲ್ವಂತೆ. ಹೌದು ಚಿನ್ನಿ ಬಾಂಬ್ ನನ್ನನ್ನು ಇನ್ನೂ ಹನಿಮೂನ್ಗೆ ಕರೆದುಕೊಂಡು ಹೋಗಿಲ್ಲ ಎಂದು ಶುಭ ಪೂಂಜಾ ದೂರಿದ್ದು ಸದ್ಯ ಈ ಸಂದರ್ಶನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.