ಕನ್ನಡ ಸಿನೆಮಾರಂಗದಲ್ಲಿ ತಮ್ಮ ಅಭಿನಯ ಮೂಲಕ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ಹೃದಯವಂತ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರು ಇಂದು ನಮ್ಮೊಂದಿಗಿದ್ದಾರೆ ತಮ್ಮ 72ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಹಾಗೂ ಕುಟುಂಬಸ್ಥರ ಜೊತೆ ಆಚರಿಸಿಕೊಳ್ಳುತ್ತಿದ್ದರು. ಆದರೆ ಅವರು ನಮ್ಮನ್ನು ಅಗಲಿ 13 ವರ್ಷಗಳಾಗಿವೆ. ಕನ್ನಡದ ಕೋಟಿಗೊಬ್ಬನ ಹುಟ್ಟುಹಬ್ಬವನ್ನು ಅಭಿಮಾನಿಗಳು ಇಂದು ವಿಭಿನ್ನವಾಗಿ ತುಂಬಾ ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ.
ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೇ ನಡೆದಿತ್ತು. ಈ ಕಾರಣಕ್ಕೆ ಈ ಸ್ಟುಡಿಯೋದ ಹೊರಭಾಗದಲ್ಲಿ ವಿಷ್ಣು ಅವರ ಕಟೌಟ್ ಗಳನ್ನು ಹಾಕಲಾಗಿದೆ. ಈ ಮೂಲಕ ಸಾಹಸಸಿಂಹನನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದ್ದರು. ಹುಟ್ಟುಹಬ್ಬದ ವಿಶೇಷದ ಅಂಗವಾಗಿ ಅಭಿಮಾನಿಗಳು ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ. ಬಹಳ ಸಂತೋಷದಲ್ಲೇ ವಿಷ್ಣುವರ್ಧನ್ ಅವರ ಅಭಿಮಾನಿಗಳು ಹುಟ್ಟುಹಬ್ಬದ ದಿನದಂದು ವಿವಿಧ ಕಾರ್ಯಕ್ರಮಗಳನ್ನು ಆಚರಿಸುವ ಮೂಲಕ ವಿಷ್ಣು ಅವರನ್ನು ಆರಾಧಿಸಿದ್ದಾರೆ.
ವಿಷ್ಣುವರ್ಧನ್ ಅವರು ತಮ್ಮದೇ ಅಭಿನಯದ ಶೈಲಿಯ ಮೂಲಕ ಎಲ್ಲರ ಹೃದಯದದಲ್ಲೂ ಮನೆ ಮಾಡಿದ್ದಾರೆ. ಎಲ್ಲಾ ತರಹದ ಪಾತ್ರಗಳಲ್ಲೂ ಸೈ ಎನಿಸಿಕೊಂಡು ಅಭಿಮಾನಿಗಳ ಪಾಲಿನ ಪ್ರೀತಿಯ ಹೀರೊ ಎನಿಸಿಕೊಂಡಿದ್ದಾರೆ. ಕನ್ನಡ ಸೇರಿ ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲೂ ನಟಿಸಿ ಜನಪ್ರಿಯತೆ ಗಳಿಸಿರುವ ಹೆಮ್ಮೆಯ ಕನ್ನಡಿಗ, ಕನ್ನಡದ ಕೋಟಿಗೊಬ್ಬ ನಮ್ಮ ಮೈಸೂರಿನ ವಿಷ್ಣು. ತಮ್ಮ 59ನೇ ವಯಸ್ಸಿನಲ್ಲಿ ಅಂದ್ರೆ ಡಿಸೇಂಬರ್ 30,2009 ರಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಬಿಟ್ಟು ಅಗಲಿದರು. ಆದರೆ ಇವತ್ತಿಗೂ ಅಭಿಮಾನಿಗಳು ಅವರನ್ನು ದೇವರಂತೆ ಪೂಜಿಸುತ್ತಿದ್ದಾರೆ.
ನಿನ್ನೆ ಡಾ. ವಿಷ್ಣುವರ್ಧನ್ ಅವರ ಜನ್ಮದಿನ, ಡಿಸೇಂಬರ್ 29ಕ್ಕೆ ವಿಷ್ಣು ದಾದಾ ಚಿತ್ರರಂಗಕ್ಕೆ ಬಂದು 50ವರ್ಷಗಳು ಪೂರೈಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನ್ ಸ್ಟುಡಿಯೋದಲ್ಲಿರುವ ಸಾಹಸಸಿಂಹ ಸಮಾಧಿ ಬಳಿ ಅವರ ಪ್ರಮುಖ ಸಿನಿಗಳ 40 ಅಡಿ ಎತ್ತರದ 50 ಕಟೌಟ್ ಗಳು ರಾರಾಜಿಸುತ್ತಿವೆ. ಒಂದೇ ಜಾಗದಲ್ಲಿ 40ಅಡಿ ಕಟೌಟ್ ಗಳನ್ನು ಹಾಕಿರೋದು ಇದೇ ಮೊದಲ ಬಾರಿ ಇದೇ ದಾಖಲೆ ಎನ್ನಬಹುದು. ಭಾರತೀಯ ಚಿತ್ರರಂಗದಲ್ಲಿ ಹುಟ್ಟುಹಬ್ಬಕ್ಕೆ 50 ಕಟೌಟ್ ಕಹಿಸಿಕೊಂಡಿರುವ ಮೊದಲ ನಟ ಅನ್ನೋ ಹೆಗ್ಗಳಿಕೆ ಸಾಹಸಸಿಂಹನಿಗೆ ಸಲ್ಲುತ್ತದೆ.
ನಿನ್ನೆ ಅಭಿಮಾನಿಗಳು ನಾನಾ ಸಾಮಾಜಿಕ ಕಾರ್ಯಗಳ ಮೂಲಕ ವಿಷ್ಣು ದಾದಾನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಪುಣ್ಯಭೂಮಿಗೆ ತೆರಳಿ ಪೂಜಿ ಸಲ್ಲಿಸಿ, ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ ಅಭಿಮಾನಿಗಳು. ಅದೇ ರೀತಿ ವಿಷ್ಣುವರ್ಧನ್ ಸಮಾಧಿಬಳಿ ಸಾವಿರಾರು ಅಭಿಮಾನಿಗಳು ಜಮಯಿಸಿ ನೂಕು ನುಗ್ಗಲಾಗಿ ನೆಚ್ಚಿನ ನಟನ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದರು. ನಟ ಸಾಹಸಸಿಂಹ ವಿಷ್ಣುವರ್ಧನ್ ಅವರ ಬಗ್ಗೆ ನಿಮಗೆ ಗೊತ್ತಿರುವ ವಿಶೇಷವಾದ ಮಾಹಿತಿಯನ್ನು ನಮ್ಮ ಜೊತೆ ಹಂಚಿಕೊಳ್ಳಿ ಧನ್ಯವಾದಗಳು.