ವಿಷ್ಣುವರ್ಧನ್ ಅವರ ಸ್ಮಾರಕ ವಿಚಾರದಲ್ಲಿ ಸುದೀಪ್ ಅವರ ಮೇಲೆ ಭಾರತೀ ವಿಷ್ಣುವರ್ಧನ್ ಕೋಪಗೊಂಡಿರುವುದು ಎಷ್ಟು ಸರಿ.? ನೀವೇ ನೋಡಿ

ನಮಸ್ತೆ ಪ್ರೀತಿಯ ವೀಕ್ಷಕರೆ ಡಿಸೇಂಬರ್ 30 ರಂದು ಸಾಹಸಸಿಂಹ ವಿಷ್ಣುವರ್ಧನ್ ಅವರ ಪುಣ್ಯ ಸ್ಮರಣೆ. ಅದಕ್ಕಾಗಿಯೇ ವಿಷ್ಣುವರ್ಧನ್ ಸ್ಮಾರಕಕ್ಕೆ ಸಂಬಂಧಪಟ್ಟ ಕೆಲಸಗಳು ಮತ್ತು ಜೀವ ಪಡೆದುಕೊಂಡಿದೆ. ಒಂದುಕಡೆ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣಕ್ಕೆ ಒತ್ತಾಯ ಮಾಡುತ್ತಿದ್ದರೆ, ಮತ್ತೊಂದೆಡೆ ಮೈಸೂರುನಲ್ಲಿ ಸ್ಮಾರಕ ನಿರ್ಮಾಣ ಮಾಡಲು ಕುಟುಂಬದವರು ಆಸೆ ಪಡುತ್ತಿದ್ದಾರೆ.

ಹೀಗಿರುವಾಗ, ಮೊನ್ನೆಯಷ್ಟೇ ನಟ ಸುದೀಪ್, ಮುಖ್ಯಮಂತ್ರಿ ಅವರನ್ನ ಭೇಟಿ ಮಾಡಿ ವಿಷ್ಣುವರ್ಧನ್ ಸ್ಮಾರಕವನ್ನ ಮೈಸೂರಿನಲ್ಲೆ ಮಾಡಿ, ಆದ್ರೆ, ಅಂತ್ಯ ಸ್ಮಾರಕವಾದ ಜಾಗವನ್ನ ಅಭಿಮಾನಿಳಿಗೆ ಬಿಟ್ಟುಕೊಡಿ ಎಂದು ಮನವಿಯನ್ನು ಮಾಡಿದ್ದಾರೆ.

ಈ ಸಂಗತಿ ಭಾರತಿ ವಿಷ್ಣುವರ್ಧನ್ ಅವರ ಕಿವಿಗೆ ಬಿದ್ದಿದ್ದು ಸುದೀಪ್ ಅವರ ಮೇಲೆ ವಿಷ್ಣುವರ್ಧನ್ ಮಡದಿ ಅಸಮಾಧಾನಗೊಂಡಿದ್ದಾರಂತೆ. ಹಾಗಿದ್ರೆ ಕಿಚ್ಚನ ಈ ನಡೆ ಬಗ್ಗೆ ಭಾರತಿ ಅವರು ಏನಂದ್ರು? ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಸುದೀಪ್ ಅವರು ಮುಖ್ಯಮಂತ್ರಿ ಅವರನ್ನ ಭೇಟಿ ಮಾಡಿರುವುದು ನನಗೆ ಗೊತ್ತಿಲ್ಲ. ಆದ್ರೆ ಮುಖ್ಯಮಂತ್ರಿ ಅವರು ನನಗೆ ಭರವಸೆ ನೀಡಿದ್ದಾರೆ. ಸದ್ಯಕ್ಕೆ ನಿಂತಿರುವ ಕೆಲಸ ಆದಷ್ಟು ಬೇಗ ಪ್ರಾರಂಭಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸಿಎಂ ಕೂಡ ಬೇಗ ಮಾಡೋಣ ಅಂದಿದ್ದಾರೆ ಎಂದು ಭಾರತಿ ವಿಷ್ಣುವರ್ಧನ್ ಅವರು ಹೇಳಿದ್ದರೆ.

ಸುದೀಪ್ ಅವರು ಮುಖ್ಯಮಂತ್ರಿ ಅವರನ್ನ ಭೇಟಿ ಮಾಡಿರುವುದು ನನಗೆ ಗೊತ್ತಿಲ್ಲ. ಆದ್ರೆ, ಮುಖ್ಯಮಂತ್ರಿ ಅವರು ನಮಗೆ ಭರವಸೆ ನೀಡಿದ್ದಾರೆ. ಸದ್ಯಕ್ಕೆ ನಿಂತಿರುವ ಕೆಲಸ ಆದಷ್ಟು ಬೇಗ ಆರಂಭಿಸಿ ಎಂದು ಮನವಿ ಮಾಡಿಕೊಂಡಿದ್ದೇವೆ. ಸಿಎಂ ಕೂಡ ಬೇಗ ಮಾಡೋಣ ಅಂದಿದ್ದಾರೆ ಎಂದು ಭಾರತಿ ವಿಷ್ಣುವರ್ಧನ್ ಅವರು ತಿಳಿಸಿದ್ದಾರೆ.

ಇದು ಹಣದ ಸಮಸ್ಯೆ ಅಲ್ಲ. ಸುದೀಪ್ ಅವರು ವಾಸ್ತವ ಅರಿತುಕೊಳ್ಳಬೇಕು. ಹಣದ ಸಮಸ್ಯೆಯಿದ್ದರೆ ಕುಟುಂಬವೇ ಭರಿಸುತ್ತಿತ್ತು. ಸ್ಮಾರಕದ ಸಮಸ್ಯೆ ಬಗ್ಗೆ ಅವರಿಗೆ ಗೊತ್ತಿಲ್ಲ. ಸುದೀಪ್ ಅವರು ನನ್ನ ಬಳಿ ಯಾವುದೇ ಚರ್ಚೆ ಕೂಡ ಮಾಡಿಲ್ಲ ” ಎಂದು ಭಾರತಿ ಅವರು ಪತ್ರಕರ್ತರ ಬಳಿ ಹೇಳಿಕೊಂಡಿದ್ದಾರೆ.

ಇನ್ನು ಮುಖ್ಯಮಂತ್ರಿ ಅವರ ಕಾವೇರಿ ನಿವಾಸದಲ್ಲಿ ಸಿಎಂ ಅವರನ್ನು ಭೇಟಿ ಮಾಡಿದ ಸುದೀಪ್, “ವಿಷ್ಣುವರ್ಧನ್ ಸಮಾಧಿ ಇರುವ ಸ್ಥಳವನ್ನ ವಿಷ್ಣು ಪುಣ್ಯ ಭೂಮಿ ಎಂದು ಘೋಷಿಸಿ, ಸ್ಮಾರಕ ಬೇಕಾದರೇ ಮೈಸೂರಿನಲ್ಲೆ ಅಗಲಿ ” ಎಂದು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಕಿಚ್ಚ ಸುದೀಪ್ ಅವರು, ಮುಖ್ಯಮಂತ್ರಿ ಅವರನ್ನ ಭೇಟಿ ಮಾಡಿ ವಿಷ್ಣು ಸ್ಮಾರಕದ ಬಗ್ಗೆ ಮನವಿ ಮಾಡಿರುವ ಬಗ್ಗೆ ವಿಷ್ಣು ಅಭಿಮಾನಿಗಳು ಮೆಚ್ಚಿಕೊಂಡು ಸ್ವಾಗತಿಸಿದ್ದಾರೆ. ಆದ್ರೆ, ವಿಷ್ಣುವರ್ಧನ್ ಅವರ ಕುಟುಂಬದವರು ಮಾತ್ರ ಸುದೀಪ್ ಮೇಲೆ ಅಸಮಾಧಾನಗೊಂಡಂತೆ ಕಾಣುತ್ತಿದೆ. ಅದೇನೇ ಇರಲಿ, ವಿಷ್ಣುವರ್ಧನ್ ಸ್ಮಾರಕ ಆದಷ್ಟು ಬೇಗ ನಿರ್ಮಾಣವಾಗಲಿ ಎನ್ನುವುದು ಅವರ ಲಕ್ಷಾಂತರ ಅಭಿಮಾನಿಗಳ ಆಸೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *