ವಿದ್ಯಾರ್ಥಿನಿಯನ್ನೇ ಕ್ಯಾಚ್ ಹಾಕಿ ವಿವಾಹವಾದ ಶಿಕ್ಷಕ. ವೈರಲ್ ಆಯ್ತು ವಿಡಿಯೋ..ವಧು ವರರ ವಯಸ್ಸಿನ ಅಂತರ ತಿಳಿದರೆ ‘ಅಯ್ಯೋ’ ಅಂತೀರಾ…

ವಿದ್ಯಾರ್ಥಿನಿಯನ್ನೇ ವಿವಾಹವಾದ ಶಿಕ್ಷಕ…ವೈರಲ್ ಆಯ್ತು ವಿಡಿಯೋ..ವಧು ವರರ ವಯಸ್ಸಿನ ಅಂತರ ತಿಳಿದರೆ ‘ಅಯ್ಯೋ’ ಅಂತೀರಾ..  ಜಾತಿ, ಧರ್ಮ, ವಯಸ್ಸು ಎಲ್ಲವನ್ನು ಹೇಳಿಕೇಳಿ ಮಾಡಿಕೊಂಡು ಆಗುವುದಲ್ಲ ಪ್ರೀತಿ; ಪ್ರೀತಿ ಕುರುಡು. ವಯಸ್ಸಿನ ಅಂತರವಿಲ್ಲದೆ ಹುಟ್ಟಿ ಹೆಮ್ಮರವಾಗುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಪಾಟ್ನಾದಲ್ಲಿ 20 ವರ್ಷದ ಹದಿಹರೆಯದ ವಿದ್ಯಾರ್ಥಿನಿಯನ್ನು, ಆಕೆಯದೆ ಕಾಲೇಜಿನ ಶಿಕ್ಷಕರೊಬ್ಬರು ವಿವಾಹವಾಗಿದ್ದಾರೆ. ಇವರಿಬ್ಬರ ವಿವಾಹದ ವಿಡಿಯೋ ವೈರಲ್ ಆಗಿದೆ.

20ರ ಆಸುಪಾಸಿನ ವಯಸ್ಸಿನಲ್ಲಿ ಯುವಕ ಯುವತಿಯರಿಗೆ ಆಕರ್ಷಣೆಯಾಗುವುದು ಸಹಜ. ವಿದ್ಯಾರ್ಥಿನಿಯೊಬ್ಬಳಿಗೆ ತನ್ನ ಇಂಗ್ಲೀಷ್ ಶಿಕ್ಷಕನ ಮೇಲೆ ಆಕರ್ಷಣೆಯಾಗಿ, ಪ್ರೀತಿಯಾಗಿ, ಆತನು ಒಪ್ಪಿ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿರುವುದು ಅಚ್ಚರಿ ತಂದಿದೆ.

Bihar sangeet kumar marraige
Bihar sangeet kumar marraige

 

ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ಶಿಕ್ಷಕರಾಗಿರುವ ಸಂಗೀತ್ ಕುಮಾರ್ ಅವರು ಕಾಲೇಜ್ ವಿದ್ಯಾರ್ಥಿಗಳಿಗಾಗಿ ಇಂಗ್ಲೀಷ್ ಭಾಷೆಯ ಟ್ಯೂಷನ್ ಕ್ಲಾಸ್ ಗಳನ್ನು ನೀಡುತ್ತಾರೆ. ಇಂಗ್ಲೀಷ್ ಭಾಷೆಯನ್ನು ಕಲಿಯಲು ಬರುವ ಅನೇಕ ವಿದ್ಯಾರ್ಥಿಗಳಲ್ಲಿ ಶ್ವೇತಕುಮಾರಿಯು ಕೂಡ ಒಬ್ಬಳು. ಸಂಗೀತ್ ಕುಮಾರ್ ಅವರು ಇಂಗ್ಲೀಷ್ ಭಾಷೆಯನ್ನು ಹೇಳಿಕೊಡುವ ಪರಿಗೆ ಬೆರಗಾಗಿ ಆಕರ್ಷಣೆಯಾಯಿತಂತೆ. ಅವರೊಂದಿಗೆ ಮಾತನಾಡಬೇಕು, ಕಾಲ ಕಳೆಯಬೇಕು ಎಂದೆನಿಸಿದಾಗಲೆಲ್ಲ ಹೆಚ್ಚೆಚ್ಚು doubtsಗಳನ್ನು ಕೇಳುತ್ತಾ ಸಂಗೀತ್ ಕುಮಾರ್ ಅವರೊಂದಿಗೆ ಸಲುಗೆಯೂ ಬೆಳೆಯಿತಂತೆ. ನಂತರದಲ್ಲಿ ಇದೇ ಸಲುಗೆಯು ಪ್ರೀತಿಯಾಗಿ ಬೆಳೆದು ಶ್ವೇತಾ ಕುಮಾರಿಯು ತನ್ನ ಪ್ರೇಮವನ್ನು ಶಿಕ್ಷಕರಲ್ಲಿ ಹೇಳಿಕೊಂಡಳಂತೆ. ಸಂಗೀತ್ ಕುಮಾರ್ ಅವರಿಗೂ ಶ್ವೇತಾ ಕುಮಾರಿಯ ಗುಣಗಳು ಹಿಡಿಸಿ ಪ್ರೀತಿಯನ್ನು ಒಪ್ಪಿದರಂತೆ. ನಂತರ ಮದುವೆಯಾಗಲು ನಿರ್ಧರಿಸಿ ಕುಟುಂಬಸ್ಥರ ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸಂಗೀತ್ ಕುಮಾರ್ ಅವರಿಗೆ ಇದೇ ಮೊದಲ ವಿವಾಹವಲ್ಲ. ಸಂಗೀತ್ ಕುಮಾರ್ ಅವರ ಮೊದಲ ಪತ್ನಿಯೂ ಕೆಲವು ವರ್ಷಗಳ ಹಿಂದೆಯೇ ತೀರಿಹೋಗಿದ್ದಾರೆ ಎಂದು ಕೆಲವು ಮೂಲಗಳು ತಿಳಿಸಿವೆಯಂತೆ. ಇನ್ನು ಶ್ವೇತಕುಮಾರಿಯನ್ನು ವಿವಾಹವಾದ ಸಾಕ್ಷಿಯಾಗಿ ನ್ಯಾಯಾಲಯದಿಂದ ಪ್ರಮಾಣ ಪತ್ರವನ್ನು ಕೂಡ ಪಡೆದಿದ್ದಾರಂತೆ.

20ರ ವಯಸ್ಸಿನ ಶ್ವೇತ 42 ವರ್ಷದ ಶಿಕ್ಷಕರನ್ನು, 22 ವರ್ಷಗಳ ಅಂತರವಿದ್ದರೂ ಕೂಡ ಲೆಕ್ಕಿಸದೆ ಕುಟುಂಬಸ್ಥರನ್ನು ಒಪ್ಪಿಸಿ ವಿವಾಹವಾಗಿರುವುದು ಸಕ್ಕತ್ ಸುದ್ದಿಯಾಗಿದೆ. ಗುರು ಶಿಷ್ಯರ ಸಂಬಂಧವನ್ನು ಬದಿಗೊತ್ತಿ ಇವರ ಮದುವೆ ಸಮಾರಂಭವು ನೆರವೇರಿದ್ದು, ಮದುವೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹೆಚ್ಚೆಚ್ಚು ವೀವ್ಸ್ ಹಾಗೂ ಕಾಮೆಂಟ್ಸ್ ಗಳನ್ನು ಪಡೆಯುತ್ತಿವೆ.

ನಿನ್ನ ರೇಟ್ ಎಷ್ಟು ಎಂದು ಕೇಳಿದ ಕಿಡಿಗೇಡಿ ಯುವಕನಿಗೆ, ನಿರೂಪಕಿ ಅನಸೂಯಾ ಕೊಟ್ಟ ಉತ್ತರ ನೋಡಿ ಬೆಚ್ಚಿಬಿದ್ದ ತೆಲುಗು ಚಿತ್ರರಂಗ ನೋಡಿ!!

Leave a Reply

Your email address will not be published. Required fields are marked *