ರಿಷಬ್ ಎದುರಿಗೆ ಸಪ್ತಮಿ ಡೇಟ್ ಬರ್ತೀರ ಅಂದ ಅಭಿಮಾನಿ ಗೆ ರಿಷಬ್ ಶೆಟ್ಟಿ ಕೊಟ್ಟ ವಾರ್ನಿಂಗ್ ವಿಡಿಯೋ ನೋಡಿ

ಪ್ರೀತಿಯ ವೀಕ್ಷಕರೆ ಕಾಂತಾರ ಈ ಸಿನಿಮಾ ಅಂದುಕೊಳ್ಳುವುದಕ್ಕಿಂತ ಹೆಚ್ಚಿನದೇ ಯಶಸ್ಸು ಗಳಿಸುತ್ತಿದೆ. ಹೌದು ಎಲ್ಲೆಲ್ಲಿ ನೋಡಿದರೂ ಕೂಡ ಕಾಂತಾರ ಸಿನಿಮಾದ್ದೆ ಹವಾ ಎನ್ನಬಹುದು. ಸೆಪ್ಟೆಂಬರ್ 30 ರಂದು ಬಿಡುಗಡೆಯಾದ ಈ ಆಕ್ಷನ್ ಥ್ರಿಲ್ಲರ್ ಬಾಕ್ಸ್ ಆಫೀಸ್‌ನಲ್ಲಿ ಸಖತ್‌ ಸದ್ದು ಮಾಡಿದೆ. ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಅವರ ಅದ್ಭುತವಾದ ಅಭಿನಯ ಎಲ್ಲರ ಮನಗೆದ್ದಿದೆ. ಸದ್ಯಕ್ಕೆ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಇತ್ತೀಚೆಗೆ ಕಾಂತಾರ ಸಿನಿಮಾ ಕೆಜಿಎಫ್ 2 ದಾಖಲೆಯನ್ನು ಬ್ರೇಕ್ ಮಾಡಿದೆ.

ಅಂದಹಾಗೆ, ಐಎಂಡಿಬಿಯಲ್ಲಿ ಕೆಜಿಎಫ್ 2 ಸಿನಿಮಾಗೆ 8.4, ಆರ್ ಆರ್ ಆರ್ ಸಿನಿಮಾಗೆ 8 ರೇಟಿಂಗ್ ನೀಡಲಾಗಿದ್ದು, ಕಾಂತಾರ ಸಿನಿಮಾ ಈ ರೇಟಿಂಗ್ ಅನ್ನು ಬ್ರೇಕ್ ಮಾಡುತ್ತಾ 9.6 ರೇಟಿಂಗ್ ಪಡೆದುಕೊಂಡು ಅತೀ ಹೆಚ್ಚು ರೇಟಿಂಗ್ ಪಡೆದಿರುವ ಇಂಡಿಯನ್ ಸಿನಿಮಾ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ. ಸದ್ಯ ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಿದ್ದು, ಶೀಘ್ರದಲ್ಲೇ ಮಲಯಾಳಂನಲ್ಲಿ ರಿಲೀಸ್ ಆಗಲಿದೆ. ಮೂರು ಭಾಷೆಯಲ್ಲಿ ರಿಲೀಸ್ ಆಗಿರುವ ಕಾಂತಾರ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಬರುತ್ತಿದೆ. ಅಂದಹಾಗೆ, ಈ ಕಾಂತಾರಾ ಸಿನಿಮಾವು ಅಮೆರಿಕಾದಲ್ಲಿಯೂ ಚಿತ್ರ ಕ್ರೇಜ್ ಸೃಷ್ಟಿಸಿದೆ.

ಅಮೆರಿಕಾದಲ್ಲಿ ರಂಗಿತರಂಗ ಸೃಷ್ಟಿಸಿದ್ದ ಆಲ್ ಟೈಂ ರೆಕಾರ್ಡ್’ನ್ನು ಕಾಂತಾರ ಉಡೀಸ್ ಮಾಡಿದ್ದು, 3,41,897 ಡಾಲರ್ ಗಳಿಸಿದೆ. ಅಂದಹಾಗೆ, ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಲೈವ್ ಬಂದಿದ್ದು, ಈ ವೇಳೆಯಲ್ಲಿ ಸಪ್ತಮಿ ಗೌಡರವರಿಗೆ ಅಭಿಮಾನಿಯೊಬ್ಬ ಡೇಟ್ ಬರ್ತೀರಾ ಮೇಡಂ ಎಂದಿದ್ದಾನೆ. ಈ ವೇಳೆಯಲ್ಲಿ ರಿಷಬ್ ಶೆಟ್ಟಿಯವರು, ಓಓಓ ಯಾಕಪ್ಪ ಇವರಪ್ಪ ಪೊ-ಲೀ-ಸ್, ಗುಂ-ಡು ಹಾಕಿ ಬಿಡ್ತಾರೆ ಹೇಳಿದ್ದೀನಿ ಗುಂ-ಡು ಸಜೆ ಗುಂ-ಡು ಸಜೆ ಅಂತ ಎಂದಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈ’ರಲ್ ಆಗಿದೆ.
ಇತ್ತೀಚೆಗಷ್ಟೇ ಕಾಂತಾರ ಸಿನಿಮಾ ಗೆದ್ದ ಖುಷಿಗೆ ಸಪ್ತಮಿ ಗೌಡ ಅವರು ಇನ್​ಸ್ಟಾಗ್ರಾಮ್​ನಲ್ಲಿ ಸ್ಪೆಷಲ್ ಪೋಸ್ಟ್ ಅಪ್​ಲೋಡ್ ಮಾಡಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದರು.’ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು. ಇವತ್ತು ಕಾಂತರ ಸಿನಿಮಾ ಈ ಮಟ್ಟದಲ್ಲಿ ವಿಶ್ವದಾದ್ಯಂತ ಯಶಸ್ವಿಯಾಗಿರುವುದಕ್ಕೆ ಕಾರಣ ನೀವೇ. ಕಾಂತರ ಸಿನಿಮಾವನ್ನು ಮೆಚ್ಚಿ, ಅಪ್ಪಿಕೊಂಡು ಗೆಲ್ಲಿಸುತ್ತಿರುವುದಕ್ಕೆ ಋಣಿಯಾಗಿದ್ದೇನೆ.

ನನ್ನ ಪಾತ್ರ ‘ಲೀಲಾ’ಳಿಗೆ ತೋರಿಸುತ್ತಿರುವ ನಿಮ್ಮ ಪ್ರೀತಿಯಿಂದ ಹೃದಯ ತುಂಬಿದೆ. ಈ ಪ್ರೀತಿಗೆ ನಾನು ಸದಾ ಚಿರಋಣಿ ಎಂದು ಪೋಸ್ಟ್​ನಲ್ಲಿ ಬರೆದುಕೊಂಡಿದ್ದರು. ಫಾರೆಸ್ಟ್ ಗಾರ್ಡ್ ಲೀಲಾ ಆಗಿ ಕಾಣಿಸಿಕೊಂಡಿದ್ದು ತನ್ನ ನಟನೆಯಿಂದಲೇ ಹತ್ತಿರವಾಗಿದ್ದಾರೆ. ಸಪ್ತಮಿ ಗೌಡ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಅವರ ಲೀಲಾ ಪಾತ್ರ ಸಖತ್ ಕ್ರೇಜ್ ಸೃಷ್ಟಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ನಟಿ ಸಪ್ತಮಿ ಗೌಡ ಜೂನ್ 8, 1996ರಲ್ಲಿ ಹುಟ್ಟಿದ್ದು, ಅವರ ವಯಸ್ಸು 27 ವರ್ಷ ವಯಸ್ಸು. ನಟನೆಗೆ ಬರುವುದಕ್ಕೂ ಮುನ್ನ ಇವರು ಬೆಂಗಳೂರಿನ ಬಿಐಟಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿದ್ದಾರೆ. ಅದರ ಜೊತೆಗೆ ಇವರು ನಿವೃತ್ತ ಪೊ’ಲೀಸ್ ಅಧಿಕಾರಿ ಎಸ್.ಕೆ. ಉಮೇಶ್ ಅವರ ಮುದ್ದಿನ ಮಗಳು. ಈ ಮೊದಲು ಪಾಪ್ ಕಾರ್ನ್ ಮಂಕಿ ಟೈ’ಗರ್ ಸಿನಿಮಾದಲ್ಲಿ ನಟಿಸಿದ್ದರು. ಫಿಟ್ನೆಸ್​ ಹಾಗೂ ಅಡ್ವೆಂಚರ್ಸ್ ಬಗ್ಗೆ ಅಪಾರ ಆಸಕ್ತಿಯಿದೆ. ಇನ್ನು, ನೃತ್ಯ, ಪುಸ್ತಕ ಓದುವುದು, ಟ್ರಿಪ್ ಹೀಗೆ ಸಾಕಷ್ಟು ವಿಚಾರದಲ್ಲಿ ಆಸಕ್ತಿಯಿದೆ. ಕಾಂತಾರ ಸಿನಿಮಾಕ್ಕೆ ಇನ್ಸ್ಟಾಗ್ರಾಮ್ ಮೂಲಕ ಆಯ್ಕೆಯಾದರು.

ಇನ್ಸ್ಟಾಗ್ರಾಮ್ ನಲ್ಲಿ ಸಪ್ತಮಿ ಅವರ ಫೋಟೋ ನೋಡಿ ಮೆಚ್ಚಿಕೊಂಡಿದ್ದರು ರಿಷಬ್. ಆದಾದ ಬಳಿಕ ಅವರ ಲುಕ್ ಟೆಸ್ಟ್, ಸ್ಕ್ರೀನ್ ಟೆಸ್ಟ್ ಆಗಿ ಆಯ್ಕೆ ಮಾಡಲಾಯಿತು. ಈ ಸಿನಿಮಾವು ಸದ್ಯಕ್ಕೆ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದು, ತನ್ನದೇ ಫ್ಯಾನ್ಸ್ ಬಳಗವನ್ನು ಸಪ್ತಮಿ ಗೌಡ ಸೃಷ್ಟಿಸಿಕೊಂಡಿದ್ದಾರೆ. ಕಾಂತಾರ ಸಿನಿಮಾ ಯಶಸ್ಸು ಕಾಣುತ್ತಿರುವಾಗಲೇ ಎರಡು ಸಿನಿಮಾಗಳಿಗೆ ಒಪ್ಪಿಗೆ ಕೂಡ ಕೊಟ್ಟಿದ್ದಾರೆ. ಈ ಸಿನಿಮಾದ ಬಳಿಕ ನಟಿ ಸಪ್ತಮಿ ಗೌಡರವರ ಬೇಡಿಕೆ ಹೆಚ್ಚಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನಟಿ ಸಪ್ತಮಿ ಗೌಡ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *