ಹೆಣ್ಣು ಎಂದರೆ ಅದ್ಭುತ ಸೃಷ್ಟಿ, ಈ ಸೃಷ್ಟಿಗೆ ಕಾರಣಿಕರ್ತಳು ಈ ಹೆಣ್ಣು. ಹೀಗಾಗಿ ಹೆಣ್ಣಿನಿಂದಲೇ ಸೃಷ್ಟಿ, ಹೆಣ್ಣಿನಿಂದಲೇ ಸರ್ವನಾಶ ಎನ್ನುವ ಮಾತಿದೆ. ಮಹಾಭಾರತ ರಾಮಾಯಣದಂತಹ ಕಾವ್ಯ ಹುಟ್ಟಿಕೊಂಡದ್ದೇ ಹೆಣ್ಣಿನಿಂದ. ಈ ಮಹಾಕಾವ್ಯಗಳಲ್ಲಿ ಹೆಣ್ಣಿನಿಂದಲೇ ಸೃಷ್ಟಿ ಹಾಗೂ ಹೆಣ್ಣಿನಿಂದಲೇ ನಾಶ ಎನ್ನುವುದು ತಿಳಿದಿದೆ. ಇಂದಿಗೂ ಹೆಣ್ಣಿಗೆ ಮಹತ್ತರ ಸ್ಥಾನಮಾನವನ್ನು ನೀಡಲಾಗಿದೆ. ಆದರೆ ಇದೀಗ ಹೆಣ್ಣು ಅಭಿವೃದ್ಧಿ ಪಥದತ್ತ ಸಾಗುತ್ತಿದ್ದಾಳೆ.
ಆದರೆ ಇಂದಿಗೂ ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಈ ಹೆಣ್ಣಿನ ಮನಸ್ಸಿನಲ್ಲೇನಿದೆ ಎಂದು ತಿಳಿಯಲು ಋಷಿ ಮಹರ್ಷಿಗಳಿಂದಲೇ ಸಾಧ್ಯವಾಗಿಲ್ಲ. ಇನ್ನು ಮನುಷ್ಯರು ಯಾವ ಲೆಕ್ಕ, ವಿಜ್ಞಾನಿಗಳು ಈ ಬಗ್ಗೆ ಆಳವಾದ ಸಂಶೋಧನೆ ನಡೆಸಿದರೂ ಹೆಣ್ಣಿನ ಮನಸ್ಸಿನಾಳಕ್ಕೆ ಬಿಡಿ, ಮೇಲ್ಪದವರನ್ನೂ ದಾಟಲು ಸಾಧ್ಯವಾಗಿಲ್ಲ.
ಶತಮಾನಗಳಿಂದಲೂ ಗಂಡಿಗೆ ಅರ್ಥವಾಗದ ಇವರ ಚಂಚಲ ಮನಸ್ಸು ಒಂದು ರಹಸ್ಯವಾಗಿಯೇ ಉಳಿದಿದೆ. ಆದರೆ ಇತ್ತೀಚಿಗಷ್ಟೇ ಸರ್ವೆವೊಂದರ ಪ್ರಕಾರ ಯುವತಿಯರು ಹಾಗೂ ಆಂಟಿಯರು ಯಾವ ವಿಚಾರದ ಕುರಿತು ಹೆಚ್ಚಿನದಾಗಿ ಆಸಕ್ತಿ ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಮನೆಯಲ್ಲಿ ಏಕಾಂಕಿಯಾಗಿರುವಾಗ ಯಾವುದನ್ನು ಹೆಚ್ಚಾಗಿ ಗೂಗಲ್ ನಲ್ಲಿ ಹುಡುಕುತ್ತಾರೆ ಎನ್ನುವುದು ಬೆಳಕಿಗೆ ಬಂದಿದೆ.
ಸರ್ವೆವೊಂದರಲ್ಲಿ ಶೇಕಡ 75% ರಷ್ಟು ಜನ ಹುಡುಗಿಯರು ಮನೆಯಲ್ಲಿ ಒಬ್ಬರೇ ಇದ್ದಾಗ ಸಾಮಾನ್ಯವಾಗಿ ಸ್ಕಿನ್ ಕೇರ್ ಅಥವಾ ಸೌಂದರ್ಯಕ್ಕೆ ಸಂಬಂಧಪಟ್ಟಂತಹ ವಸ್ತುಗಳ ಬಗ್ಗೆ ನೋಡುತ್ತಿರುತ್ತಾರೆ. ಅಂದಹಾಗೆ, ಮಾರುಕಟ್ಟೆಗೆ ಬರುವ ಹೊಸ ಪ್ರಾಡಕ್ಟ್ ಗಳು ಹಾಗೂ ಮನೆಯಲ್ಲಿ ತಯಾರು ಮಾಡಬಹುದಾದ ಫೇಸ್ ಪ್ಯಾಕ್ ಗಳ ಕುರಿತು ನೋಡುತ್ತಾರೆ ಎನ್ನಲಾಗುತ್ತಿದೆ.
ಅದಲ್ಲದೆ, 25 ರಿಂದ 40 ವರ್ಷವಿರುವಂತಹ ಹೆಣ್ಣು ಮಕ್ಕಳು ಅಡುಗೆ ಹಾಗೂ ವಿಧವಿಧ ರೆಸಿಪಿಗಳ ಕುರಿತು ಮಾಹಿತಿಯನ್ನು ಹುಡುಕುತ್ತಾರೆ. ಇನ್ನು, 15ರಿಂದ 34 ವರ್ಷದ ಹೆಣ್ಣು ಮಕ್ಕಳು ಹೆಚ್ಚಿನದಾಗಿ ದೈನಂದಿನ ಜೀವನದ ಕುರಿತಾದ ಮಾಹಿತಿಯನ್ನು ನೋಡುತ್ತಾರೆ. ಅದರ ಜೊತೆಗೆ, ಟಿನೇಜ್ ವಯಸ್ಸಿನವರು ಹೆಚ್ಚಾಗಿ ತಮ್ಮ ಬಾಡಿ ಫಿಟ್ನೆಸ್ ಹಾಗೂ ಸೌಂದರ್ಯಕ್ಕೆ ಉಪಯುಕ್ತವಾಗುವ ಹೊಸ ಉತ್ಪನ್ನಗಳನ್ನು ಖರೀದಿ ಮಾಡುತ್ತಾರೆ.
ಆ ಕುರಿತಾದ ಮಾಹಿತಿಯನ್ನ ಹುಡುಕುತ್ತಾರೆ. ಇನ್ನು ಉಳಿದಂತೆ 17℅ರಷ್ಟು ಜನ ಹುಡುಗಿಯರು ಹಾಗೂ ಮಹಿಳೆಯರು ಡ್ರಗ್ಸ್ ಹಾಗೂ ಮಧ್ಯಪಾನ ಸೇರಿದಂತೆ ಮಾದಕ ದ್ರವ್ಯಗಳ ಕುರಿತು ಮಾಹಿತಿ ಕಲೆ ಹಾಕುತ್ತಾರೆ. 20ರಷ್ಟು ಜನ ಹುಡುಗಿಯರು ಸ್ವಾವಲಂಬನೆಯಿಂದ ಬದುಕು ಕಟ್ಟಿಕೊಳ್ಳುವುದು ಹೇಗೆಂಬುದರ ಬಗ್ಗೆ ಮಾಹಿತಿ ಹುಡುಕುತ್ತಾರೆ.

ಹೀಗಾಗಿ ಉದ್ಯೋಗಕ್ಕೆ ಸಂಬಂಧಪಟ್ಟಂತಹ ಮಾಹಿತಿಯನ್ನು ಹುಡುಕುತ್ತಾರೆ. ಇನ್ನು, ಪ್ರೀತಿಯಲ್ಲಿರುವ ಹೆಣ್ಣು ಮಕ್ಕಳು ಮದುವೆಯಾದ ಸುಖ ಸಾಂಸಾರಿಕ ಜೀವನದ ಕುರಿತು ಯೋಚಿಸಿ, ಆ ಕುರಿತಾದ ಮಾಹಿತಿ ಹುಡುಕುತ್ತಾರೆ. ಅದಲ್ಲದೆ ಕೆಲ ಹುಡುಗಿಯರು ರೋಮ್ಯಾಂಟಿಕ್ ವಿಚಾರಗಳನ್ನು ಕಲೆ ಹಾಕುತ್ತಾರೆ ಎನ್ನುವುದು ತಿಳಿದು ಬಂದಿದೆ.