ರವಿಚಂದ್ರನ್ ಮನೆ ಮಾರಿದ ವಿಷಯ ಗೊತ್ತಾದ ತಕ್ಶಣವೇ ಅವರ ಕಷ್ಟ ಕೇಳಿ ಕರಗಿತು ಶಿವಣ್ಣನ ಮೃದು ಹೃದಯ!! ಶಿವಣ್ಣ ಮಾಡಿದ ಸಹಾಯ ಎಂತದ್ದು ಗೊತ್ತೇ?

ನಮಸ್ತೆ ಪ್ರೀತಿಯ ವೀಕ್ಷಕರೆ, ಹಲವಾರು ದಶಕಗಳಿಂದಲೂ ನಮ್ಮ ಕನ್ನಡ ಸಿನಿಮಾರಂಗದಲ್ಲಿ ನಟಿಸಿ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಂತಹ ಕ್ರೀಜಿಸ್ಟಾರ್ ರವಿಚಂದ್ರನ್ ಅವರು ಸದ್ಯ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಹೌದು ಗೆಳೆಯರೇ ಕಳೆದ ವರ್ಷ ಮಗಳ ಮದುವೆಯನ್ನು ಮಾಡಿ. ಹಾಗೂ ಕಳೆದ ತಿಂಗಳು ಮಗ ಮನೋರಂಜನ್ ರವಿಚಂದ್ರನ್ ಅವರ ಮದುವೆ ಮಾಡಿ ಸಾಕಷ್ಟು ಹಣವನ್ನು ವೆಚ್ಚ ಮಾಡಿದರು.

ಇದರೊಂದಿಗೆ ಸ್ವತಹ ರವಿಚಂದ್ರನ್ ರವರೆ ನಿರ್ಮಾಣ ಮಾಡಿ ನಟಿಸಿದಂತಹ ‘ರವಿ ಬೊಪ್ಪಣ್ಣ’ ಸಿನಿಮಾ ಯಾವುದೇ ಯಶಸ್ಸು ಕಾಣದೆ ಹಾಕಿದ ಬಂಡವಾಳ ಒಂದು ರೂಪಾಯಿ ಕೂಡ ವಾಪಸ್ಸು ಬಾರದೆ ನೆಲಕಚ್ಚಿತು. ಈ ಎಲ್ಲ ಮಾಹಿತಿಯನ್ನು ತಿಳಿದಂತಹ ನಟ ಶಿವರಾಜ್ ಕುಮಾರ್ ತಮ್ಮ ಆತ್ಮೀಯ ಗೆಳೆಯನಿಗೆ ಎಂತಹ ಸಹಾಯ ಮಾಡಿದ್ದಾರೆ ಎಂಬ ಮಾಹಿತಿಯನ್ನು ನಾವಿವತ್ತು ನಿಮಗೆ ಈ ಲೇಖನ ಮುಖಾಂತರ ತಿಳಿಸಲಿದ್ದೇವೆ.

ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.ಹೌದು ಗೆಳೆಯರೇ ಕಳೆದ ಕೆಲವು ದಿನಗಳ ಹಿಂದೆ ರವಿಚಂದ್ರನ್ ಅವರು ರಾಜಾಜಿನಗರದ ರಾಜಕುಮಾರ ರಸ್ತೆಯಲ್ಲಿ ಇದ್ದಂತಹ ತಮ್ಮ ತಂದೆ ತಾಯಿ ಬಾಳಿದ ಭವ್ಯ ಬಂಗಲೆ ಮನೆಯನ್ನು ಸಾಲ ತೀರಿಸಲಾಗದೆ, ಮಾರಿ ಬೇರೆ ಕಡೆ ಶಿಫ್ಟ್ ಆಗಿದ್ದರು.

ಈ ಒಂದು ಮಾಹಿತಿಯನ್ನು ತಿಳಿದಂತಹ ಸಾಕಷ್ಟು ಕನ್ನಡ ಸಿನಿಮಾ ರಂಗದ ಕಲಾವಿದರು ರವಿಚಂದ್ರನ್ ಅವರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ರವಿಚಂದ್ರನ್ ಅವರಿಗೆ ಕರೆ ಮಾಡಿ ಮಾತನಾಡಿದಂತಹ ಶಿವರಾಜ್ ಕುಮಾರ್ ನಿಮ್ಮೊಂದಿಗೆ ನಾವಿದ್ದೇವೆ ನಿಮ್ಮದೇಂತಹ ಗೌರವಾನ್ವಿತ ಸ್ವಭಾವ ಎಂಬುದು ನಮಗೆ ಗೊತ್ತು.ಅಲ್ಲದೆ ಸಿನಿಮಾ ಮಾಡುವುದಕ್ಕಾಗಿ ನೀವು ಎಷ್ಟು ದೊಡ್ಡ ರಿಸ್ಕ್ ಬೇಕಾದರೂ ತೆಗೆದುಕೊಳ್ಳುತ್ತೀರಿ. ಸಿನಿಮಾ ಚೆನ್ನಾಗಿ ಬರಬೇಕೆಂಬುದು ನಿಮ್ಮ ಉದ್ದೇಶವಾಗಿರುತ್ತದೆ.

ಅಷ್ಟೇ ನಿಮ್ಮ ಅತ್ಯದ್ಭುತ ಅಭಿನಯ ನಿರ್ದೇಶನ ಪ್ರತಿಯೊಂದು ನಮಗೆ ಸ್ಪೂರ್ತಿದಾಯಕ.ನೀವು ಯಾವುದೇ ಕಾರಣಕ್ಕೂ ಕುಗ್ಗಬಾರದು. ನಿಮ್ಮೊಂದಿಗೆ ಇಡೀ ಕನ್ನಡ ಸಿನಿಮಾ ರಂಗವಿದೆ. ಎಂದು ಶಿವಣ್ಣ ರವಿಚಂದ್ರನ್ ಅವರಿಗೆ ಧೈರ್ಯ ತುಂಬುವುದರೊಂದಿಗೆ ಧನ ಸಹಾಯವನ್ನು ಮಾಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಈ ಒಂದು ವಿಚಾರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈ’ರಲಾಗುತ್ತಿದೆ ಇದಕ್ಕೆ ಹೇಳೋದು ದೊಡ್ಮನೆಯವರು ಅಂಥ, ಶಿವಣ್ಣರವರ ಈ ನಡೆಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *