ಸ್ಯಾಂಡಲ್ವುಡ್ ನಲ್ಲಿ ಚಲುವಿನ ಚಿತ್ತಾರದ ಮೂಲಕ ಗೋಲ್ಡನ್ ಕ್ವೀನ್ ಎಂದೇ ಗುರುತಿಸಿಕೊಂಡಿರುವ ಅಮೂಲ್ಯ ಅವರು ಮಾರ್ಚ್ 1, 2022ರಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಇದಾದ ಬಳಿಕ ಮಕ್ಕಳ ಕ್ಯೂಟ್ ಕೈಗಳ ಪೋಟೋವನ್ನು ರಿವೀಲ್ ಮಾಡಿದ್ದರು. ನಮ್ಮ ಮನೆಯ ಪುಟ್ಟ ಗಣಪಗಳಿಂದ ನಿಮ್ಮಗೆ ಪ್ರೀತಿಯ ಗಣೇಶ ಚತುರ್ಥಿಯ ಹಾರ್ಧಿಕ ಶುಭಾಶಯಗಳು’ ಎಂದು ಅಮೂಲ್ಯ ಬರೆದುಕೊಂಡಿದ್ದರು. ಈ ಫೋಟೋ ಫ್ಯಾನ್ಸ್ಗೆ ಇಷ್ಟ ಆಗಿದೆ. ಅಷ್ಟು ಮಾತ್ರವಲ್ಲದೆ ಇತ್ತೀಚೆಗೆ ಅವರು ವೀಡಿಯೋ ಒಂದನ್ನು ಸಹ ಹಂಚಿಕೊಂಡಿದ್ದರು.
ನಟಿ ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ಮಾಡಿದ್ದು ಅಭಿಮಾನಿಗಳ ಪ್ರಶ್ನೆಗಳಿಗೆ ಪ್ರೀತಿಯಿಂದ ಉತ್ತರಿಸಿದ್ದಾರೆ. ನೀವು ಅವಳಿ ಮಕ್ಕಳ ತಾಯಿಯಾಗಲಿದ್ದೀರಿ ಎಂದು ತಿಳಿದಾಗ ನಿಮ್ಮ ಹಾಗೂ ನಿಮ್ಮ ಕುಟುಂಬದ ಪ್ರತಿಕ್ರಿಯೆ ಹೇಗಿತ್ತು ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅಮೂಲ್ಯ ನಾನು ಸ್ಕ್ಯಾನಿಂಗ್ ರೂಂನಲ್ಲಿ ನಗುತ್ತಿದೆ, ಜಯ್ ಸ್ವಲ್ಪ ಟೆನ್ಶನ್ ಆಗಿ ಕನ್ಫ್ಯೂಸ್ ಆಗಿದ್ದರು. ನನ್ನ ಕುಟುಂಬದವರು ನಾನು ಇದನ್ನು ಹೇಗೆ ಮ್ಯಾನೇಜ್ ಮಾಡುತ್ತೇನೆ ಎಂಬಂತೆ ನನ್ನತ್ತ ನೋಡುತ್ತಿದ್ದರು.
ಕೊನೆಗೂ ದೇವರು ನನ್ನ ಇಬ್ಬರೂ ಮಕ್ಕಳನ್ನು ನಿಭಾಯಿಸುವ ಶಕ್ತಿ ನೀಡಿದ ಎಂದಿದ್ದಾರೆ. ನಮ್ಮ ಚೆಂದನವನದಲ್ಲಿ ಒಂದು ಕಾಲದಲ್ಲಿ ಗೋಲ್ಡನ್ ಕ್ವೀನ್ ಎಂದೇ ಜನಪ್ರಿಯತೆ ಗಳಿಸಿ ಚಿತ್ರರಂಗದ ಬಹು ಬೇಡಿಕೆ ಹಾಗೂ ಪಡ್ಡೆ ಹುಡಗರ ಹೃದಯ ಕದ್ದ ಮುದ್ದು ಮುಖದ ನಟಿ ಅಮೂಲ್ಯರವರು. 2001 ರಲ್ಲಿ ವಿಷ್ಣುವರ್ಧನ್ ರವರ ಪರ್ವ ಎಂಬ ಸಿನಿಮಾದ ಮೂಲಕ ಬಾಲ ನಟಿಯಾಗಿ ಸ್ಯಾಂಡಲ್ವುಡ್ ಗೆ ಎಂಟ್ರಿಕೊಟ್ಟ ಇವರು ದರ್ಶನ್ ಅಭಿನಯದ ಲಾಲಿಹಾಡು ಅಪ್ಪು ಜೊತೆ ನಮ್ಮ ಬಸವ ಇನ್ನೂ ಮುಂತಾದ ಸಿನಿಮಾಗಳಲ್ಲಿ ಬಾಲ ನಟಿಯಾಗಿ ನಟಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ.
ತದನಂತರ 2007 ರಲ್ಲಿ ಎಸ್ ನಾರಾಯಣ್ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚೆಲುವಿನ ಚಿತ್ತಾರ ಎ್ಬ ಸಿನಿಮಾದಲ್ಲಿ ಕೇವಲ 13 ನೇ ವಯಸ್ಸಿನಲ್ಲಿರುವಾಗಲೇ ನಟಿಸಿದ ಅಮೂಲ್ಯ ಕರ್ನಾಟಕ ಸಿನಿ ರಸಿಕರ ಮನಸ್ಸನ್ನು ಕದಿಯುತ್ತಾರೆ. ಹೌದು ರಾಕಿಂಗ್ ಸ್ಟಾರ್ ಯಶ್ ಅಜಯ್ ರಾವ್ ಪ್ರೇಮ್ ಚಿರಂಜೀವಿ ಸರ್ಜಾ ಇನ್ನು ಮುಂತಾದ ಸ್ಟಾರ್ ನಟರ ಜೊತೆಗೆ ಕೂಡ ಅಮೂಲ್ಯ ನಾಯಕಿಯಾಗಿ ಮಿಂಚಿದ್ದು ಅಲ್ಪ ಅವಧಿಯಲ್ಲಿ ದೊಡ್ಡ ಹೆಸರನ್ನು ಕೂಡ ಸಂಪಾದಿಸಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟೀವ್ ಆಗಿರುವ ಅಮೂಲ್ಯ, ಗರ್ಭಿಣಿಯಾದಾಗಿನಿಂದ ತಮ್ಮ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ ಬಂದಿದ್ದಾರೆ. ಬರೋಬ್ಬರಿ ಐದೂವರೆ ತಿಂಗಳ ಬಳಿಕ ನಟಿ ಅಮೂಲ್ಯ ತಮ್ಮ ಅವಳಿ ಮಕ್ಕಳ ಫೋಟೋ ಬಹಿರಂಗ ಪಡಿಸಿದ್ದಾರೆ.
ಈ ಹಿಂದೆ ಅಷ್ಟಮಿಯಂದು ತಮ್ಮ ಎರಡು ಅವಳಿ ಮಕ್ಕಳ ಜೊತೆ ಫೋಟೋ ಶೂಟ್ ಮಾಡಿಸಿರುವ ಅಮೂಲ್ಯ ದಂಪತಿ, ಫೋಟೋದಲ್ಲಿ ಅಮೂಲ್ಯ ಹಸಿರು ಬಣ್ಣದ ಗೌನ್ ತೊಟ್ಟು ತಮ್ಮ ಮುದ್ದು ಮಕ್ಕಳ ಜೊತೆ ಪೋಸ್ ನೀಡಿದ್ದಾರೆ.ಪತಿ ಜಗದೀಶ್ ಕಪ್ಪು ಬಣ್ಣದ ಶರ್ಟ್ ಧರಿಸಿ ಇಬ್ಬರು ಮಕ್ಕಳನ್ನು ಎರಡು ಕೈಯಲ್ಲಿ ಹಿಡಿದುಕೊಂಡು ಕ್ಯಾಮರಾಗೆ ಪೋಸ್ ನೀಡಿದ್ದಾರೆ.ಶ್ರೀ ಕೃಷ್ಣಜನ್ಮಾಷ್ಟಮಿಯಿಂದು ಮಕ್ಕಳನ್ನು ಪರಿಚಯಿಸುತ್ತಿದ್ದೇನೆ. ನಿಮ್ಮ ಆಶೀರ್ವಾದ ಇರಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಮೂಲ್ಯ ಮನವಿ ಮಾಡಿದ್ದಾರೆ.
ಡೆನಿಮ್ ಡಂಗ್ರಿ ವೈಟ್ ಶರ್ಟ್ ಮತ್ತು ಬೋ ಟೈ ಕಾಂಬಿನೇಷನ್‌ನಲ್ಲಿ ಇಬ್ಬರೂ ಮಕ್ಕಳು ನಗುತ್ತಿರುವ ಫೋಟೋವನ್ನು ಅಮೂಲ್ಯ ಅಪ್ಲೋಡ್ ಮಾಡಿದ್ದಾರೆ. ಇತ್ತೀಚೆಗೆ ಅಮೂಲ್ಯ ನಟನೆಯಿಂದ ದೂರ ಉಳಿದು ತಮ್ಮ ಅವಳಿ ಮುದ್ದು ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ.ಇತ್ತೀಚೆಗೆ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿಲ್ಲ. ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಅವರು ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಇದೀಗ ಮಧ್ಯಮ ದೊಂದಿಗೆ ಮಾತನಾಡಿದ ಅಮೂಲ್ಯ ನನಗೆ ಮಕ್ಕಳ ಆರೈಕೆಯೇ ಖುಷಿ ಅಂದಿದ್ದಾರೆ.
ಇದರಿಂದ ಅಮೂಲ್ಯ ಕುಟುಂಬದಲ್ಲಿ ಖುಷಿ ಹೆಚ್ಚಾಗಿದೆ. 2017ರಲ್ಲಿ ಬಂದ ‘ಮುಗುಳು ನಗೆ’ ಸಿನಿಮಾದಲ್ಲಿ ಒಂದು ಅತಿಥಿ ಪಾತ್ರ ಮಾಡಿದ ಬಳಿಕ ಅಮೂಲ್ಯ ಅವರು ಬೇರೆ ಯಾವುದೇ ಸಿನಿಮಾದಲ್ಲೂ ನಟಿಸಿಲ್ಲ. ಮತ್ತೆ ಅವರನ್ನು ದೊಡ್ಡ ಪರದೆಯಲ್ಲಿ ನೋಡಬೇಕು ಎಂದು ಅಭಿಮಾನಿಗಳು ಕಾದಿದ್ದಾರೆ.