ಸ್ಯಾಂಡಲ್ವುಡ್ ನ ಗೋಲ್ಡನ್ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ನಟಿ ಅಮೂಲ್ಯ ಮಾರ್ಚ್ 1 2022ರಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಇದಾದ ನಾಲ್ಕು ತಿಂಗಳ ಬಳಿಕ ಮಕ್ಕಳ ಕ್ಯೂಟ್ ಕೈಗಳ ಫೋಟೋವನ್ನು ರಿವೀಲ್ ಮಾಡಿದ್ದರು. ನಮ್ಮ ಮನೆಯ ಪುಟ್ಟ ಗಣಪತಿಗಳಿಂದ ನಿಮಗೆ ಪ್ರೀತಿಯ ಗಣೇಶ್ ಚತುರ್ಥಿಯ ಹಾರ್ಧಿಕ ಶುಭಾಶಯಗಳು ಎಂದು ಬರೆದುಕೊಂಡಿದ್ದರು. ಇದರಲ್ಲಿ ಅಮೂಲ್ಯ ಮಕ್ಕಳು ಮಲಗಿದ್ದಾರೆ. ಅವರ ಸುತ್ತಲೂ ಪುಸ್ತಕ ಅ, ಆ,ಇ, ಈ ಹಾಗೂ ಎ, ಬಿ, ಸಿ, ಡಿ, ಎಂದು ಬರೆದು ಚಿಕ್ಕ ಚಿಕ್ಕ ಬೋರ್ಡ್ ಇದೆ.
ಈ ಫೋಟೋ ಅಭಿಮಾನಿಗಳು ಸಾಕಷ್ಟು ಇಷ್ಟ ಪಟ್ಟಿದ್ದಾರೆ. ಅದು ಮಾತ್ರವಲ್ಲದೇ ಇತ್ತೀಚಿಗೆ ಅವರು ವಿಡಿಯೋ ಒಂದನ್ನು ಕೂಡ ಹಂಚಿಕೊಂಡಿದ್ದಾರೆ. ಸೆಪ್ಟೆಂಬರ್ 14 ಅಮೂಲ್ಯ ಅವರ ಜನ್ಮದಿನ. ಇದರ ಜೊತೆಗೆ ಅವರ ಮಕ್ಕಳಿಗೆ ಆರು ತಿಂಗಳು ತುಂಬಿದೆ. ಅಮೂಲ್ಯ ಅವರಿಗೆ ಸೆ14 ವಿಶೇಷ ದಿನ. ನಮ್ಮ ಹುಟ್ಟುಹಬ್ಬದ ಸಂಭ್ರಮದ ಜೊತೆಗೆ ಅವಳಿ ಗಂಡು ಮಕ್ಕಳಿಗೆ ಆರು ತಿಂಗಳು ತುಂಬಿದ ಖುಷಿಯಲ್ಲಿದ್ದಾರೆ. ಈ ಎಲ್ಲಾ ಕಾರಣದಿಂದ ಅಮೂಲ್ಯ ಸಂಭ್ರಮದಲ್ಲಿದ್ದಾರೆ.
ಅದರಲ್ಲಿ ಮಕ್ಕಳಿಬ್ಬರು ಆಟವಾಡುವ ಅಪರೂಪದ ಸಂಗತಿ ಹಾಗೂ ಪತಿ ಜಗದೀಶ್ ಮಗುವನ್ನು ಆರೈಕೆ ಮಾಡುವ ಕ್ಷಣವನ್ನು ಸೆರೆ ಹಿಡಿಯಲಾಗಿದ್ದು ಸದ್ಯ ಈ ವಿಡಿಯೋ ಎಲ್ಲೆಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ನಟಿ ಅಮೂಲ್ಯ ಅವರು ಮಕ್ಕಳ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ತುಂಬಾ ಖುಷಿಹಾಗಿದ್ದರೆ. ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿರುವ ಅಮೂಲ್ಯ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾ ಬಂದಿದ್ದಾರೆ.
ಬರೋಬ್ಬರಿ ಐದುವರೆ ತಿಂಗಳ ಬಳಿಕ ನಟಿ ಅಮೂಲ್ಯ ತಮ್ಮ ಅವಳಿ ಮಕ್ಕಳ ಫೋಟೋ ಬಹಿರಂಗ ಪಡಿಸಿದ್ದಾರೆ. ಈ ಹಿಂದೆ ಅಷ್ಟಮಿಯಂದು ತಮ್ಮ ಎರಡು ಅವಳಿ ಮಕ್ಕಳ ಜೊತೆ ಫೋಟೋ ಶೂಟ್ ಮಾಡಿಸಿದರು ಅಮೂಲ್ಯ ದಂಪತಿಗಳು, ಫೋಟೋದಲ್ಲಿ ಅಮೂಲ್ಯ ಹಸಿರು ಬಣ್ಣದ ಗೌನ್ ತೊಟ್ಟು ತಮ್ಮ ತಮ್ಮ ಮುದ್ದು ಮಕ್ಕಳ ಜೊತೆ ಪೋಸ್ ಕೊಟ್ಟಿದ್ದಾರೆ. ಪತಿ ಜಗದೀಶ್ ಕಪ್ಪು ಬಣ್ಣದ ಶರ್ಟ್ ಧರಿಸಿ ಇಬ್ಬರು ಮಕ್ಕಳನ್ನು ಎರಡು ಕೈಯಲ್ಲಿ ಹಿಡಿದುಕೊಂಡು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.
ಶ್ರೀ ಕೃಷ್ಣಜನ್ಮಾಷ್ಟಮಿಯಿಂದು ಮಕ್ಕಳನ್ನು ಪರಿಚಯಿಸಿದ್ದೇನೆ. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಮೂಲ್ಯ ಮನವಿ ಮಾಡಿದ್ದಾರೆ. ಡೇನಿಮ್ ದಂಗ್ರಿ ವೈಟ್ ಶರ್ಟ್ ಮತ್ತು ಬೋ ಟೈ ಕಾಂಬಿನೇಶನ್ನಲ್ಲಿ ಇಬ್ಬರೂ ಮಕ್ಕಳು ನಗುತ್ತಿರುವ ಫೋಟೋವನ್ನು ಅಮೂಲ್ಯ ಅಪ್ಲೋಡ್ ಮಾಡಿದ್ದಾರೆ. ಇತ್ತೀಚಿಗೆ ಅಮೂಲ್ಯ ನಟನೆಯಿಂದ ದೂರ ಉಳಿದು ತಮ್ಮ ಅವಳಿ ಮುದ್ದು ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚಿಗೆ ಅವರು ಚಿತ್ರರಂಗದಲ್ಲಿ ಆಕ್ಟಿವ್ ಆಗಿಲ್ಲ. ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.
ಅವರು ಇತ್ತೀಚಿಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಇದರಿಂದ ಅಮೂಲ್ಯ ಕುಟುಂಬದಲ್ಲಿ ಖುಷಿ ಹೆಚ್ಚಾಗಿದೆ. 2017ರಲ್ಲಿ ಬಂದ “ಮುಗುಳು ನಗೆ” ಸಿನೆಮಾದಲ್ಲಿ ಒಂದು ಅಥಿತಿ ಪಾತ್ರ ಮಾಡಿದ ಬಳಿಕ ಅಮೂಲ್ಯ ಅವರು ಬೇರೆ ಯಾವುದೇ ಸಿನೆಮಾದಲ್ಲೂ ನಟಿಸಿಲ್ಲ. ಮತ್ತು ಅವರನ್ನು ದೊಡ್ಡ ಪದರೆಯಲ್ಲಿ ನೋಡಬೇಕು ಎಂದು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈ ಮಾಹಿತಿಯಾ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.