ಮಾವನ ಸಿನೆಮಾ ನೋಡಿ ನಟಿ ಶೃತಿ ಮಗಳು ಗೌರಿ ಹೇಳಿದ್ದೇನು? ಬೆಚ್ಚಿಬಿದ್ದ ಶರಣ್ ನೋಡಿ!!

ಚಂದನವನದ ಹಿರಿಯ ನಟಿ ಶೃತಿ ಎಂದರೆ ಒಂದಿಷ್ಟು ಸೂಪರ್ ಹಿಟ್ ಸಿನೆಮಾಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದರು. ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡವರು ಶೃತಿ. ಇವರು ಜನಿಸಿದ್ದು 18 ಸೆಪ್ಟೆಂಬರ್ 1975 ರಲ್ಲಿ. ಇವರು ಮೂಲ ಹೆಸರು ಗಿರಿಜಾ. ಆದರೆ ಸಿನೆಮಾ ರಂಗದಲ್ಲಿ ಗುರುತಿಸಿಕೊಂಡಿರುವ ಶೃತಿ ಎಂದ ಹೆಸರಿನಿಂದ. ದ್ವಾರಕೀಶ್ ಅವರು ನಿರ್ದೇಶನ ಮಾಡಿರುವ ಕನ್ನಡದ “ಶೃತಿ” ಚಿತ್ರದಲ್ಲಿ ನಟಿಸಿರುವ ಇವರಿಗೆ ಗಿರಿಜಾ ಇದ್ದ ಹೆಸರಿನ ಬದಲಾಗಿ ಶೃತಿ ಎಂದು ಕರೆಯಲಾಯಿತು. ಇವರು ಕನ್ನಡ ಸೇರಿದಂತೆ ತಮಿಳು, ಮಲಯಾಳಂ, ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಮೊದಲು ಬಾರಿಗೆ ಶಿವರಾಜ್ ಕುಮಾರ್ ಅವರ ಸಿನೆಮಾ ಆಸೆಗೊಬ್ಬ ಮೀಸೆಗೊಬ್ಬ ಚಿತ್ರದಲ್ಲಿ ಸಹಾಯ ಪಾತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ನಂತರ ದ್ವಾರಕೀಶ್ ಅವರ “ಶೃತಿ” ಚಿತ್ರದಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡರು. ಆ ಚಿತ್ರದಿಂದ ಇವರಿಗೆ ಶೃತಿ ಎಂಬ ಹೆಸರು ಬಂತು. ತಾಯಿ ಇಲ್ಲದ ತವರು, ವೀರಪ್ಪ ನಾಯಕ, ಗೌರಿ ಗಣೇಶ್, ಬೊಂಬಾಟ್ ಹೆಂಡ್ತಿ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ನಟಿಸಿರುವ ಇವರು ಕನ್ನಡ ಚಿತ್ರರಂಗದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡ ನಟಿ ಎಂದು ಗುರುತಿಸಿಕೊಂಡಿದ್ದಾರೆ.

ಹೌದು, ಒಂದು ಕಾಲದಲ್ಲಿ ಫೇಮಸ್ ನಟಿಯಾಗಿ ತಮ್ಮದೆ ಆದ ಅಭಿಮಾನಿಗಳ ಬಳಗವನ್ನು ಹೊಂದಿದ್ದರು. ಶೃತಿ ಎಂದರೆ ನೆನಪಾಗುವುದು ಪಾತ್ರವನ್ನು ನಿಭಾಯಿಸುವ ಪರಿ, ಪ್ರೇಕ್ಷಕ ವರ್ಗಾವನ್ನು ತನ್ನತ್ತ ಸೆಳೆಯುವ ರೀತಿ, ಆ ಪಾತ್ರದ ಒಳಹೊಕ್ಕು ಎಲ್ಲರನ್ನು ನಿಬ್ಬೆರಾಗುವಂತೆ ಮಾಡಿ ಬಿಡುವ ತಾಕತ್ತು ಶ್ರುತಿಯವರಿಗಿದೆ. ಶ್ರುತಿ ಅವರು ಆಗಿನ ಕಾಲದ ಹಲವು ಸಿನೆಮಾಗಳಲ್ಲಿ ಹಲವು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕನ್ನಡ ಚಿತ್ರರಂಗದ ನಟಿ ಶೃತಿ ಅವರು ಅನೇಕ ಸಾಲು ಸಾಲು ಸಿನೆಮಾಗಳಲ್ಲಿ ನಟಿಸಿದ್ದಾರೆ.

ಅಲ್ಲದೆ ಆಗಿನ ಕಾಲದ ಬಹು ಬೇಡಿಕೆ ನಟಿಯಾಗಿದ್ದರು. ಇತ್ತೀಚಿನ ದಿನಗಳಲ್ಲಿ ಅವರು ಸಿನೆಮಾರಂಗದಿಂದ ಸ್ವಲ್ಪ ದೂರವೇ ಉಳಿದಿದ್ದಾರೆ ಮತ್ತು ರಾಜಕೀಯದಲ್ಲಿ ಕೆಲಸ ಮಾಡುತ್ತಿದ್ದರು. ಶೃತಿ ಅವರು ತಮ್ಮ ನೈಜ ನಟನೆಯಿಂದಲೇ ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಶೃತಿಯ ನಟನೆ ಇನ್ನು ಎಲ್ಲಾ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಅದು ಅಲ್ಲದೇ, ಶೃತಿ ಮಗಳು ಗೌರಿ ಅದ್ಭುತವಾಗಿ ಹಾಡುವ ಮೂಲಕ ಈ ಹಿಂದೆ ಎಲ್ಲರ ಗಮನ ಸೆಳೆದಿದ್ದಳು. ಆದರೆ ಇದೀಗ ಗೌರಿಯವರ ಗುರು ಶಿಷ್ಯರು ಸಿನೆಮಾ ನೋಡಿ ಭಾವುಕ ಮಾತುಗಳನ್ನು ಆಡಿದ್ದಾರೆ. ಹಾಗಾದರೆ ಏನು ಹೇಳಿದ್ದಾರೆ ನೋಡಿ.

ಗೌರಿ ಬೆಂಗಳೂರಿನ ಕಾಲೇಜ್ ಒಂದರಲ್ಲಿ ಪಿಯುಸಿ ಕಾಮರ್ಸ್ ಓದಿದ್ದಾಳೆ. ಗೌರಿ ಓದುವುದರಲ್ಲಿ ಮಾತ್ರವಲ್ಲದೆ, ಸಂಗೀತದಲ್ಲೂ ಮುಂದೆ ಇದ್ದಾಳೆ. ಹಾಡನ್ನು ತುಂಬಾ ಇಂಪಾಗಿ ಹಾಡುತ್ತಾರೆ ಅಲ್ಲದೆ ಗಿಟಾರ್ ನುಡಿಸುವುದು, ಲಾಂಗ್ ಜರ್ನಿ ಎಂದರೆ ಅವಳಿಗೆ ಇಷ್ಟ ಗೌರಿಗೆ ಐಎಎಸ್ ಮಾಡುವ ಕನಸಿದೆ. ಅವಳಿಗೆ ಕನ್ನಡ ಚಿತ್ರರಂಗದಲ್ಲಿ ಯಶ್, ರಮ್ಯಾ ನೆಚ್ಚಿನ ನಟ ನಟಿಯರಂತೆ. ತಾಯಿಯ ಜೊತೆಗೆ ಹೆಚ್ಚಾಗಿ ಕಾಲ ಕಳೆಯುತ್ತಾರೆ ಗೌರಿ. ಇನ್ನು ಶರಣ್ ಅಭಿನಯದ ಗುರು ಶಿಷ್ಯರು ಸಿನೆಮಾ ನೋಡಿದ ಗೌರಿ, ಈ ಸಿನೆಮಾದ ಕುರಿತು ಭಾವುಕ ಮಾತುಗಳನ್ನು ಆಡಿದ್ದಾಳೆ.

ಈ ಕುರಿತು ಮಾತನಾಡಿದ ಗೌರಿ, ಮಾಮನ ಸಿನೆಮಾಗಳು ಎಂದರೆ ಹೆಚ್ಚು ಕುತೂಹಲವಿರುತ್ತದೆ. ಹೀಗಾಗಿ ರಾತ್ರಿಯೆಲ್ಲಾ ನಿದ್ದೆ ಬರುವುದಿಲ್ಲ. ಈ ಗುರು ಶಿಷ್ಯರು ಸಿನೆಮಾದ ಬಗ್ಗೆ ಹೆಚ್ಚು ಕುತೂಹಲವಿತ್ತು. ಅದಲ್ಲದೆ ಈ ಸಿನೆಮಾದಲ್ಲಿ ಅವರ ಮಗ ಎಲ್ಲಾ ಹುಡುಗರು ತುಂಬಾನೇ ಕಷ್ಟ ಪಟ್ಟಿದ್ದಾರೆ. ಈ ಸಿನೆಮಾದ ಜರ್ನಿಯನ್ನು ನೋಡಿದ್ದೇನೆ. ಪರದೆಯ ಮೇಲೆ ನೋಡಿದಾಗ ತುಂಬಾ ಹೆಮ್ಮೆ ಕೂಡ ಅನಿಸಿತು. ಮಾಮ ಈ ವಯಸ್ಸಿನಲ್ಲಿ ಅಷ್ಟು ಆಕ್ಟಿವ್ ಆಗಿ ನಟನೆ ಮಾಡಿದ್ದಾರೆ. ಈ ಸಿನೆಮಾದಲ್ಲಿ ಮಾಮ ಅವರ ಲುಕ್ ಕೂಡ ಬದಲಾಗಿದೆ. ಪಕ್ಕಾ ಪ್ರಪೋಸಲ್ ಸ್ಪೋರ್ಟ್ಸ್ ಪರ್ಸನ್ ತರಹನೆ ಕಾಣ್ತಾರೆ. ಈ ಸಿನೆಮಾದ ಟೈಟಲ್ ಇಂದ ಹಿಡಿದು ಎಲ್ಲವೂ ಇಷ್ಟವಾಗಿದೆ” ಎಂದಿದ್ದಾರೆ.

Leave a Reply

Your email address will not be published. Required fields are marked *