ಮರೆಯಲಾಗದ ನಟಿ ಸೌಂದರ್ಯ ಮಗು ಪರಿಸ್ಥಿತಿ ಏನಾಯ್ತು ಗೊತ್ತಾ…ಇಲ್ಲಿದೆ ನೋಡಿ ಯಾರಿಗೂ ಗೊತ್ತಿರದ ಸತ್ಯ

ಕನ್ನಡ ಸೇರಿದಂತೆ ದಕ್ಷಿಣ ಭಾರತೀಯ ಭಾಷೆಗಳ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ್ದ ನಟಿ ಸೌಂದರ್ಯ ನಮ್ಮನ್ನಗಲಿ ಹಲವು ವರ್ಷಗಳೇ ಕಳೆದವು ಚಿತ್ರನಟಿ, ನಿರ್ಮಾಪಕಿಯಾಗಿಯೂ ಬೆಳೆದು ಸಾಧನೆ ಶಿಖರವೇರಿದ್ದ ನಟಿ ತಮ್ಮ ಸರಳತೆಗೆ ಸಹ ಸಹೆಸರಾಗಿದ್ದರು. ಇಂತಹಾ ಮೇರು ನಟಿ ವಿಮಾನ ದುರಂತದಲ್ಲಿ ಅಕಾಲ ಮೃ’ತ್ಯು’ವಿ’ಗೀ’ಡಾ’ದದ್ದು ಮಾತ್ರ ಅವರ ಅಭಿಮಾನಿಗಳಿಗೆ ಮರೆಯಲಾಗದ ನೋವನ್ನುಂಟುಮಾಡಿದೆ.ಸೌಂದರ್ಯ ಹೆಸರಿಗೆ ತಕ್ಕಂತೆ ಸುಂದರವಾಗಿದ್ದವರು.
ಜುಲೈ 18, 1972ಲ್ಲಿ ಹುಟ್ಟಿದ ಸೌಂದರ್ಯ ವೈದ್ಯೆಯಾಗಬೇಕೆಂದಿದ್ದವರು ಆಕಸ್ಮಿಕವಾಗಿ ಚಲನಚಿತ್ರರಂಗ ಪ್ರವೇಶಿಸಿದ್ದರು. ‘ಸೌಮ್ಯ’ಈಕೆಯ ಮೂಲ ಹೆಸರಾಗಿದ್ದು ತಮ್ಮ ಮೊದಲ ಕೆಲವು ಚಿತ್ರಗಳಲ್ಲಿ ಸಹ ಇದೇ ಹೆಸರನ್ನು ಬಳಸಿಕೊಂಡಿದ್ದುಂಟು. ತೂಗುವೆ ಕೃಷ್ಣನ, ಸಿಪಾಯಿ, ನಾನು ನನ್ನ ಹೆಂಡ್ತೀರು, ಶ್ರೀ ಮಂಜುನಾಥ, ಆರ್ಯಭಟ, ದೋಣಿಸಾಗಲಿ, ಆಪ್ತಮಿತ್ರ ಸೇರಿ ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದ ನಟಿ ತೆಲುಗು, ತಮಿಳು, ಮಲಯಾಳಗಳಲ್ಲಿ ಸಹ ಬಹು ಬೇಡಿಕೆಯ ನಟಿಯಾಗಿದ್ದರು.

ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿ ಬಳಿಕ ತೆಲುಗು ಹಿಂದಿ ಹಾಗೂ ತಮಿಳು ಮತ್ತು ಮಲೆಯಾಳಂ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ 90ರ ದಶಕದ ಟಾಪ್ ನಟಿ ಆಗಿದ್ದ ಸೌಂದರ್ಯ ಅವರ ಅಗಲಿಕೆಯ ಅರಗಿಸಿಕೊಳ್ಳಲು ಸಾಧ್ಯವೇ ಇಲ್ಲ.  ಅಲ್ಲ ಅವಧಿಯಲ್ಲಿ ಸರಿಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಸಾಲುಸಾಲು ಪ್ರಶಸ್ತಿಗಳನ್ನು ಕೂಡ ಮುಡಿಗೇರಿಸಿಕೊಂಡು ಕರ್ನಾಟಕ ಆಂಧ್ರಪ್ರದೇಶ ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ವ್ಯಾಪಕ ಜನಪ್ರಿಯತೆ ಅಪಾರ ಅಭಿಮಾನವನ್ನು ಹೊಂದಿದ್ದರು.
ತೆಲುಗು ಚಿತ್ರರಂಗದ ಇತಿಹಾಸದಲ್ಲಿ ಮಹಾನಟಿ ಸಾವಿತ್ರಿ ಯವರ ಬಳಿಕ ಅತ್ಯಂತ ಜನಪ್ರಿಯತೆ ಪಡೆದ ನಟಿ ಸೌಂದರ್ಯ ಆಗಿದ್ದರು. ಆಧುನಿಕ ತೆಲುಗು ಚಿತ್ರರಂಗದ ಸಾವಿತ್ರಿ ಎಂದು ಕೂಡ ಅವರನ್ನು ಕರೆಯಲಾಗುತ್ತದೆ. ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗಕ್ಕೆ ಬರ ಸಿಡಿಲಿನಂತೆ ದೊಡ್ಡ ಅಪಘಾತವೊಂದು  2004 ರ ಏಪ್ರಿಲ್ 17 ರಂದು ಬಂದಿತ್ತು. ಹೌದುಬ ಅಕ್ಷರಶಃ  ಪ್ರತಿಯೊಬ್ಬರು ಕೂಡ  ಈ ಘಟನೆಯನ್ನು ಅರಗಿಸಿಕೊಳ್ಳಲಾರದ ಸ್ಥಿತಿಗೆ ತಲುಪಿದ್ದರು. 

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಸೌಂದರ್ಯ ರಾಜಕೀಯದ ಪ್ರಚಾರಕ್ಕಾಗಿ ತಮ್ಮ ಸಹೋದರ ಅಮರನಾಥ್  ಜೊತೆ ಸಣ್ಣ ವಿಮಾನವೊಂದರಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಭೀಕರ ಆಘಾತದಿಂದ ಇಹಲೋಕ ತ್ಯಜಿಸಯತ್ತಾರೆ.ಸದ್ಯ ಈ ವಿಚಾರ ಹೊರಬರುತ್ತಿದ್ದಂತೆ ಚಿತ್ರರಂಗ ಸೇರಿದಂತೆ ಅಭಿಮಾನಿ ವಲಯದಲ್ಲೂ ಕೂಡ ದೊಡ್ಡ ಆಘಾತ ಮನೆ ಮಾಡಿದ್ದು ನಟಿ ಸೌಂದರ್ಯಜೊತೆಯೇ ಸಹೋದರ ಅಮರನಾಥ್ ರವರು ಕೂಡ ಆ’ಘಾ’ತದಲ್ಲಿ ಕೊನೆಯುಸಿರೆಳೆಯುತ್ತಾರೆ.

ಇನ್ನು ನಟಿ ಸೌಂದರ್ಯ ಅವರು ಹೆಸರಿಗೆ ತಕ್ಕಂತೆ ಸೌಂದರ್ಯವತಿ ಆಗಿದ್ದು ಕೇವಲ ರೂಪದಲ್ಲಿ ಮಾತ್ರವಲ್ಲ ವ್ಯಕ್ತಿತ್ವ ಕೂಡ ಅಷ್ಟೇ ಸೌಂದರ್ಯವತಿಯಾಗಿದ್ದರು. ಚಿತ್ರರಂಗದಲ್ಲಿ ತಮ್ಮ ಅದ್ಭುತವಾದ ನಟನೆಯಿಂದ ಪ್ರತಿಯೊಬ್ಬರ ಅಚ್ಚುಮೆಚ್ಚಿನ ಕಲಾವಿದೆಯಾಗಿದ್ದ ಇವರು ಸಿನಿಮಾ ವಿಚಾರವನ್ನು ಹೊರತುಪಡಿಸಿ ಬೇರೆ ಯಾವುದೇ ನೆಗಿಟಿವ್ ಅಥವಾ ವೈಯಕ್ತಿಕ ವಿಚಾರಗಳಲ್ಲಿ ತಮ್ಮ ಹೆಸರು ಹರಿದಾಡಿಕೊಳ್ಳುವಂತೆ ಮಾಡಿಕೊಂಡಿರಲಿಲ್ಲ. 
ಹೌದು ಅಭಿನಯದ ಜೊತೆ ತಮ್ಮ ಸರಳ ವ್ಯಕ್ತಿತ್ವದಿಂದಲೂ ಸಹ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದ ಈ ಸೌಂದರ್ಯ  ರವರು ಚಿತ್ರದ ಚಿತ್ರೀಕರಣದಲ್ಲಿ ಕೆಲಸ ಮಾಡುವ ತಂತ್ರಜ್ಞರ ಮೇಲೆ ವಿಶೇಷವಾದ ಗೌರವವನ್ನು ಹೊಂದಿದ್ದರಂತೆ. ತಮಗಾಗಿ ಹಗಲು ರಾತ್ರಿ ಕಷ್ಟಪಟ್ಟು ದುಡಿಯುತ್ತಿದ್ದ ತಂತ್ರಜ್ಞರಿಗೆ ಮತ್ತು ಲೈಟ್ ಬಾಯ್ ಗಳಿಗೆ ವಿಶೇಷ ಗೌರವ ಸೂಚಿಸುತ್ತಿದ್ದ ಅವರು ಬಹಳ ಆತ್ಮೀಯವಾಗಿಯೂ ಮಾತನಾಡಿಸುತ್ತಿದ್ದರಂತೆ.
 
ನಟಿ ಸೌಂದರ್ಯ ಇಹಲೋಕ ತ್ಯಜಿಸುವ ಒಂದು ವರುಷಗಳ ಹಿಂದೆಯಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ತಮ್ಮ ಸಂಬಂಧಿಕರು ಹಾಗೂ ಬಾಲ್ಯ ಸ್ನೇಹಿತರಾದ ಸಾಫ್ಟ್ ವೇರ್ ಉದ್ಯಮಿ ರಘು ಎಂಬುವವರ ಜೊತೆ ವೈವಾಹಿಕ  ಜೀವನಕ್ಕೆ ಕಾಲಿಟ್ಟಿದ್ದ ಅವರು ಸಂಸಾರದಲ್ಲಿ ನೆಮ್ಮದಿಯಾಗಿದ್ದರು.  ವಿಮಾನ ದುರಂತದಿಂದ ತಮ್ಮ ಪ್ರಾಣವನ್ನು ಕಳೆದುಕೊಂಡ ನಟಿ ಸೌಂದರ್ಯ ಅದಾಗ ಕೇವಲ 31 ವರುಷ ವಯಸ್ಸಾಗಿತ್ತು. ಇನ್ನು ಬೇಸರದ ವಿಚಾರವೇನೆಂದರೆ  ಸೌಂದರ್ಯ ಅವರು ಇಹಲೋಕ ತ್ಯಜಿಸುವ ಸಮಯದಲ್ಲಿ ತುಂಬು ಗರ್ಭಿಣಿಯಾಗಿದ್ದು ಈ ವಿಚಾರ ಅದೆಷ್ಟು ಜನರಿಗೆ ತಿಳಿದಿರಲಿಲ್ಲ.

ಹೌದು ವಿಮಾನ ದುರಂತದಲ್ಲಿ ಪ್ರಾಣವನ್ನು ಕಳೆದುಕೊಂಡ ಸೌಂದರ್ಯ ಅವರು ಅದಾಗ ಏಳು ತಿಂಗಳ ಗರ್ಭಿಣಿಯಾಗಿದ್ದು ಮಗುವಿನ ನಿರೀಕ್ಷೆಯಲ್ಲಿದ್ದ ನಟಿ ಸೌಂದರ್ಯ ರವರು ತಮ್ಮ ಕರುಳಿನ ಕುಡಿಯನ್ನು ನೋಡವು ಮುನ್ನವೇ ಅಪಘಾತದಲ್ಲಿ ಬಲಿಯಾಗಿದ್ದು ನಿಜಕ್ಕೂ ಸಹ ಚಿತ್ರರಂಗಕ್ಕೆ ಇಂದಿಗೂ ಕೂಡ ಆ ಘಟನೆಯನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ಇನ್ನು ನಟಿ ಸೌಂದರ್ಯ ಅವರು ಕಣ್ಮುಚ್ಚಿದ ಬಳಿಕ ಅವರ ಕುಟುಂಬದಲ್ಲಿ ಆಸ್ತಿಯ ವಿಚಾರವಾಗಿ ದೊಡ್ಡ ಗಲಾಟೆಯೇ ನಡೆದಿದ್ದು ಈ ವಿಚಾರ ಕೋರ್ಟ್ ಮೆಟ್ಟಿಲು ಏರಿತ್ತು. 

ಕೊನೆಯದಾಗಿ ರಾಜಿ ಮಾಡಿಕೊಂಡ ಪತಿ ರಘು ಅವರು ಸೌಂದರ್ಯ ಅವರ ತಾಯಿ ಹಾಗೂ ಅರ್ಧದಷ್ಟು ಆಸ್ತಿಯನ್ನು ತಾವು ಇಟ್ಟುಕೊಂಡರೆ ಉಳಿದ ಆಸ್ತಿಯನ್ನು ಸೌಂದರ್ಯ ರವರ ಅಣ್ಣನಿಗೆ ನೀಡಿದರು. ಈ ವಿಚಾರಗಳು ಏನೇ ಇರಲಿ ಈಗಲೂ ಸಹ ಸೌಂದರ್ಯ ಅವರ ಅಗಲಿಕೆ ಪ್ರತಿಯೊಬ್ಬ ಸಿನಿಪ್ರೇಕ್ಷಕರಿಗೂ ಕೂಡ ಕಾಡುತ್ತಲೇ ಇದೆ.

Leave a Reply

Your email address will not be published. Required fields are marked *