ಸಿನೆಮಾರಂಗದ ಈ ಜೋಡಿಯ ಮದುವೆಯು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಇದಕ್ಕೆ ಕಾರಣ ಇವರಿಬ್ಬರ ಜೋಡಿನ್ನಬಹುದು. ತಮಿಳಿನ ಜನಪ್ರಿಯ ನಿರೂಪಕಿ, ನಟಿ ಮಹಾಲಕ್ಷ್ಮಿ ಅವರು ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರ ಜೊತೆಗೆ ಸೆಪ್ಟೆಂಬರ್ 1 ರಂದು ಮದುವೆಯಾಗಿದ್ದರು. ಸದ್ಯಕ್ಕೆ ಈ ಜೋಡಿಗಳ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈ’ರಲ್ ಆಗಿದೆ. ನಿರ್ಮಾಪಕ ರವೀಂದರ್ ಅವರು ತನ್ನ ಮುದ್ದಿನ ಮಡದಿಗೆ ಉಡುಗೊರೆಯೊಂದನ್ನು ನೀಡಿದ್ದು, ಈ ಸುದ್ದಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಹಾಗಾದರೆ ಮುದ್ದಿನ ಹೆಂಡತಿ ಮಹಾಲಕ್ಷ್ಮಿ ಅವರಿಗೆ ಪತಿ ನೀಡಿದ ಉಡುಗೊರೆ ಆದರೂ ಏನು ನೋಡೋಣ ಬನ್ನಿ.
ಮಹಾಲಕ್ಷ್ಮಿ ಅವರ ಹಿನ್ನಲೆಯನ್ನು ಗಮನಿಸುದಾದರೆ, ಮಹಾಲಕ್ಷ್ಮಿಯವರು ನಿರೂಪಕಿಯಾಗಿ ಮಾತ್ರವಲ್ಲದೆ, ನಟಿಯಾಗಿಯೂ ಕೂಡ ಖ್ಯಾತಿ ಗಳಿಸಿಕೊಂಡಿದ್ದಾರೆ. ಇವರು ರವೀಂದರ್ ಚಂದ್ರಶೇಖರನ್ ನಿರ್ಮಾಣದ ‘ಮೀಡಿಯುಮ್ ವಾರೈ ಕಾಥಿರು’ ಸಿನೆಮಾದಲ್ಲೂ ನಟಿಸಿದ್ದರು. ಇನ್ನು ಕಿರುತೆರೆಯಲ್ಲೂ ಮಹಾಲಕ್ಷ್ಮಿ ನಿರೂಪಕಿಯಾಗಿ ಖ್ಯಾತಿ ಗಳಿಸಿದ್ದಾರೆ. ವಾಣಿ ರಾಣಿ, ಆಫೀಸ್, ಚೆಲ್ಲಮೇ, ಓರು ಕೈ ಒಸೈ ಸೇರಿದಂತೆ ಸಾಕಷ್ಟು ಸೀರಿಯಲ್ ಗಳಲ್ಲಿ ಮಹಾಲಕ್ಷ್ಮಿ ನಟಿಸಿದ್ದಾರೆ.
ಅಂದಹಾಗೆ, ರವೀಂದರ್ ಅವರು ನಟ್ಟುನ ಎನ್ನುಡು ಥೇರಿಯುಮ, ಮುರಂಗೈಕೈ ಚಿಪ್ಸ್, ಹೀಗೆ ಹಲವಾರು ಸಿನೆಮಾಗಳನ್ನು ನಿರ್ಮಿಸಿ ಖ್ಯಾತಿ ಗಳಿಸಿಕೊಂಡಿದ್ದಾರೆ. ನಿರೂಪಕಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಇಬ್ಬರಿಗೂ ಕೂಡ ಇದು ಎರಡನೆಯ ಮದುವೆಯಾಗಿದೆ. ರವೀಂದರ್ ನಿರ್ಮಾಣದ ಸಿನೆಮಾದಲ್ಲಿ ಮಹಾಲಕ್ಷ್ಮಿ ನಟಿಸಿದ್ದರು. ಆ ಸಿನೆಮಾದಿಂದ ಇಬ್ಬರಿಗೂ ಪ್ರೀತಿ ಬೆಳೆದಿತ್ತು. ಮಹಾಲಕ್ಷ್ಮಿ ಮತ್ತು ರವೀಂದರ್ ಅವರು ಇಬ್ಬರೂ ಮನಪೂರಕವಾಗಿ ಇಷ್ಟಪಡುತ್ತಿದ್ದರು. ಒಂದೇ ಸಾಲ ಮದುವೆ ಆಗುವ ಮೂಲಕ ಅವರಿಬ್ಬರು ಸರ್ಪ್ರೈಸ್ ನೀಡಿದ್ದಾರೆ. ಮಹಾಲಕ್ಷ್ಮಿ ಅವರಿಗೆ 32 ವರ್ಷ ಹಾಗೂ ರವೀಂದರ್ ಅವರಿಗೆ 38 ವರ್ಷ. ಇಬ್ಬರೂ ಇಷ್ಟ ಪಟ್ಟು ಕಳೆದ ಕೆಲ ದಿನಗಳ ಹಿಂದೆ ಮದುವೆ ಮಾಡಿಕೊಂಡಿದ್ದರು.
ಈ ಜೋಡಿಗಳು ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದು ಅಲ್ಲದೆ ನಿರೂಪಕಿ ಮಹಾಲಕ್ಷ್ಮಿ ‘ನಿಮ್ಮನ್ನು ನನ್ನ ಬದುಕಿನಲ್ಲಿ ಪಡೆಯಲು ನಾನು ತುಂಬಾ ಅದೃಷ್ಟ ಮಾಡಿದ್ದೇನೆ. ಬೆಚ್ಚನೆಯ ಪ್ರೀತಿಯಿಂದ ನೀವು ನನ್ನ ಬದುಕನ್ನು ಪರಿಪೂರ್ಣಗೊಳಿಸಿದ್ದೀರಿ. ಲವ್ ಯೂ ಅಮ್ಮು.ಎಂದು ಬರೆದುಕೊಂಡಿದ್ದಾರೆ. ಇನ್ನು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರು ತಮ್ಮ ಫೇಸ್ ಬುಕ್ ನಲ್ಲಿ ತಮ್ಮ ಮದುವೆಯ ಫೋಟೋಗಳನ್ನು ಶೇರ್ ಮಾಡಿಕೊಂಡು ‘ಮಹಾಲಕ್ಷ್ಮಿ ತರ ಒಂದು ಹೆಣ್ಣು ಸಿಕ್ಕರೆ ಜೀವನ ಚೆನ್ನಾಗಿರುತ್ತೆ ಅಂತ ಹೇಳ್ತಾರೆ, ಆದರೆ ಮಹಾಲಕ್ಷ್ಮಿಯೇ ಜೀವನವಾಗಿ ಸಿಕ್ಕರೆ.
ಕಮಿಂಗ್ ಸೂನ್ ಲೈವ್ ಇನ್ ಪ್ಯಾಟ್ ಮ್ಯಾನ್ ಫ್ಯಾಕ್ಟ್. ಸ್ಮಾಲ್ ಸ್ಟೋರಿ ವಿಥ್ ಮೈ ವೈಫ್ ಎಂದು’ ಬರೆದುಕೊಂಡಿದ್ದಾರೆ ಈ ಸೆಲೆಬ್ರಿಟಿ ಜೋಡಿಗಳ ಮದುವೆಯ ಫೋಟೋಗಳನ್ನು ನೋಡಿ ನೆಟ್ಟಿಗರು ಬಹಳ ಅಚ್ಚರಿ ಪಟ್ಟಿದ್ದಾರೆ. ಹೌದು, ದೈತ್ಯ ದೇಹದ ರವೀಂದರ್ ಮತ್ತು ಮಹಾಲಕ್ಷ್ಮಿ ಜೋಡಿಯನ್ನು ನೋಡಿ ನೆಟ್ಟಿಗರು ಇದು ನಿಜ ಮದುವೆಯಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ ಈ ಜೋಡಿಯ ಕುರಿತಾಗಿ ಮತ್ತೊಂದು ವಿಚಾರ ಕೇಳಿ ಬರುತ್ತಿದೆ. ಅದುವೇ ನಿರ್ಮಾಪಕ ರವೀಂದರ್ ತನ್ನ ಮುದ್ದಿನ ಮಡದಿಗೆ ದುಬಾರಿ ಬೆಲೆಯ ಉಡುಗೊರೆಯನ್ನು ನೀಡಿದ್ದಾರೆ ಎಂಬುದು.
ಹೌದು ಬೆಲೆಬಾಳುವ ಆಭರಣ, ಸೀರೆ, ಬಂಗಲೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ಈ ಜೋಡಿ ಪ್ರತಿಕ್ರಿಯೆ ನೀಡಿಲ್ಲ. ಆ ಬಗ್ಗೆ ಅವರಿಂದಲೇ ಸ್ಪಷ್ಟನೆ ಸಿಗಲಿ ಎಂದು ನೆಟ್ಟಿಗರು ಕಾಯುತ್ತಿದ್ದಾರೆ. ಈ ನವ ಜೋಡಿಗಳ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.