ಸ್ನೇಹಿತರೆ ಕಳೆದವಾರ ಬಿಗ್ ಬಾಸ್ ನ ಎಲೆಮಿಷನ್ ನಲ್ಲಿ ಭಾರಿ ಪೈಪೋಟಿ ನಡೆದಿತ್ತು. ಹೌದು ರೂಪೇಶ್ ಶೆಟ್ಟಿ ನೇಹಾ ಗೌಡ ದೀಪಿಕಾ ದಾಸ್ ರೂಪೇಶ್ ರಾಜಣ್ಣ ಪ್ರಶಾಂತ್ ಸಂಬರಗಿ ಅಮೂಲ್ಯ ಗೌಡ ರಾಕೇಶ್ ಕಾವ್ಯಶ್ರೀ ಗೌಡ ಆರ್ಯವರ್ಧನ್ ಇವರೆಲ್ಲರೂ ನಾಮಿನೇಟ್ ಆಗಿದ್ದರು. ಈ ಪೈಕಿ ಯಾರು ಮನೆಯಿಂದ ಆಚೆ ಹೋಗಲಿದ್ದಾರೆ ಎಂಬ ಬಗ್ಗೆ ಸಾಕಷ್ಟು ಕುತೂಹಲ ಉಂಟಾಗಿದ್ದು ಅಂತಿಮವಾಗಿ ನಟಿ ನೇಹಾ ರವರು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದರು. ಇನ್ನು ಅದರಲ್ಲೂ ಮನೆಯಿಂದ ಆಚೆ ಹೋಗುವಾಗ ಪ್ರಶಾಂತ್ ಸಂಬರಗಿಗೆ ಶಾಕ್ ನಿಡಿದ್ದಾರೆ ನೇಹಾ ಗೌಡ.
ಹೌದು ಮನೆಯಿಂದ ಆಚೆ ಹೋಗುತ್ತಿದ್ದ ನೇಹಾಗೆ ಬಿಗ್ ಬಾಸ್ ಕಡೆಯಿಂದ ಒಂದು ವಿಶೇಷ ಅಧಿಕಾರ ಸಿಕ್ಕಿದ್ದು ಅದೇನೆಂದರೆ ಕ್ಯಾಪ್ಟನ್ ಅನುಪಮಾ ಅವರನ್ನು ಬಿಟ್ಟು ಬೇರೆ ಯಾರಾನ್ನಾದರೂ ಒಬ್ಬರನ್ನು ನಾಮಿನೇಟ್ ಮಾಡಬಹುದಿತ್ತು. ಆಗ ಪ್ರಶಾಂತ್ ಸಂಬರಗಿ ರವರನ್ನು ನೇಹಾ ನೇರವಾಗಿ ನಾಮಿನೇಟ್ ಮಾಡಿದ್ದು ತುಂಬ ಒಳ್ಳೆಯವಾದರೆ ಜನರು ಚುಚ್ಚಿಬಿಡ್ತಾರೆ. ಈ ಮನೆಯಲ್ಲಿ ಪ್ರಶಾಂತ್ ಸಂಬರಿಗೆ ಅವರಿಗೆ ಚುಚ್ಚುವಂತಹ ಗುಣ ಇದೆ. ಹಾಗಾಗಿ ಅವರನ್ನು ಪ್ರಶಾಂತ್ ಸಂಬರಗಿ ಅವರನ್ನು ನೇರವಾಗಿ ನಾಮಿನೇಟ್ ಮಾಡುತ್ತೇನೆ ಎಂದು ನೇಹಾ ಹೇಳಿದರು.
ಪ್ರಶಾಂತ್ ರವರು ಈ ವಾರ ನಾಮಿನೇಟ್ ಆಗಿ ಜನರ ವೋಟ್‌ನಿಂದ ಸೇಫ್ ಆಗಿದ್ದರು. ಆದರೆ ನೇಹಾ ನಾಮಿನೇಟ್ ಮಾಡಿದ್ದರಿಂದ ಮುಂದಿನ ವಾರವೂ ಅವರು ಎಲಿಮಿನೇಷನ್ ಆತಂಕವನ್ನು ಅನುಭವಿಸಬೇಕಿದೆ. ಐದನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದು ನನಗೆ ತಾಳ್ಮೆ ಜಾಸ್ತಿ ಇದೆ 15 ದಿನದ ನಂತರ ಮನೆಯಿಂದ ದೂರ ಇರೋದು ಕಷ್ಟ, ಆದರೂ ಟ್ರೈ ಮಾಡ್ತೀನ ಎಂದು ಅವರು ಹೇಳಿದ್ದರು.
ಆದರೆ 35ನೇ ದಿನಗಳ ನಂತರ ಅವರು ಹೊರಬಂದಿದ್ದು ಅಷ್ಟಕ್ಕೂ ಹೀಗೆ ಬೇಗನೇ ಮನೆಯಿಂದ ಔಟ್ ಆಗಿದ್ದೇಕೆ? ನೇಹಾ ಆರಂಭದಿಂದಲೂ ಜಾಸ್ತಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಜಾಸ್ತಿ ಅನುಪಮಾ ಅವರೊಂದಿಗೇ ನೇಹಾ ಇರುತ್ತಿದ್ದರು. ಇದು ಕೂಡ ನೇಹಾಗೆ ಮೈನಸ್ ಆಗಿರಬಹುದು. ಹೊಸ ಜಾಗದಲ್ಲಿ ನನ್ನ ಮಗಳು ಬೇಗ ಹೊಂದಿಕೊಳ್ಳೋದಿಲ್ಲ. ಕೆಲ ಸಮಯ ಹಿಡಿಯುತ್ತದೆ ಎಂದು ನೇಹಾ ಅವರ ತಂದೆ ರಾಮಕೃಷ್ಣ ಸಹ ಹೇಳಿದರು. ನೇಹಾ ಸಹೋದರಿ ನಟಿ ಸೋನು ಗೌಡ ಬಹುಶಃ ಅವಳು ಪ್ರಶಾಂತ್ ಸಂಬರಗಿ ಅರುಣ್ ಸಾಗರ್ ಅವರನ್ನು ನೋಡಿ ಹೆದರಿಕೊಂಡ್ಳು ಅನಿಸುತ್ತದೆ.
ಅದು ಬಿಟ್ಟರೆ ಅನುಪಮಾ ರಾಕೇಶ್ ಅವರ ಜೊತೆಗೆ ಕಂಫರ್ಟ್ ಆಗಿದ್ದು ಆದರೆ ಬೇರೆಯವರ ಜೊತೆಗೆ ಬೆರೆಯಬೇಕಿತ್ತು ಎಂದು ನೇಹಾ ಬಗ್ಗೆ ಹೇಳಿದರು. ಇನ್ನು ಪ್ರತಿ ಎಲಿಮಿನೇಷನ್ ನಡೆದ ನಂತರವೂ ಬಿಗ್ ಬಾಸ್ ಮನೆಯಲ್ಲಿ ಪೈಪೋಟಿ ಹೆಚ್ಚುತ್ತಿದ್ದು ಈಗ 13 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಕಡಿಮೆ ಸ್ಪರ್ಧಿಗಳು ಇರುವಾಗ ಹಣಾಹಣಿಯ ಕಾವು ಜೋರಾಗುತ್ತದ್ದು ಬೇರೆ ಬೇರೆ ವ್ಯಕ್ತಿತ್ವದ ಜನರ ನಡುವೆ ಆಟ ಮುಂದುವರಿದಿದೆ.
ಈ ಬಾರಿಯ ಬಿಗ್ ಬಾಸ್ ಸ್ವಲ್ಪ ಡಿಫರೆಂಟ್ ಆಗಿದೆ. ಇದೇ ಮೊದಲ ಬಾರಿಗೆ ನವೀನರು ಮತ್ತು ಪ್ರವೀಣರು ಬಿಗ್ ಬಾಸ್ ಮನೆ ಸೇರಿದ್ದಾರೆ. ಹಳೇ ಸ್ಪರ್ಧಿಗಳು ಪ್ರವೀಣರು. ಹೊಸ ಸ್ಪರ್ಧಿಗಳು ನವೀನರು ಈ ಸೀಸನ್ನಲ್ಲಿ ಯಾರಿಗೆ ಟ್ರೋಫಿ ಸಿಗಬಹುದು ಎಂಬ ಬಗ್ಗೆ ವೀಕ್ಷಕರ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಇನ್ನು 35 ದಿನಕ್ಕೆ ನೇಹಾಗೆ ಬರೋಬ್ಬರಿ ಒಂದು ಲಕ್ಷ ಸಂಭಾವನೆ ನೀಡಲಾಗಿದೆ ಎನ್ನಲಾಗಿದೆ. ಈ ಸರಿಯಾ ಬಿಗ್ ಬಾಸ್ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.