ನಮಸ್ತೆ ಪ್ರೀತಿಯ ವೀಕ್ಷಕರೆ, ಕನ್ನಡ ಕಿರುತೆರೆ ಲೋಕದಲ್ಲಿ ಅತೀ ದೊಡ್ಡ ಶೋ ಆಗಿರುವ ಬಿಗ್ ಬಾಸ್ ಸೀಸನ್ 9 ಈಗಾಗಲೇ ಶುರುವಾಗಿದ್ದು ಬಹಳಷ್ಟು ಮನರಂಜನೆಯಾಗಿದೆ. 18 ಸ್ಪರ್ಧಿಗಳಿಂದ ಕುಡಿರುವ ಈ ಬಿಗ್ ಮನೆ. ಈ ಬಾರಿ ಸೀನಿಯರ್ಸ್ ಹಾಗೂ ಹೊಸಬರ ಎನ್ನುವ ಕನ್ಸೆಪ್ಟ್ ಇಟ್ಟುಕೊಂಡು 9 ಮಂದಿ ಹಳೆಯ ಸ್ಪರ್ಧಿಗಳು ಹಾಗೂ 9 ಮಂದಿ ಹೊಸ ಸ್ಪರ್ಧಿಗಳು ಮನೆ ಈಗಾಗಲೇ ಪ್ರವೇಶ ಮಾಡಿದ್ದಾರೆ. ಇದೀಗ ದೊಡ್ಡ ಮನೆ ಕಳೆ ತುಂಬಿ ತುಳುಕುತ್ತಿದೆ. ಹೌದು, ಜನ ಬಹಳ ಕುತೂಹಲದಿಂದ ಕಾಯುತ್ತಿದ್ದ ಬಿಗ್ ಬಾಸ್ ಸೀಸನ್ 9 ಕಾಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9.30ರಿಂದ ಪ್ರಸಾರವಾಗುತ್ತಿದೆ.
ಸಾಕಷ್ಟು ಮನೋರಂಜನೆಯೊಂದಿಗೆ ಬಿಗ್ ಬಾಸ್ ಶೋ ನೀವು ತಪ್ಪದೇ ನೋಡಬಹುದು ಅಂದ ಹಾಗೆ ಈ ಬಾರಿ ಬಿಗ್ ಬಾಸ್ ಮನೆಗೆ ಈಗಾಗಲೇ ಬಿಗ್ ಬಾಸ್ ಗೆ ಹೋಗಿ ಸಾಕಷ್ಟು ದಿನ ಉಳಿದು ಬಂದಿದ್ದು ಕೆಲವು ಸ್ಪರ್ಧಿಗಳನ್ನು ಕೂಡ ಮತ್ತೆ ಕರೆತರಲಾಗಿದೆ. ದೀಪಿಕಾ ದಾಸ್, ಅನುಪಮಾ ಗೌಡ, ಪ್ರಶಾಂತ್ ಸಂಬರ್ಗಿ, ಅರುಣ್ ಸಾಗರ್, ದಿವ್ಯ ಊರುಡುಗ, ಮಯೂರಿ, ಸೋನು ಗೌಡ, ಈ ಸ್ಪರ್ಧಿಗಳು ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಆಟವಾಡಿದ್ದಾರೆ.
ಬಿಗ್ ಬಾಸ್ ಮನೆಗೆ ಈ ಸ್ಪರ್ಧಿಗಳು ಹಳೆ ಕಟೆಂಟೆಸ್ಟ್ ಅಗಿದ್ದು ಇದೀಗ ಮತ್ತೆ ಬಿಗ್ ಬಾಸ್ ನಲ್ಲಿ ತಮ್ಮ ಆಟ ಆಡುವುದಕ್ಕೆ ಹೋಗಿದ್ದಾರೆ. ಈಗಾಗಲೇ ಹೊಸಬರು ಹಾಗೂ ಹಳೆಯ ಸ್ಪರ್ಧಿಗಳ ನಡುವೆ ಜಟಾಜಟಿಗಳು ಆರಂಭವಾಗಿದೆ. ಇನ್ನೂ ಬಿಗ್ ಬಾಸ್ ಸೀಸನ್ 5ರಲ್ಲಿ ಸಾಕಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಇದ್ದು ಜನರಿಗೆ ಮನರಂಜನೆಯನ್ನು ನೀಡುವಂತಹ ನಟಿ ಹಾಗೂ ನಿರೂಪಕಿ ಅನುಪಮಾ ಗೌಡ ಕೂಡ ಈ ಬಾರಿಯೂ ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿ ಆಗಿದ್ದಾರೆ.
ಬಹಳ ಅನುಭವ ಹೊಂದಿರುವ ಮೃದು ಸ್ವಭಾವದ ಅನುಪಮಾ ಗೌಡ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಅಕ್ಕ ಎನ್ನುವ ಸೀರಿಯಲ್ ನಲ್ಲಿ ದ್ವೀಪಾತ್ರದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು. ಇಂದು ಕನ್ನಡದ ಮನೆ ಮಗಳು ಆಗಿ ಹೋದ ಅನುಪಮಾ ಗೌಡ ಧಾರಾವಾಹಿಯ ನಟನೆಯ ಜೊತೆಯಲ್ಲಿ ನಿರೂಪಣೆಗೂ ಕೂಡ ಇಳಿದಿದ್ದರೆ.
ಹೌದು, ಕನ್ನಡದಲ್ಲಿ ಅತ್ಯುತ್ತಮ ನಿರೂಪಕಿ ಎನಿಸಿಕೊಂಡಿದ್ದಾರೆ ಅನುಪಮಾ ಗೌಡ ಈಗಾಗಲೇ ನಮ್ಮಮ್ಮ ಸೂಪರ್ ಸ್ಟಾರ್, ರಾಜ ರಾಣಿ ಮೊದಲಾದ ಶೋಗಳಿಗೆ ಅನುಪಮಾ ಅವರ ಅತ್ಯುತ್ತಮ ನಿರೂಪಣೆ ಇತ್ತು. ಬಹಳ ಸುಂದರವಾಗಿ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಇನ್ನೂ ಅನುಪಮಾ ಗೌಡ ಅವರ ವೈಯಕ್ತಿಕ ಜೀವನದ ಬಗ್ಗೆ ನೋಡುವುದಾದರೆ ಅನುಪಮಾ ಗೌಡ ಅವರು ಟ್ರಾವೆಲ್ ಪ್ರಿಯರು.
ಹಾಗಾಗಿ ತಮ್ಮ ಹೊಸ ಕಾರ್ ನಲ್ಲಿ ಆಗಾಗ ಸೋಲೋ ಟ್ರೀಪ್ ಹೋಗುತ್ತಿರುತ್ತಾರೆ. ಇನ್ನೂ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದ ಅನುಪಮಾ ಗೌಡ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆ ಅಂತ ಹೇಳಿಕೊಂಡಿದ್ದಾರೆ. ಹೌದು, ವರ್ಷಗಳ ಹಿಂದೆ ಕನ್ನಡದ ಕಿರುತೆರೆಯ ಖ್ಯಾತ ನಟರೊಬ್ಬರ ಜೊತೆ ಅನುಪಮಾ ಗೌಡ ಪ್ರೀತಿಯಲ್ಲಿ ಬಿದಿದ್ದರು. ಅತಿಯಾಗಿ ಪ್ರೀತಿಸುತಿದ್ದ ಈ ಜೋಡಿ ಯಾವ ಕಾರಣಕ್ಕೆ ಬ್ರೇಕ್ ಅಪ್ ಆಗಿದ್ದಾರೋ ಗೊತ್ತಿಲ್ಲ.
ಆದರೆ ಬ್ರೇಕ್ ಅಪ್ ನಿಂದ ಅನುಪಮಾ ಗೌಡ ಸಾಕಷ್ಟು ನೋವನ್ನು ಅನುಭವಿಸಿ ಕೊನೆಗೆ ಆ-ತ್ಮ-ಹ-ತ್ಯೆಗೂ ಪ್ರಯತ್ನಿಸಿದ್ದರಂತೆ. ಆದರೆ ಇದೀಗ ಅವೆಲ್ಲರಿಂದ ಹೊರಗೆ ಬಂದು ವೃತ್ತಿ ಜೀವನದಲ್ಲಿ ತನ್ನನ್ನು ತಾನು ಹೆಚ್ಚಾಗಿ ತೊಡಗಿಸಿಕೊಂಡಿರುವ ಅನುಪಮಾ ಅವರ ಮುಂದಿರುವ ಆಸೆ ಅಂದ್ರೆ ಅಮ್ಮನನ್ನು ಚನ್ನಾಗಿ ನೋಡಿಕೊಳ್ಳಬೇಕು ಎನ್ನುವುದು. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ತಾನು ಹಠ ಛಲದಿಂದ ಅಡಿ ಬಿಗ್ ಬಾಸ್ ಗೆಲ್ಲುತ್ತೇನೆ ಎನ್ನುವ ಮಾತುಗಳನ್ನು ಆಡಿದ್ದಾರೆ. ನಟಿ ಅನುಪಮಾ ಗೌಡ. ನಟಿ ಅನುಪಮಾ ಗೌಡ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.