ಎಲ್ಲರ ಮೈ ರೋಮ ಎದ್ದು ನಿಲ್ಲುವಂತೆ ವಿಡಿಯೋ ಒಂದಕ್ಕೆ ಸ್ಟೆಪ್ ಹಾಕಿದ ಚೆಲುವೆ ಸಂಯುಕ್ತಾ ಹೆಗ್ಡೆ! ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು ನೋಡಿ!

samyukta hegde dance : ಸಿನಿಮಾದಂತೆ ಕಿರಿಕ್ ಸುದ್ದಿಗಳ ಮೂಲಕವೇ ಸುದ್ದಿಯಾಗ್ತಿದ್ದ ನಟಿ ಸಂಯುಕ್ತಾ ಹೆಗ್ಡೆ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆಯಿಂದ ನಾಪತ್ತೆಯಾಗಿದ್ದರು. ಆದರೆ ಈಗ ಮತ್ತೆ ಸೋಷಿಯಲ್ ಮೀಡಿಯಾ ಮೂಲಕ ಸಂಯುಕ್ತಾ ಹೆಗ್ಡೆ ಸದ್ದು ಮಾಡಿದ್ದಾರೆ. ಸಂಯುಕ್ತಾ ಈ ಹಿಂದೆ ಸಾಕಷ್ಟು ಬಾರಿ ಹಾಟ್ & ಬೋಲ್ಡ್​ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಸಂಯುಕ್ತಾ ಬಿಕಿನಿ ಅವತಾರದಲ್ಲಿ ಸೊಂಟ ಬಳುಕಿಸಿದ್ದಾರೆ.

ಕೆಲ ತಿಂಗಳ ಹಿಂದೆ ನಟಿ ಸಂಯುಕ್ತಾ ಕ್ರೀಂ ಸಿನಿಮಾದ ಶೂಟಿಂಗ್ ವೇಳೆ ಗಾಯಗೊಂಡಿದ್ದರು. ಫೈಟಿಂಗ್ ಸೀನ್ ಶೂಟ್ ಮಾಡುವ ವೇಳೆ ನೆಲಕ್ಕೆ ಅಪ್ಪಳಿಸಿದಂತೆ ಬಿದ್ದಿದ್ದ ನಟಿ ಸಂಯುಕ್ತಾ ಮಂಡಿ ಚಿಪ್ಪು ಸೇರಿದಂತೆ ಎಲ್ಲೆಡೆ ಏಟಾಗಿ ಆಸ್ಪತ್ರೆ ಸೇರಿದ್ದರು.ಕಾಲಿಗೆ ತೀವ್ರ ಪ್ರಮಾಣದಲ್ಲಿ ಗಾಯವಾಗಿದ್ದರಿಂದ ಶಸ್ತ್ರ ಚಿಕಿತ್ಸೆ ಕೂಡ ಮಾಡಲಾಗಿತ್ತು. ಇದಾದ ಬಳಿಕ ನಟಿ ಸಂಯುಕ್ತಾ ಅಂದಾಜು ಮೂರು ತಿಂಗಳ ಕಾಲ ಬೆಡ್ ರೆಸ್ಟ್ ನಲ್ಲಿದ್ದರು.

ಬಿಕನಿಯಲ್ಲಿ ಡ್ಯಾನ್ಸ್ ಮಾಡೋ ಪೋಟೋ,ವಿಡಿಯೋ ಹಂಚಿಕೊಳ್ಳೋ ಮೂಲಕ ಅಭಿಮಾನಿಗಳಿಗೆ ಎಂಟ್ರಿಯ ನ್ಯೂಸ್ ಕೊಟ್ಟಿದ್ದಾರೆ.ಹೂವುಗಳ ಚಿತ್ತಾರದ ಬಿಕನಿ ತೊಟ್ಟ ಸಂಯುಕ್ತಾ ಸಖತ್ ಮ್ಯೂಸಿಕ್ ಹಾಗೂ ಸಾಂಗ್ ಗೆ ಸೊಂಟ ಬಳುಕಿಸಿದ್ದಾರೆ. ಸಂಯುಕ್ತಾ ಬಿಕನಿ ಪೋಟೋ ಹಾಗೂ ವಿಡಿಯೋ ಸಖತ್ ವೈರಲ್ ಆಗಿದೆ. all the attraction, the tension, Don’t u see, baby this is perfection? ಎಂದು ಕ್ಯಾಪ್ಸನ್ ನೀಡಿದ್ದಾರೆ.

ಸಂಯುಕ್ತಾ ಹೆಗ್ಡೆ ಸಿನಿಮಾದ ಫೈಟಿಂಗ್ ಚಿತ್ರೀಕರಣವೊಂದರ ಸಂದರ್ಭದಲ್ಲಿ ಗಾಯಗೊಂಡಿದ್ದರು. ಇದೀಗ ತಾನು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ ಎಂದು ಹೇಳಲು ಬಿಕಿನಿ ಧರಿಸಿ ಡ್ಯಾನ್ ಮಾಡಿರುವ ವಿಡಿಯೋವನ್ನು ಇನ್ಸ್​ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಡ್ಯಾನ್ಸ್​ ಮಾಡಿರುವ ವಿಡಿಯೋ ಹಂಚಿಕೊಳ್ಳುವುದರ ಜತೆಗೆ ಸಂಯುಕ್ತಾ ಹೆಗ್ಡೆ, ಕಳೆದ ಮೂರು ತಿಂಗಳ ಬಳಿಕ ಮೊದಲ ಬಾರಿಗೆ ನಾನು ಡ್ಯಾನ್ಸ್​ ಮಾಡುತ್ತಿದ್ದೇನೆ. ಈ ನನಗೆ ಇನ್ನಷ್ಟು ಹುರುಪು ನೀಡುತ್ತಿದೆ. ಫಿಸಿಯೋಥೆರಪಿಯ ಕಠಿಣ ಚಿಕಿತ್ಸೆ ಮುಗಿದಿದೆ. ಎಲ್ಲರಿಗೂ ಧನ್ಯವಾದಗಳು. ಇದೀಗ ನೀವು ನೋಡುತ್ತಿರುವುದು ಪರಿಪೂರ್ಣತೆಯಾ ಎಂದು ಪ್ರಶ್ನಿಸಿದ್ದಾರೆ.

ಫಿಸಿಯೋಥೆರಪಿ ಚಿಕಿತ್ಸೆಯ ಮೂರು ತಿಂಗಳ ಅವಧಿ ಧೈಹಿಕವಾಗಿ ಮತ್ತು ಮಾನಸಿಕವಾಗಿ ತೊಡಗಿಸಿಕೊಳ್ಳಲು ಕಷ್ಟಕರವಾಗಿತ್ತು. ಎಲ್ಲರ ಪ್ರೀತಿ ಮತ್ತು ಬೆಂಬಲದಿಂದ ಇದನ್ನು ಸಾಧಿಸಲು ಸಾಧ್ಯವಾಗಿದೆ. ದಿನನಿತ್ಯದ ಆಚರಣೆಯಂತೆ ಫಿಸಿಯೋಥೆರಪಿ ಚಿಕಿತ್ಸೆ ಮಾಡಿಸಿದರು. ಇದರಿಂದ ಬೇಗನೆ ಗುಣಮುಖವಾಗಲು ಸಾಧ್ಯವಾಯಿತು ಎಂದು ನಟಿ ಸಂಯುಕ್ತಾ ಹೆಗ್ಡೆ ಹೇಳಿಕೊಂಡಿದ್ದಾರೆ.ಸಂಯುಕ್ತಾ ಮತ್ತೆ ಈ ರೀತಿಯ ಬಿಕನಿ ವಿಡಿಯೋ ಜೊತೆ ಮರಳಿದ್ದು ಅಭಿಮಾನಿಗಳಿಗೆ ಖುಷಿ ತಂದಿದ್ದು, ಹಲವರು ಒಳ್ಳೆಯ ಕಮೆಂಟ್ ಮಾಡ್ತಿದ್ದಾರೇ ಹಲವರು ಕೆಟ್ಟದಾಗಿ ಟೀಕಿಸಿ ಸಂಯುಕ್ತಾ ಕಾಲೆಳೆದಿದ್ದಾರೆ.

ಎಲ್ಲರ ಮೈ ರೋಮ ಎದ್ದು ನಿಲ್ಲುವಂತೆ ವಿಡಿಯೋ ಒಂದಕ್ಕೆ ಸ್ಟೆಪ್ ಹಾಕಿದ ಚೆಲುವೆ ಸಂಯುಕ್ತಾ ಹೆಗ್ಡೆ! ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು ನೋಡಿ!!

 

 

View this post on Instagram

 

A post shared by Samyuktha Hegde (@samyuktha_hegde)

Leave a Reply

Your email address will not be published. Required fields are marked *