ಬಾಡಿಗೆ ಗ-ರ್ಭಪಾತ ಮಾಡಿಸಿಕೊಂಡು ಮಗುವನ್ನು ಪಡೆದ ಪ್ರಿಯಾಂಕಾ ಚೋಪ್ರಾ ಬಾಡಿಗೆ ತಾಯ್ತನದ ನೋವನ್ನು ಹೊರ ಹಾಕಿ ಕಣ್ಣೀರು ಸುರಿಸಿ ಹೇಳಿದ್ದೇನು!!!

ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಹುಟ್ಟಿನ ಕೆಲವು ವಿಚಾರಗಳನ್ನು ರಿವೀಲ್ ಮಾಡಿದ ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ, ಅಷ್ಟಕ್ಕೂ ನಟಿ ಹೇಳಿದ್ದೇನು ಗೊತ್ತಾ?

ಬಾಲಿವುಡ್ ಸಿನಿಮಾರಂಗದಿಂದ ದೂರವಿದ್ದು ಹಾಲಿವುಡ್ ರಂಗದಲ್ಲಿ ಆಕ್ಟಿವ್ ಆಗಿರುವ ನಟಿ ಪ್ರಿಯಾಂಕಾ ಚೋಪ್ರಾ ಆಗಾಗ ಫೋಟೋ ಹಾಗೂ ವಿಡಿಯೋ ಮೂಲಕ ಸದ್ದು ಮಾಡುತ್ತಿರುತ್ತಾರೆ. ಆದರೆ ಇದೀಗ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೊನೆಗೂ ತಮ್ಮ ಮಗಳು ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಅವರ ಹುಟ್ಟಿನ ಕುರಿತು ಕೆಲವು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.

ಹೌದು, ಮಾಲ್ತಿ ಅವರ ಮುಖದ ಫೋಟೋ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ನಟಿ ಇದುವರೆಗೂ ಶೇರ್ ಮಾಡಿಲ್ಲ. ಮಗಳ ಅವಧಿಗೂ ಮುನ್ನ ನಡೆದ ಜನನ, ಅವರು ಬಾಡಿಗೆ ತಾಯ್ತನದ ಮಾರ್ಗವನ್ನು ಏಕೆ ಆರಿಸಿಕೊಂಡರು ಎನ್ನುವ ವಿಚಾರವನ್ನು ಕೊನೆಗೂ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಪ್ರತಿಷ್ಟಿತ ಬ್ರಿಟಿಷ್ ವೋಗ್ ಮುಖಪುಟವನ್ನು ಆಳಿದ ಮೊದಲ ಭಾರತೀಯ ನಟಿ ಪ್ರಿಯಾಂಕಾ ಚೋಪ್ರಾ ಆಗಿರುವುದು ಖುಷಿಯ ವಿಚಾರ.

ಅದಲ್ಲದೇ ಬ್ರಿಟಿಷ್ ವೋಗ್ ಮ್ಯಾಗಝೀನ್‌ಗಾಗಿ ತಮ್ಮ ಪುತ್ರಿ ಮಾಲ್ತಿ ಮೇರಿ ಜೊತೆಗೆ ಫೋಟೋಶೂಟ್‌ಗೆ ಪ್ರಿಯಾಂಕಾ ಚೋಪ್ರಾ ಪೋಸ್ ಕೊಟ್ಟಿದ್ದರು. ಇದೇ ಫೋಟೋವನ್ನ ಇನ್ಸ್ಟಾಗ್ರಾಮ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಬ್ರಿಟಿಷ್ ವೋಗ್ ಸಂದರ್ಶನದಲ್ಲಿ ಮಾತನಾಡಿದ ನಟಿ ಪ್ರಿಯಾಂಕಾ ಅವರು ತನ್ನ ಮಗಳು ಸಮಯಕ್ಕೂ ತುಂಬಾ ಮುಂಚೆಯೇ ಜನಿಸಿದಳು. ಅವಳು ಹೊರಗೆ ಬಂದಾಗ ನಾನು ಆಪರೇಷನ್ ರೂಮ್​ನಲ್ಲಿದ್ದೆ. ಅವಳು ತುಂಬಾ ಚಿಕ್ಕವಳಿದ್ದಳು, ನನ್ನ ಕೈಗಿಂತ ಚಿಕ್ಕ ಗಾತ್ರದಲ್ಲಿದ್ದಳು.

ನಿಕ್ ಮತ್ತು ನಾನು ಇಬ್ಬರೂ ಅಲ್ಲಿಯೇ ನಿಂತಿದ್ದೆವು. ಅವಳು ತುಂಬಾ ಚಿಕ್ಕವಳಿದ್ದಳು. ವೈದ್ಯರು ಅವಳನ್ನು ಹೇಗೆ ನೋಡಿಕೊಂಡಿದ್ದರೋ ಗೊತ್ತಿಲ್ಲ. ಆದರೆ ನಾವು ದಿನವೂ ಆಸ್ಪತ್ರೆಗೆ ಹೋಗುತ್ತಿದ್ದೆವು ಎಂದಿದ್ದಾರೆ.ಅದರ ಜೊತೆಗೆ, ತಮಗೆ ಆರೋಗ್ಯ ಸಮಸ್ಯೆ ಇದ್ದ ಕಾರಣ ಗರ್ಭಿಣಿಯಾಗಲು ಸಾಧ್ಯವಾಗಲಿಲ್ಲ ಎಂದು ಹೇಳಿದಳು. ನನಗೆ ಆರೋಗ್ಯ ಸಮಸ್ಯೆ ಇತ್ತು. ನಮ್ಮ ಮಗುವಿನ ಬಾಡಿಗೆ ತಾಯಿ ತುಂಬಾ ದಯೆ ಉಳ್ಳವರೂ, ಸುಂದರಿಯೂ ತಮಾಷೆಯ ಮನೋಭಾವದವರಾಗಿದ್ದರು. ಅವರು ಆರು ತಿಂಗಳ ಕಾಲ ನಮ್ಮ ಈ ಅಮೂಲ್ಯ ಉಡುಗೊರೆಯನ್ನು ನೋಡಿಕೊಂಡರು ಎಂದಿದ್ದಾರೆ.

ಅಂದಹಾಗೆ, ಕಳೆದ ವರ್ಷದ ಜನವರಿ ತಿಂಗಳಿನಲ್ಲಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವನ್ನು ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಬರಮಾಡಿಕೊಂಡಿದ್ದರು. ಕಳೆದ ಮೇ ತಿಂಗಳಲ್ಲಿ ‘’ನಿಕ್ಯೂನಲ್ಲಿ 100 ದಿನಗಳನ್ನು ಕಳೆದಿದ್ದ ‘ಮಾಲ್ತಿ ಮೇರಿ ಚೋಪ್ರಾ ಜೋನಸ್’ ಅಂತಿಮವಾಗಿ ಮನೆಗೆ ಬಂದಿದ್ದಾಳೆ’’ ಎಂದು ಹೇಳಿದ್ದರು.ನಟಿ ಪ್ರಿಯಾಂಕಾ ಪತಿ ಹಾಗೂ ಮಗಳ ಜೊತೆ ಬೀಚ್​ಗೆ ತೆರಳಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಫ್ಯಾಮಿಲಿ ಜೊತೆ ಕ್ಯಾಲಿಫೋರ್ನಿಯಾದ ಬೀಚ್​ಗೆ ತೆರಳಿದ್ದು, ಮಗಳ ಜೊತೆ ಬೀಚ್ ನಲ್ಲಿ ಅಟವಾಡಡುತ್ತಿದ್ದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.ಪತಿ ನಿಕ್ ಜೊತೆ ಮಗಳನ್ನು ಎತ್ತಿಕೊಂಡಿರುವ ಫೋಟೋ ಎಲ್ಲರ ಗಮನ ಸೆಳೆಯುತ್ತಿದ್ದೂ, ಆದರೆ ಈಗಲೂ ಮಗಳ ಮುಖ ತೋರಿಸಿಲ್ಲ. ಹಾರ್ಟ್ ಸಿಂಬಲ್ ಬಳಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಮಗಳ ಮುಖ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

Priyanka chopra daughter
Priyanka chopra daughter

ಆದರೆ ಮಗಳ ಮುಖ ರಿವೀಲ್ ಮಾಡದೇ ಇರುವುದಕ್ಕೆ ನಟಿ ಪ್ರಿಯಾಂಕಾ ಟ್ರೋಲ್ ಆಗಿದ್ದಾರೆ. ಮಗಳ ಮುಖವನ್ನು ಯಾಕೆ ಮರೆಮಾಚುತ್ತಿದ್ದೀರಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಹೀಗಾಗಿ ನಟಿ ಪ್ರಿಯಾಂಕಾ ಚೋಪ್ರಾ ಮಗಳ ಮುಖ ಯಾವಾಗ ರಿವೀಲ್ ಮಾಡುತ್ತಾರೆ ಎಂದು ಕಾದು ನೋಡಬೇಕು.

Leave a Reply

Your email address will not be published. Required fields are marked *