ಪುನೀತ್ ರಾಜ್ ಕುಮಾರ್ ಅವರನ್ನು ಕೊನೆಯ ಬಾರಿಗೆ ತೆರೆ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಳಲ್ಲಿ ಕಾಯುತ್ತಿದ್ದಾರೆ. ಅಪ್ಪುವಿನ ಕನಸಿನ ಕೂಸು ‘ಗಂಧದ ಗುಡಿ’ ಚಿತ್ರ ಇದೆ ಅಕ್ಟೋಬರ್ 28ರಂದು ಬೆಳ್ಳಿ ತೆರೆಗೆ ಬರಲಿದೆ. ಈಗಾಗಲೇ ‘ಗಂಧದ ಗುಡಿ’ ಟ್ರೈಲರ್ ಬಿಡುಗಡೆಯಗಿದ್ದು ಈ ಟ್ರೈಲರ್ ಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಹು ನಿರೀಕ್ಷಿತ ಗಂಧದ ಗುಡಿ ಡಾಕ್ಯೂಮೆಂಟ್ ಚಿತ್ರ ಬಿಡುಗಡೆಗೂ ಮುನ್ನ ಅದ್ದೂರಿಯಾಗಿ ಫ್ರಿ ರಿಲೀಸ್ ಇವೆಂಟ್ ಕಾರ್ಯಕ್ರಮ ನಾಳೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಕನ್ನಡದ ಹಾಗೂ ಬೇರೆ ಭಾಷೆಯ ದೊಡ್ಡ ದೊಡ್ಡ ಸ್ಟಾರ್ ನಟ ನಟಿಯರು ಭಾಗಿಯಾಗಲಿದ್ದಾರೆ.
ಪುನೀತ ಪರ್ವಕಾರ್ಯಕ್ರಮ ಇಂದು ಅದ್ದೂರಿಯಾಗಿ ಸಂಜೆ 6ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದ್ದು. ಈ ಕಾರ್ಯಕ್ರಮಕ್ಕೆ ಗಣ್ಯರ ದಂಡೆ ಸಾಕ್ಷಿಯಾಗಲಿದ್ದಾರೆ. ಅಂದ ಹಾಗೆ ಪುನೀತ್ ರಾಜ್ ಕುಮಾರ್ ಮತ್ತು ರಾಜ್ ಇಡೀ ಕುಟುಂಬದವರು ಈ ಕಾರ್ಯಕ್ರಮದ ವಹಿಸಿಕೊಂಡಿದ್ದಾರೆ. ಇನ್ನು ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಎಲ್ಲಾ ನಟ ನಟಿಯರಿಗೆ ಆಹ್ವಾನ ಕಳುಹಿಸಲಾಗಿದೆ.
ದರ್ಶನ್, ಸುದೀಪ್, ಯಶ್, ಉಪೇಂದ್ರ, ಧ್ರುವ ಸರ್ಜಾ, ರವಿಚಂದ್ರನ್, ಜಗ್ಗೇಶ್, ಸೇರಿದಂತೆ ಎಲ್ಲರೂ ಕೂಡ ಈ ಸುಂದರ ಕಾರ್ಯಕ್ರಮದಲ್ಲಿ ಭಾಗಿಯಾಗಳಿದ್ದಾರೆ. ಇನ್ನು ದರ್ಶನ್ ಅವರನ್ನ ಮಧ್ಯಮದವರೊಬ್ಬರು ನೀವು ಸಹ ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೀರಾ ಎನ್ನುವ ಪ್ರೆಶ್ನೆಯನ್ನು ಕೇಳಿದ್ದಕ್ಕೆ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸುಚಿಸುವ ಈ ಕಾರ್ಯಕ್ರಮಕ್ಕೆ ನಾನು ಮಾತ್ರವಲ್ಲ, ಪ್ರತಿಯೊಬ್ಬರು ಬಂದು ಕಾರ್ಯಕ್ರಮ ಯಶಸ್ವಿಗೊಳಿಸಬೇಕು.
ಗಂಧದ ಗುಡಿ ಡಾಕ್ಯೂಮೆಂಟರಿ ಕನ್ನಡದ ಹೆಮ್ಮೆಯ ಚಿತ್ರ ಎನ್ನುವ ಮಾತು ಹೇಳಿದ್ದಾರಂತೆ. ಇನ್ನು ಈ ಕಾರ್ಯಕ್ರಮಕ್ಕೆ ಸುದೀಪ್ ಕೂಡ ಭಾಗವಹಿಸುತ್ತಿದ್ದಾರೆ. ಇಬ್ಬರನ್ನು ಒಂದೇ ವೇದಿಕೆಯ ಮೇಲೆ ನೋಡಲು ಇಡೀ ಚಿತ್ರರಂಗ ನೀವು ಸಹ ಇಬ್ಬರನ್ನು ಒಟ್ಟಿಗೆ ನೋಡಲು ಕಾಯುತ್ತಿದ್ದೀರಾ. ಕಾಮೆಂಟ್ ಮಾಡಿ ನಮಗೆ ತಿಳಿಸಿ ಧನ್ಯವಾದಗಳು.