ಪುನೀತ ಪರ್ವ ಕಾರ್ಯಕ್ರಮಕ್ಕೆ ಬೇರೆ ಭಾಷೆಗಳ ಕಲಾವಿದರು ಬಂದರೂ, ದರ್ಶನ ಹಾಗೂ ಸುದೀಪ್ ಆಮಂತ್ರಣ ಕೊಟ್ಟರು ಬರಲಿಲ್ಲ ಯಾಕೆ? ನಿಜಕ್ಕೂ ಬೇಸರದ ಸಂಗತಿ

ನಮಸ್ತೆ ಪ್ರೀತಿಯ ವೀಕ್ಷಕರೆ ಮೊನ್ನೆ ಅರಮನೆ ಮೈದಾನದಲ್ಲಿ ಪುನೀತ ಪರ್ವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಬಹು ನಿರೀಕ್ಷಿತ ಗಂಧದಗುಡಿ ಚಿತ್ರದ ಪ್ರೀ ರಿಲೀಸ್ ಇವೆಂಟ್ ಇದಾಗಿದ್ದು, ಅರಮನೆ ಮೈದಾನದಲ್ಲಿ ತಾರಾ ಲೋಕವೇ ಧರೆಗಿಳಿದಿತ್ತು. ಕನ್ನಡ ಚಿತ್ರರಂಗ ಅಷ್ಟೇ ಅಲ್ಲದೇ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದ ನಟ, ನಟಿಯರು, ನಿರ್ದೇಶಕರು, ಗಾಯಕರು ಸಮಾರಂಭದಲ್ಲಿ ಹಾಜರಾಗಿದ್ದರು. ಈ ವೇಳೆ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್, ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಆ್ಯಂಬುಲೆನ್ಸ್ ನೀಡುವುದಾಗಿ ಘೋಷಿಸಿದ್ರು.

ಇನ್ನು ವಿಡಿಯೋ ಸಂದೇಶ ಕಳಿಸಿದ ಬಾಲಿವುಡ್ ಹಿರಿಯ ನಟ ಬಿಗ್ ಬಿ ಅಮಿತಾಭ್ ಬಚ್ಚನ್, ಪುನೀತ್ ರಾಜ್‌ಕುಮಾರ್‌ ಅಕಾಲಿಕ ಮರಣಕ್ಕೆ ಸಂತಾಪ ಸೂಚಿಸಿದ್ರು.ಪುನೀತ ಪರ್ವ’ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ಶಿವರಾಜ್‌ ಕುಮಾರ್‌ ರಾಘವೇಂದ್ರ ರಾಜ್‌ಕುಮಾರ ಹಾಗೂ ಡಾ. ರಾಜ್‌ಕುಮಾರ್ ಕುಟುಂಬಸ್ಥರು ಭಾಗಿಯಾಗಲಿದ್ದಾರೆ. ಜೊತೆಗೆ ಕನ್ನಡ ಚಿತ್ರರಂಗದ ಮಾತ್ರವಲ್ಲದೇ ಭಾರತೀಯ ಚಿತ್ರರಂಗದ ಅನೇಕ ಗಣ್ಯರು ಗಂಧದ ಗುಡಿ’ ಪ್ರೀ-ರಿಲೀಸ್‌ ಇವೆಂಟ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಲಕ್ಷಾಂತರ ಅಭಿಮಾನಿಗಳ ಅಭಿಮಾನದ ಪ್ರವಾಹದ, ಕೇಕೆ, ಜಯಘೋಷ, ಧ್ವನಿ ಬೆಳಕಿನ ಚಿತ್ತಾರದ ನಡುವೆ ಪುನೀತ ಪರ್ವ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ವೈಭವದಿಂದ ನಡೆದಿತ್ತು. ಪುನೀತ್ ಭಾವಚಿತ್ರವಿದ್ದ ಬಿಳಿಯ ಧ್ವಜ, ಕನ್ನಡಧ್ವಜ, ಮಿನುಗು ದೀಪದ ಭಾವಚಿತ್ರ ಹಿಡಿದು ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಚಿತ್ರರಂಗದ ತಾರೆಯರು, ಅಭಿಮಾನಿಗಳು ಶ್ವೇತ ವಸ್ತ್ರಧಾರಿಗಳಾಗಿ ಕಂಗೊಳಿಸಿ ಅಪ್ಪು ಅವರಿಗೆ ಗೌರವ ಸಲ್ಲಿಸಿದರು.

ಅಭಿಮಾನಿಗಳೇ ನಮ್ಮನೆ ದೇವ್ರು… ಜಾಕಿ ಜಾಕಿ ಜಾಕಿ…ಗಾನ ಬಜಾನಾ… ನೀನೇ ನೀನೇ ಮನಸ್ಸೆಲ್ಲಾ ನೀನೇ.. ಹಾಡುಗಳು ಧ್ವನಿವರ್ಧಕದಲ್ಲಿ ಮೊಳಗುತ್ತಿದ್ದಂತೆ ಪ್ರೇಕ್ಷಕರಲ್ಲಿ ಭಾವೋದ್ದೀಪನವಾಗುತ್ತಿತ್ತು. ಕೆಲವೊಮ್ಮೆ ಅರಿವಿಲ್ಲದೆ ಹೆಜ್ಜೆ ಹಾಕುತ್ತಿದ್ದರು. ಒಮ್ಮೆ ಮೌನವಾಗುತ್ತಿದ್ದರು. ಪುನೀತ್ ಅವರ ಬೃಹತ್ ಕಟೌಟ್ ಗಳು ಹಾಡುಗಳ ಭಾವಕ್ಕೆ ಸ್ಪಂದಿಸಿದಂತೆ ಭಾಸವಾಯಿತು. ಅಪ್ಪು ಅಪ್ಪು ಘೋಷಣೆ ಪದೇಪದೇ ಮೊಳಗಿತು. ನೂರಾರು ಕ್ಯಾಮೆರಾಗಳು ಪ್ರೇಕ್ಷಕರ ಭಾವ ಸೆರೆ ಹಿಡಿದವು.

ಇನ್ನು‌ ಪುನೀತ ಪರ್ವ ಕ್ಕೆ ಒಂದೇ ಕಾರ್ಯಕ್ರಮದಲ್ಲಿ ಸುದೀಪ್ ದರ್ಶನ್ ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಅಂದು ನಟ ದರ್ಶನ್ ಮಾಡಿದ್ದ ಅದೊಂದು ಟ್ವೀಟ್ ಕನ್ನಡ ಚಿತ್ರರಂಗಕ್ಕೆ ಶಾಕ್ ಕೊಟ್ಟಿತ್ತು.2017 ಮಾರ್ಚ್ 17. ದರ್ಶನ್ ಹಾಗೂ ಸುದೀಪ್ ಮರೆಯಲಾಗದ ದಿನ. ಅಂದು ಸಂಜೆ ನಟ ದರ್ಶನ್ ಒಂದು ಟ್ವೀಟ್ ಮಾಡಿದ್ದರು. ನಾನು ಮತ್ತು ಸುದೀಪ್ ಇನ್ಮುಂದೆ ಸ್ನೇಹಿತರಲ್ಲ. ನಾವು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ನಟರು ಮಾತ್ರ. ದಯವಿಟ್ಟು ಯಾವುದೇ ಊಹಾಪೋಹಗಳು ಬೇಡ. ಇದು ಇಲ್ಲಿಗೆ ಮುಗಿಯಿತು ಎಂದು ದರ್ಶನ್ ಸುದೀಪ್ ಜೊತೆಗಿನ ಸ್ನೇಹವನ್ನು ಕಡಿದುಕೊಂಡಿದ್ದರು.

ಅಲ್ಲಿಗೆ ಆ ಸ್ನೇಹ ಮುರಿದು ಬಿದ್ದಿತ್ತು. ಆದರೆ ಮತ್ತೆ ಅವರಿಬ್ಬರು ಒಂದಾಗೋ ಕಾಲ ಕೂಡಿಬಂದಂತಿದೆ. ಎಂದು‌ ಅಭಿಮಾನಿಗಳು ಹೇಳುತ್ತಿದ್ದರು. ಸ್ಯಾಂಡಲ್‌ವುಡ್‌ನ ಇಬ್ಬರು ಸೂಪರ್‌ಸ್ಟಾರ್‌ಗಳು ಒಂದೇ ವೇದಿಕೆ ಏರುತ್ತಾರಾ? ಅನ್ನೋದೇ ದೊಡ್ಡ ಕುತೂಹಲವಾಗಿತ್ತು. ದರ್ಶನ್ ಹಾಗೂ ಸುದೀಪ್ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳದೆ ಹಲವು ವರ್ಷಗಳೇ ಕಳೆದಿವೆ. ಈಗ ಪುನೀತ್ ರಾಜ್‌ಕುಮಾರ್‌ಗಾಗಿ ಇಬ್ಬರೂ ಒಂದೇ ವೇದಿಕೆ ಏರುತ್ತಾರಾ? ಅನ್ನೋದು ಯಕ್ಷ ಪ್ರಶ್ನೆಯಾಗಿಯೇ ಉಳಿದಿತ್ತು. ಆದರೆ, ಅಪ್ಪು ಅಭಿಮಾನಿಗಳು ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರಿಗೂ ಸ್ವಾಗತವನ್ನು ಕೋರಿದ್ದರು. ಆದ್ರೆ ದರ್ಶನ್ ಸುದೀಪ್ ಕೊನೆಗೂ ಬರ್ಲೇ ಇಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಈ ಮಾಹಿತಿಯಾ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ

Leave a Reply

Your email address will not be published. Required fields are marked *